OMG : ಬೈಕ್‍ಗೆ ಸಿಲುಕಿದರೂ ಬಾಲಕಿ ಗ್ರೇಟ್ ಎಸ್ಕೇಪ್..! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Bike-Accident
ಹಾಸನ, ಫೆ.7-ತಾಯಿ ಜೊತೆ ರಸ್ತೆ ದಾಟುತ್ತಿದ್ದ ಬಾಲಕಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದ್ದು, ಬಾಲಕಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ನಗರದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ನಡೆದಿದೆ.

ಆರಾಧನಾ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿ ಓದುತ್ತಿರುವ ಗಾನವಿ ತಾಯಿ ಜೊತೆಗೆ ಟ್ಯೂಷನ್‍ಗೆ ತೆರಳಲು ರಸ್ತೆ ದಾಟುತ್ತಿದ್ದ ಸಮಯದಲ್ಲಿ ಅರಕಲಗೂಡು-ಹಾಸನ ರಾಜ್ಯ ಹೆದ್ದಾರಿ ದಾಟುವಾಗ ತಾಯಿಯ ಕೈಬಿಟ್ಟು ಮುಂದೆ ಓಡಿಹೋಗಿದ್ದಾಳೆ.

ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನ ಬಾಲಕಿಗೆ ಅಪ್ಪಳಿಸಿ ತುಸು ಎಳೆದುಕೊಂಡು ಹೋಗಿದೆ. ಇದನ್ನು ಕಂಡು ಗಾಬರಿಯಾದ ತಾಯಿ ಹಾಗೂ ಸ್ಥಳೀಯರು ಹೋಗಿ ಬಾಲಕಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯಿಂದ ಪಾರಾಗಿದ್ದಾರೆ.

ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ನೋಡಿದರೆ ಮೈ ಜುಮ್ಮೆನಿಸುತ್ತದೆ. ಪುಟ್ಟ ಮಕ್ಕಳನ್ನು ರಸ್ತೆ ದಾಟಿಸುವಾಗ ಪೆÇೀಷಕರು ಎಚ್ಚರದಿಂದಿರಬೇಕು ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Facebook Comments

Sri Raghav

Admin