ಮಠಗಳು ರಾಜಕೀಯ ಕೇಂದ್ರಗಳಾಗಬಾರದು : ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

maleshparಬೇಲೂರು, ನ.13- ಮಠ-ಮಂದಿರಗಳು ಶ್ರದ್ಧಾ-ಭಕ್ತಿಯ ಕೇಂದ್ರಗಳಾಗಬೇಕೆ ಹೊರತು ರಾಜಕೀಯ ಕೇಂದ್ರಗಳಾಗಬಾರದು ಎಂದು ಸಿರೆಗೆರೆ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಹನಿಕೆ.ವಿ.ಕೊಪ್ಪಲು ಗ್ರಾಮದಲ್ಲಿ ಶ್ರೀ ಮುರುಘೇಶ್ವರ, ಶ್ರೀ ಮಲ್ಲೇಶ್ವರ ದೇಗುಲದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧಾರ್ಮಿಕ ಭಾವನೆಗಾಗಿ ಪ್ರತಿ ಗ್ರಾಮಗಳಲ್ಲೂ ದೇಗುಲಗಳಿರಬೇಕು. ದೇಗುಲಗಳು ಧಾರ್ಮಿಕ ಭಾವನೆ ಮೂಡಿಸುವ ಭಕ್ತಿಯ ಮನೆಯಾಗಬೇಕೆ ಹೊರತು ಇದರಲ್ಲಿ ರಾಜಕೀಯ ಸುಳಿಯದಂತೆ ಎಚ್ಚರ ವಹಿಸಬೇಕು ಎಂದರು.

ಗ್ರಾಮಗಳು ಉದ್ಧಾರವಾಗಬೇಕೆಂದರೆ ಎಲ್ಲ ಗ್ರಾಮಗಳಲ್ಲೂ ಮದ್ಯಪಾನ ಮುಕ್ತವಾಗಬೇಕು. ಆದರೆ, ಇತ್ತೀಚೆಗೆ ಬುದ್ಧಿವಂತರೆ ಇಂತಹ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂದು ಒಬ್ಬ ವ್ಯಕ್ತಿ ರಾಜಕೀಯವಾಗಿ ಗುರುತಿಸಿಕೊಳ್ಳುವ ಬದಲು ಸಾಮಾನ್ಯ ಮನುಷ್ಯನಾಗಿ ಮಠ-ಮಂದಿರಗಳಲ್ಲಿ ಸೇವಾ ಮನೋಭಾವನೆ ಹೊಂದಿ ಕೆಲಸ ಮಾಡಬೇಕು ಎಂದು ಹೇಳಿದರು.

ಚಿಕ್ಕಮಗಳೂರು ಬಸವ ಮಂದಿರದ ಶ್ರೀ ಜಯ ಬಸವಾನಂದ ಸ್ವಾಮೀಜಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಉತ್ತಮವಾದ ಸಮಾಜ ಕಟ್ಟಿದವರು. ಇವರ ಸಂದೇಶಗಳು ಮನುಕುಲದ ಏಳಿಗೆಗೆ ಹಾಗೂ ಪ್ರತಿಯೊಬ್ಬರ ಶ್ರೇಯೋಬಿವೃದ್ಧಿಗೆ ಮೀಸಲಾಗಿವೆ. ಸಮಾಜದ ಒಳಿತಿಗಾಗಿ ಅವರ ಸಂದೇಶಗಳನ್ನು ಪಾಲಿಸಬೇಕು. ಆದರೆ, ಇಂದು ನಾವುಗಳು ಈ ಮಹಾನ್ ನಾಯಕರುಗಳನ್ನು ಒಂದೊಂದು ಜಾತಿಗೆ ಮೀಸಲಿಟ್ಟು ಅವರನ್ನು ವಿಂಗಡಿಸುವಂತಹ ಕೆಲಸ ಮಾಡುವ ಮೂಲಕ ಅವರ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಇಂದು ದೇಗುಲಗಳು ಭಕ್ತಿಯ ನೆಲೆವೀಡಾಗಬೇಕು. ದೇಗುಲಗಳನ್ನು ಕಟ್ಟಿ ಬಿಡುವುದಲ್ಲ, ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ಮುಂದಿನ ಪೀಳಿಗೆಗೆ ಸಂಸ್ಕøತಿ ಬಿತ್ತುವ ಕೆಲಸವಾಗಬೇಕು ಎಂದರು. ಶಾಸಕ ಸಿ.ಟಿ.ರವಿ, ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿಗೆರೆ ಪ್ರಕಾಶ್, ಜಿಪಂ ಸದಸ್ಯ ಮಂಜಪ್ಪ, ತಾಪಂ ಸದಸ್ಯ ಮಂಜುನಾಥ್, ವೀರಶೈವ ಮಹಾಸಭಾ ತಾ.ಅದ್ಯಕ್ಷ ರಾಜಶೇಖರ್, ಮುಖಂಡ ರಾಜಶೇಖರ್, ಸಾಹಿತಿ ಮಹೇಶ್, ಭುವನೇಶ್, ದೇವಾಲಯ ಸಮಿತಿ ಅಧ್ಯಕ್ಷ ಶಾಂತವೀರಪ್ಪ ಸೇರಿದಂತೆ ಇನ್ನಿತರರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ