ಹಾಸನ- ಸಕಲೇಶಪುರ ಹೆದ್ದಾರಿ ತಾತ್ಕಾಲಿಕ‌ ದುರಸ್ಥಿ, ಚತುಷ್ಪಥ ರಸ್ತೆ ಕಾಮಗಾರಿ ಇನ್ನಷ್ಟು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಹಲವು ತಿಂಗಳಿಂದ ತೀವ್ರ ಹದಗೆಟ್ಟಿದ್ದ ಹಾಸನ- ಸಕಲೇಶಪುರ ರಾಷ್ಟೀಯ ಹೆದ್ದಾರಿ 75 ರ ಗುಂಡಿಗಳನ್ನು‌ ಮುಚ್ವುವ ಮೂಲಕ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ಪ್ರಯಾಣಿಕರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ ಎನ್ನಬಹುದು.

ಸುಮಾರು 40 ಕಿಮೀ ದೂರದ ರಸ್ತೆ ಮಾರ್ಗದ ರಸ್ತೆಯಲ್ಲಿ ಬಾಯ್ತೆರೆದಿರುವ ಬಹುತೇಕ ದೊಡ್ಡ ಗುಂಡಿಗಳಿಗೆ ತೇಪೆ‌ ಹಾಕುವ ಡಾಂಬರೀಕರಣ ಮಾಡಲಾಗುತ್ತಿದೆ. ಆದರೆ ಸಣ್ಣಪುಟ್ಟಗುಂಡಿಗಳು ಇದ್ದು ಇವನ್ನು ತಪ್ಪಿಸಿ ಚಾಲನೆ ಮಾಡುವಾಗ ಅನೇಕ ಅಪಘಾತ ಸಂಭವಿಸಿದೆ .

ಸ್ಥಳೀಯ ಸಂಘಟನೆಗಳ ಪ್ರತಿಭಟನೆಯ ಕಾರಣ ಇಂದು ರಸ್ತೆ ಕಾಮಗಾರಿ‌ ಮಾಡಲಾಗುತ್ತಿದೆಯಾದರೂ ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ. ದಿನನಿತ್ಯ ಇಲ್ಲಿ ಸಾವಿರಾರು ವಾಹನ ಸಂಚಾರವಿರುವ ಕಾರಣ‌ ರಸ್ತೆಯು‌ ಮತ್ತೆ ಯಥಾಸ್ಥಿತಿ ಗೆ ಮರಳಲು ಹೆಚ್ಚಿನ ದಿನ ಬೆಕಿಲ್ಲಾ..

# ಕಾಮಗಾರಿ ಪ್ರಾರಂಭ ಇನ್ನಷ್ಟು ವಿಳಂಬ;
ಇನ್ನು ನಾಲ್ಕುಪಥದ ರಸ್ತೆ ಕಾಮಗಾರಿ ಮತ್ತೆ ಪ್ರಾರಂಭವಾಗುವ ಯಾವ ಲಕ್ಷಣವು ಕಾಣುತ್ತಿಲ್ಲಾ. ಕಾಮಗಾರಿಗೆ ಬಳಸಲಾಗುತ್ತಿದ್ದ ಯಂತ್ರಗಳು ಇನ್ನೂ ರಸ್ತೆ‌ಯ ಮಧ್ಯದಲ್ಲಿ ತುಕ್ಕುಹಿಡಯುತ್ತಿದೆ ಅಲ್ಲದೆ ಮತ್ತೆ ಕಾಮಗಾರಿ ಪ್ರಾರಂಭಕ್ಕೆ ಮರು ಟೆಂಡರ್‌ ಕರೆಯುವ ಅಗತ್ಯ ವಿದೆ ಆದರೆ ಈ ಒಂದು ಪ್ರಕ್ರಿಯೆಯು ಸಹ ವಿಳಂಬವಾಗಿದೆ.

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ ಹಲವು ಸುತ್ತಿನ‌ ಸಭೆ ನಡೆಸಿದ್ದಾರೆ ಯಾದರೂ ಕಾಮಗಾರಿ ತ್ವರಿತಗತಿಯಲ್ಲಿ ಪ್ರಾರಂಭಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕಿದೆ.

# ಪ್ರಯಾಣಿಕರ ಪರದಾಟ;
ಹಾಸನದಿಂದ ಸಕಲೇಶಪುರ ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಕಳೆದ ವರ್ಷ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಆದರೆ ಟೆಂಡರ್ ಪಡೆದು ಕಾಮಗಾರಿ ಪ್ರಾರಂಭಿಸಿದ ಗುತ್ತಿಗೆದಾರರ ಬೇಜವಾಬ್ದಾರಿ ಕಾರಣ ಇಂದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಈ ಮಾರ್ಗದ ರಸ್ತೆ ಸುಮಾರು 40 ಕಿಮೀ ಇದ್ದು ಧ್ವಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಗೆ ವಿಸ್ತರಣೆಗೆ ಕಾಮಗಾರಿ ಪ್ರಾರಂಭವಾಯಿತು ಆದರೆ ಕಾಮಗಾರಿ ಪ್ರಾರಂಭವಾದ ಬಳಿಕ ರಸ್ತೆ ಬದಿಯ ಸಾವಿರಾರು ಮರಗಳ ಮಾರಣ ಹೋಮದ ಬಳಿಕ ಬಟಬಯಲಾದ ರಸ್ತೆ ಪಕ್ಕದಲ್ಲಿ ರಾಶಿ ಮಣ್ಣು ಸುರಿಯಲಾಗಿ ರಸ್ತೆ ದೂಳುಮಯವಾಗಿದೆ.

ರಸ್ತೆ‌ ಕಾಮಗಾರಿ ವಿಳಂಬವಾದ ಕಾರಣ ಹಳೆಯ ರಸ್ತೆ ಆಳುದ್ದದ ಗುಂಡಿಗಳಿಂದ ಕೂಡಿದ್ದು ದಿನನಿತ್ಯ ಅಪಘಾತಗಳು ಸಂಭವಿಸುತ್ತಲೆ ಇದೆ. ಕೇವಲ ಒಂದು ತಾಸಿನಲ್ಲಿ ಪ್ರಯಾಣಿಸಬಹುದಾಗಿದ್ದ ರಸ್ತೆ ಮಾರ್ಗ ವು ಇಂದು ಎರಡು ತಾಸಾದರು ಪ್ರಯಾಣ ದುಸ್ತರವಾಗಿದೆ.
ದಿನನಿತ್ಯ‌ ಈ ಮಾರ್ಗದಲ್ಲಿ ಸಂಚಾರ ಮಾಡುವ ಹಲವು ಕಚೇರಿಗಳ ನೌಕರ ವರ್ಗಕ್ಕೆ ನರಕಯಾತನೆಯಂತಾಗಿದೆ.

ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ‌ ದೋಷ ವೂ ಸರ್ಕಾರದ ಆಡಳಿತ ದೋಷವೂ ರಸ್ತೆ ಕಾಮಗಾರಿ ವರ್ಷಗಳು ಕಳೆದರು‌ ಮುಗಿಯುವ ಯಾವ ಲಕ್ಷಣ‌ಕಾಣುತ್ತಿಲ್ಲಾ‌‌ ; ಸದ್ಯ ಹಾಳುದ್ದ ಬಿದ್ದಿರುವ ಗುಂಡಿಗಳಿಗೆ ತೇಪೆ ಹಾಕುವ ಕಾರ್ಯ‌ಪ್ರಗತಿಯಲ್ಲಿದ್ದು ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದೆ.

ಆದ್ದರಿಂದ ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಕಾಮಗಾರಿ ಶೀಘ್ರವಾಗಿ ಪೂರ್ಣ ಗಿಳಿಸಿ ಪ್ರಯಾಣಿಕರ‌ ಹಿತಕಾಯಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.

ಸಂತೋಷ್ ಸಿ.ಬಿ….‌ಹಾಸನ

Facebook Comments

Sri Raghav

Admin