ಶಾಸಕರಿಂದ ಇಂದಿರಾ ಕ್ಯಾಂಟಿನ್ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

Ramaswamyಅರಕಲಗೂಡು, ನ.6- ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿ ಕಟ್ಟಡ ಕಾಮಗಾರಿಯ ಸ್ಥಿತಿಗತಿಯನ್ನು ಶಾಸಕ ಎ.ಟಿ. ರಾಮಸ್ವಾಮಿ ವೀಕ್ಷಣೆ ಮಾಡಿದರು.ನಂತರ ಮಾತನಾಡಿದ ಶಾಸಕರು, ಪೂರ್ತಿಯಾಗಿ ಕಟ್ಟಡ ಕಾಮಗಾರಿ ಗುಣಮಟ್ಟವಿಲ್ಲದೆ ಕಳಪೆಯಾಗಿ ಹಾಳಾಗುತ್ತಿದೆ. ಸಿಮೆಂಟ್ ಕಾಂಕ್ರಿಟ್ ಕಿತ್ತು ಬರುತ್ತಿದೆ. ಶೌಚಗೃಹ ಬಾಗಿಲುಗಳೇ ಮುರಿದು ಹಾನಿಯಾಗಿವೆ ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಕಟ್ಟಡ ಕಾಮಗಾರಿಯ ಡಿಪಿಆರ್‍ಅನ್ನು ಪಪಂ ಮುಖ್ಯಾಧಿಕಾರಿಗೆ ಸಲ್ಲಿಸಿ ಶೀಘ್ರದಲ್ಲೇ ಕ್ಯಾಂಟಿನ್ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇಲ್ಲಿಯೇ ಎಲ್ಲ ಅಡುಗೆ ಸಿದ್ಧಪಡಿಸಿ ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ನಾನು ಆಗಾಗ ಇಂದಿರಾ ಕ್ಯಾಂಟೀನ್‍ಗೆ ಬಂದು ತಿಂಡಿ ಊಟ ಸೇವಿಸಿ ಇಲ್ಲಿನ ಆಹಾರದ ಗುಣಮಟ್ಟ ಪರೀಕ್ಷಿಸುತ್ತೇನೆ ಎಂದು ಹೇಳಿದರು. ಪಪಂ ಅಧ್ಯಕ್ಷ ಕೆ.ಸಿ. ಲೋಕೇಶ್, ಮುಖ್ಯಾಧಿಕಾರಿ ಸುರೇಶ್ ಬಾಬು, ಎಂಜಿನಿಯರ್ ಕೆ.ಆರ್. ಕವಿತಾ ಮತ್ತಿತರರು ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ