ಪತ್ರಕರ್ತರಿಗೆ ಆಯುಷ್ ಔಷಧ ಕಿಟ್ ವಿತರಿಸಿದ ಎಸ್ಪಿ ಶ್ರೀನಿವಾಸ ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕೊರೋನಾ ಹಾವಳಿಯ ಸಮಯದಲ್ಲಿ ನಮ್ಮ‌ ಬೆನ್ನೆಲುಬಾಗಿ ನಿಂತಿದ್ದೀರಿ..; ಸಮಾಜದಲ್ಲಿ ಪೊಲೀಸ್ ಇಲಾಖೆಯಂತೆ ಮಾಧ್ಯಮ ಕ್ಷೇತ್ರದ ಮೂಲಕ ಪತ್ರಕರ್ತರ ಜವಾಬ್ದಾರಿಯೂ ಹೆಚ್ಚಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್.ಶ್ರೀನಿವಾಸ ಗೌಡ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಆಯುಷ್ ಇಲಾಖೆಯು ನೀಡಿರುವ ಆಯುರ್ವೇದ ರೋಗ ನಿರೋಧಕ ಔಷಧಿ ಕಿಟ್ ಅನ್ನು ಪತ್ರಕರ್ತರಿಗೆ ವಿತರಿಸಿ ಮಾತನಾಡಿದ ಅವರು ಪತ್ರಕರ್ತರು ಹಾಗೂ ಪೊಲೀಸರ ನಡುವೆ ಬಾಂಧವ್ಯ ಉತ್ತಮವಾಗಿದೆ ನಮ್ಮಂತೆಯೇ ಸದಾಕಾಲವೂ ಸಾಮಾಜಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಇಂದಿನ ಕೊರೋನಾ ಸಂಕಟದಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಅವಶ್ಯ ಎಂದರು.

ಆಯುಷ್ ಇಲಾಖೆಯ ಔಷಧೀಯು ಕೊರೋನಾ ಸೋಂಕು ಹೆಚ್ಚು ಪರಿಣಾಮ‌ ಬೀರದಂತೆ ದೇಹಕ್ಕೆ ಶಕ್ತಿ ನೀಡಲಿದೆ ಇದನ್ನು ನಿಗದಿತ ಪ್ರಮಾಣದಲ್ಲಿ ಬಳಸಲು ಅವರು ಸಲಹೆ ನೀಡಿದರು.

ಈ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರವಿನಾಕಲಗೂಡು, ರಾಷ್ಟ್ರೀಯ ಮಂಡಳಿ ಸದಸ್ಯ ಅತೀಖುರ್ ರೆಹಮಾನ್, ಖಚಾಂಚಿ ರಾಜೇಶ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ನಗರ ಕಾರ್ಯದರ್ಶಿ ಸಿ.ಬಿ. ಸಂತೋಷ್, ವಿವಿಧ ಪತ್ರಿಕೆಗಳ ಸಂಪಾದಕರು, ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಹಾಜರಿದ್ದರು.

Facebook Comments

Sri Raghav

Admin