ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.2- ಜಿಲ್ಲಾಯ ಆಲೂರು ತಾಲ್ಲೂಕಿನ ಕರ್ತವ್ಯ ನಿರತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೇ ನಡೆಸಿ ಕಚೇರಿ ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾ.ಪಂ ಪಿಡಿಒಮಹಮದ್ ಎಂಬವರ ಮೇಲೆ ಅದೇ ಗ್ರಾಮದ ಪುಟ್ಟರಾಜು (47). ಕಚೇರಿಗೆ ಬಂದು ಮಚ್ಚಿನಿಂದ ಈ ಹಲ್ಲೇ ನಡೆಸಿ ಇಷ್ಟಕ್ಕೆ ಮಾತ್ರವಲ್ಲದೆ ಕಚೇರಿಯ ಕಂಪ್ಯೂಟರ್, ಕುರ್ಚಿ ಹಾಗೂ ಟೇಬಲ್‍ಗಳಿಗೆ ಹಾನಿಯುಂಟು ಮಾಡಿದ್ದಾನೆ.

ತೀವ್ರ ಗಾಯಗೊಂಡಿರುವ ಪಿಡಿಒ ಮಹಮದ್‍ರವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments