ಹಾಸನದಲ್ಲಿ ವೃದ್ದ ದಂಪತಿಗಳ ಕೊಲೆ ಪ್ರಕರಣ : ಎಲ್ಲಾ ಆರೋಪಿಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಸೆ.6- ಜಿಲ್ಲೆಯ ಆಲಗೊಂಡನಹಳ್ಳಿ ವೃದ್ದ ದಂಪತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.  ಬಂದಿತರಿಂದ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು ಸೇರಿದಂತೆ ಮೃತರ ಮನೆಯಲ್ಲಿ ದೋಚಿದ್ದ 316 ಗ್ರಾಂ ಚಿನ್ನ, 1.25 ಲಕ್ಷ ರೂ.ಮೌಲ್ಯದ ಬೆಳ್ಳಿ, 20 ಸಾವಿರ ರೂ. ಮೌಲ್ಯದ 3 ಮೊಬೈಲï, 3 ಮೋಟಾರು ಬೈಕು, ಅರೋಪಿಗಳಿಂದ 4 ಮೊಬೈಲ್ ಸೇರಿದಂತೆ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಒಡವೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.

ಬೆಂಗಳೂರಿನಲ್ಲಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವಾಹನ ಚಾಲಕ ಬಾಗೂರಿನ ರೇಚಿಹಳ್ಳಿ ಗ್ರಾಮದ ಪ್ರಸಾದ್ ಉರುಫ್ ಗುಂಡ(25) ಎಂಬಾತ ಈ ಪ್ರಕರಣದ ರೂವಾರಿಯಾಗಿದ್ದಾನೆ.

ಲಾಕ್‍ಡೌನ್ ಸಂದರ್ಭದಲ್ಲಿ ಅಣ್ಣೇನಹಳ್ಳಿ ಸಮೀಪದ ಒಂದು ಕೋಳಿ ಫಾರಂನ್ನು ಗುತ್ತಿಗೆ ಪಡೆದು ನಂತರ ಚನ್ನರಾಯಪಟ್ಟಣದ ಸುತ್ತಮುತ್ತ ಜಮೀನು ಮಾರಾಟ ಮಾಡಿರುವವರ ಮಾಹಿತಿ ಪಡೆಯುತ್ತಾ ಈ ಘಟನೆಗೆ ಸಂಚು ರೂಪಿಸಿದ್ದಾನೆ ಎಂದು ಹೇಳಿದರು.

ಆಲಗೊಂಡನಹಳ್ಳಿಯ ವೃದ್ಧರಾದ ಮುರುಳೀಧರ ಅವರು ಜಮೀನು ಮಾರಾಟ ಮಾಡಿರುವುದಾಗಿ ತಿಳಿದು ತೋಟದ ಮನೆಯಾದ್ದರಿಂದ ಹಣ ದೋಚಲ್ಲು 2 ವಾರಗಳ ಕಾಲ ಹೊಂಚು ಹಾಕಿದ್ದಾನೆ. ಇದಕ್ಕೆ ಮುರುಳೀಧರ್‍ರವರ ತೋಟದ ಪಕ್ಕದವನಾಗಿದ್ದ ಬರಗೂರಿನ ನಾಗರಾಜ್ ಮಗ ಮಂಜಶೆಟ್ಟಿ ಸಹಾಯ ಮಾಡಿದ್ದಾನೆ.

ಕೃತ್ಯಕ್ಕೆ ಬೆಂಗಳೂರಿನ ಬನಂಶಂಕರಿಯ ಎಸ್.ವಿ ಯೋಗಾನಂದ್(29), ಚಿಕ್ಕೋನಹಳ್ಳಿ ನಿವಾಸಿ ಪಟ್ಟಣದ ಚನ್ನಿಗರಾಯ ಬಡಾವಣೆಯ ಬಾಬು ಮಗ ಭರತ್(24), ಬರಗೂರು ಕೊಪ್ಪಲಿನ ಮಧು (25) ನೆರವು ನೀಡಿದ್ದಾರೆ ಎಂದುಮಾಹಿತಿ ನೀಡಿದರು. ಪ್ರಕರಣದ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಎಲ್ಲರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Facebook Comments