SSLC ಫಲಿತಾಂಶದಲ್ಲಿ ಇತಿಹಾಸ ನಿರ್ಮಿಸಿ “ಪ್ರಗತಿ” ಸಾಧಿಸಿದ ಹಾಸನ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಮಾರ್ಚ್-2019ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 89.33 ಫಲಿತಾಂಶ ಪಡೆಯುವ ಮೂಲಕ ಹಾಸನ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದೆ. ಹಾಸನ ನಗರದ ವಿಜಯ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಭಿನ್ ಬಿ ಮತ್ತು ಪ್ರಗತಿ ಎಮ್ ಗೌಡ ಅವರುಗಳು 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 19,709 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17689 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟು 512 ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲೆಗಳಲ್ಲಿ 86 ಸರ್ಕಾರಿ ಶಾಲೆಗಳು, 16 ಅನುದಾನಿತ ಶಾಲೆಗಳು, 45 ಅನುದಾನರಹಿತ ಶಾಲೆಗಳು ಪ್ರತಿಶತ 100 ಫಲಿತಾಂಶ ಪಡೆದಿರುತ್ತವೆ.

ಕನ್ನಡ ಮಾಧ್ಯಮದಲ್ಲಿ 86.5, ಆಂಗ್ಲ ಮಾಧ್ಯಮದಲ್ಲಿ 94.28, ಉರ್ದು ಮಾಧ್ಯಮದಲ್ಲಿ 43.33 ಫಲಿತಾಂಶ ಬಂದಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ 89.03,ಅನುದಾನಿತ ಶಾಲೆಗಳಲ್ಲಿ 86.88 ಮತ್ತು ಅನುದಾನ ರಹಿತ ಶಾಲೆಗಳಲ್ಲಿ 94.05 ಫಲಿತಾಂಶ ಬಂದಿರುತ್ತದೆ.

ತಾಲ್ಲೂಕುವಾರು ಫಲಿತಾಂಶದಲ್ಲಿ ಸಕಲೇಶಪುರ 91.13, ಆಲೂರು 89.65, ಚನ್ನರಾಯಪಟ್ಟಣ 88.93,ಅರಸೀಕೆರೆ 84.98, ಹೊಳೆನರಸೀಪುರ 84.58, ಹಾಸನ 83.54, ಬೇಲೂರು 77.68 ಫಲಿತಾಂಶ ಬಂದಿರುತ್ತದೆ.

ತಾಲ್ಲೂಕುವಾರು ಫಲಿತಾಂಶದಲ್ಲಿ ಸಕಲೇಶಪುರ ಪ್ರಥಮ ಸ್ಥಾನ ಪಡೆದಿದ್ದು, ಬೇಲೂರು ಕಡೆಯ ಸ್ಥಾನ ಪಡೆದಿರುತ್ತದೆ ಹಾಗೂ ಸಕಲೇಶಪುರದ ಕುಶಾಲನಗರದ ಎಸ್ ಮಾನಸ ಶಾಲೆ ಶೂನ್ಯ ಫಲಿತಾಂಶ ಪಡೆದಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಫಲಿತಾಂಶ; ಡಿ.ಸಿ. ಸಿ.ಇ.ಓ ಅಭಿನಂದನೆ: ಈ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯ ಪ್ರಕಾಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಷ್ಟೊಂದು ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೊಷಕರನ್ನು ಅವರು ಅಭಿನಂದಿಸಿದ್ದಾರೆ. ಇದೇ ಗುಣಮಟ್ಟ ಮುಂದಿನ ದಿನಗಳಲ್ಲಿಯೂ ಕಾಯ್ದಿರಿಸಿಕೊಂಡು ರಾಜ್ಯಕ್ಕೆ ಸದಾ ಮಾದರಿಯಾಗಿರುವಂತೆ ಅವರು ಶುಭ ಹಾರೈಸಿದ್ದಾರೆ.

ಇದೇ ರೀತಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ಅವರು ಸಹ ಎಸ್.ಎಸ್.ಎಲ್.ಸಿ ಫಲಿತಾಂಶದ ಈ ಸಾಧನೆಗೆ ಸಾಹಕರಿಸಿದ ಎಲ್ಲಾರಿಗೂ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Facebook Comments

Sri Raghav

Admin