ವಿಶ್ವ ಭೂ ದಿನ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿ ಕಚೇರಿಗೆ ಬಂದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಏ.22- ಇಂದು ಸರ್ಕಾರಿ ಅಧಿಕಾರಿಗಳು ತಮ್ಮ ವಾಹನಕ್ಕೆ ರಜೆ ನೀಡಿದ್ದರು….ಹೌದು ಇಂದು ವಿಶ್ವ ಭೂ ದಿನ ಅದ್ದರಿಂದ ಸಾರ್ವಜನಿಕರಲ್ಲಿ ತಾಪಮಾನ ಇಳಿಕೆಗೆ ಅರಿವು ಮೂಡಿಸುವ ಪ್ರಥಮ ಪ್ರಯತ್ನವಾಗಿ ಈ ಒಂದು ವಿನೂತನ ಪ್ರಯೋಗ ಹಾಸನದಲ್ಲಿ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಪ್ರಕಾಶ್ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಮತ್ತು ಸಹೋದ್ಯೋಗಿಗಳು ತಮ್ಮ ಕಚೇರಿಗೆ ಕಾಲ್ನಡಿಗೆಯಲ್ಲಿ ಬಂದರು….

ನಗರದ ಹಸಿರು ಭೂಮಿ ಪ್ರತಿಷ್ಟಾನ, ವಿವಿಧ ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಇಂದು ಕಾಲ್ನಡಿಗೆ ಮತ್ತು ಸೈಕಲ್ ಜಾಥಾ ಮೂಲಕ ಖಾಸಗಿ ವಾಹನ ತ್ಯಜಿಸಿ ಸಾರಿಗೆ ವಾಹನ ಬಳಕೆಗೆ ಸಾರ್ವಜನಿಕರಿಗೆ ಉತ್ತೇಜಿಸುವ ಕಾರ್ಯ ಮಾಡಲಾಯಿತು.

ನಗರದ ಎಲ್ಲಾ ಅಧಿಕಾರಿಗಳು ನೌಕರರು ಸೇರಿ ಹೇಮಾವತಿ ಪ್ರತಿಮೆ ಎದುರು ಸಂಘಟನೆಗೊಂಡರು ನಂತರ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿತು. ನಗರದ ವಿವಿಧ ಇಲಾಖೆಯ ಸರ್ಕಾರಿ ನೌಕರರಿಗೆ ಈ ಒಂದು ದಿನ ತಮ್ಮ ಖಾಸಗಿ ವಾಹನಕ್ಕೆ ರಜೆ ನೀಡಲು ಸೂಚಿಸಲಾಗಿತ್ತು.

ಅದರಂತೆ ವಕೀಲರು, ಕಂದಾಯ, ಜಿಲ್ಲಾಧಿಕಾರಿ,ಜಿ.ಪಂ , ನಗರಸಭೆ, ವಾರ್ತಾ ಇಲಾಖೆ,ನಾನಾ ಸಂಘಟನೆ ಕಾರ್ಯಕರ್ತರು ಸೇರಿದಂತೆ ನೂರಾರು ಸಾರ್ವಜನಿಕರು ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಆವರಣದಲ್ಲಿ ಭೂ ಸಂರಕ್ಷಣೆ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಜವೇನಹಳ್ಳಿ ಕೆರೆಯವರೆಗೆ ಸೈಕಲï ಹಾಗೂ ಕಾಲ್ನಡಿಗೆ ಮೂಲಕ ತೆರಳಿ ಆವರಣದಲ್ಲಿ ಸಸಿ ನಡೆಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಸತ್ರ ನ್ಯಾಯಾಧೀಶರಾದ ತಮ್ಮಣ್ಣಚಾರ್, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ, ಅಪಾರ ಜಿಲ್ಲಾಧಿಕಾರಿ ವೈಶಾಲಿ, ಎಸ್‍ಪಿ ನಂದಿನಿ, ವಾರ್ತಾಧಿಕಾರಿ ವಿನೋದ್‍ಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ