ಲೋಕ ಚುನಾವಣೆ : ಹಾಸನದಲ್ಲಿ 310 ದೂರು ದಾಖಲು, 53 ಸಾವಿರ ಲೀಟರ್ ಮದ್ಯ ವಶ
ಹಾಸನ : ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಿ.ವಿಜಲ್ ಅಪ್ಲಿಕೇಶನ್ ಮೂಲಕ ಜಿಲ್ಲೆಯಲ್ಲಿ ಸುಮಾರು 310 ದೂರುಗಳು ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಯಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಮತದಾನಕ್ಕೆ ಅಣಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮುಕ್ತವಾಗಿ ದೂರು ಹಾಗೂ ಸಲಹೆಗಳನ್ನು ಪಡೆಯುವ ಸಲುವಾಗಿ
ಸಿ.ವಿಜಲ್ ಅಪ್ಲಿಕೇಶನ್ ಅನ್ನು ಚುನಾವಣಾ ಘಟಕದಿಂದ ಪರಿಚಯಿಸಲಾಗಿತ್ತು.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. 310 ದೂರುಗಳಲ್ಲಿ 52 ದೂರುಗಳು ಮಾತ್ರ ದಾಖಲಿಸಲು ಯೋಗ್ಯವಾಗಿದ್ದು ಉಳಿದ ದೂರುಗಳನ್ನು ಪರಿಗಣಿಸಲಾಗಿಲ್ಲ ಕಾರಣ ಸೂಕ್ತ ದಾಖಲೆ ಹಾಗೂ ಅಸ್ಪಷ್ಟ ಮಾಹಿತಿ ಪೋಸ್ಟ್ ಮಾಡಲಾಗಿತ್ತ ಎಂದು ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಚುನಾವಣೆ ಮುಗಿಯುವವರಗೆ ಒಟ್ಟು 24 ನೀತಿ ಸಂಹಿತೆ ಉಲ್ಲಂಘನೆ ದಾಖಲಾಗಿದ್ದು ಅಕ್ರಮ ಮದ್ಯ ಸಾಗಣೆ ದೂರಿನಲ್ಲಿ 43,883 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 1.92 ಕೋಟಿ ಎಂದು ಅಂದಾಜಿಸಲಾಗಿದೆ.
ಚುನಾವಣೆ ವೇಳೆ ದಾಖಲೆ ರಹಿತ ಹಣ ಸಾಗಣೆ ಮಾಡಲಾಗಿದ್ದು ಹಲವು ಚೆಕ್ ಪೋಸ್ಟ್ಗಳಿಂದ ಸುಮಾರು 25,45,300 ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಹಣ ಸಾಗಣೆ ವೇಳೆ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದು ಬಹುತೇಕ ರೈತರು ಹಾಗೂ ದಿನನಿತ್ಯದ ವಹಿವಾಟಿನ ಪ್ರಕರಣಗಳು ದಾಖಲಾಗಿವೆ.
ಇನ್ನೊಂದು ವಾರದಲ್ಲಿ ವಶಕ್ಕೆ ಪಡೆದಿರುವ ಹಣದ ಬಗ್ಗೆ ಅವರಿಂದ ಮಾಹಿತಿ ಪಡೆದುಪ್ರಕರಣ ತ್ಯರ್ಥಗೊಳಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದರು.