ಹಾಸನ ಸಂಚಾರಿ ಪೊಲೀಸರ ಎಡವಟ್ಟು..! ಫೋಟೋ ವೈರಲ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಹೇಳೋದನ್ನು ನೀವೆಲ್ಲರೂ ನೋಡೇ ಇದ್ದೀರಿ ಕೇಳಿದ್ದೀರಿ, ಆದ್ರೆ ಹಾಸನ ಸಂಚಾರಿ ಪೊಲೀಸ್ರ ಮದ್ಯಪಾನ ಮಾಡಿ ಜೀವ ಉಳಿಸಿ ಎಂದು ಹೇಳ್ತಿದ್ದಾರೆ..! ಇಷ್ಟಕ್ಕೂ ಅಸಲಿ ಕಥೆ ಏನು ಗೊತ್ತೆ..!?

ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪೊಲೀಸರು ದಂಡವನ್ನೂ ಹಾಕುತ್ತಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಪೊಲೀಸರು ಹೇಳುವುದನ್ನು ನಾವು ನೋಡಿದ್ದೇವೆ. ಆದರೆ ಅದೇ ಪೊಲೀಸರು “ಮದ್ಯಪಾನ ಮಾಡಿ ಜೀವ ಉಳಿಸಿ” ಎಂದು ಜಾಹೀರಾತು ಬರೆದ್ದಾರೆ.

ಇಂತಹುದೇ ಅಚಾತುರ್ಯ ಹಾಸನ ಸಂಚಾರಿ ಪೊಲೀಸ್ ಇಲಾಖೆಯಲ್ಲಿ ನಡೆದಿದೆ. ಹಾಸನ ಸಂಚಾರಿ ಪೊಲೀಸರ ಬ್ಯಾರೀಕೇಡ್‌ನಲ್ಲಿ “ಮದ್ಯಪಾನ ಮಾಡಿ ಜೀವ ಉಳಿಸಿ” ಎಂದು ಬರೆದಿರುವ ಬ್ಯಾರಿಕೇಡ್ ಫೋಟೋ ಪ್ರವಾಸಿ ಮಂದಿರದ ಎದುರು ಇರಿಸಲಾಗಿತ್ತು. ಫೋಟೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಹೆಚ್ಚೆತ್ತರು.

ಇಷ್ಟಕ್ಕೂ ಇಂತಹದೊಂದು ಪ್ರಮಾದಕ್ಕೆ ಕಾರಣವಾಗಿದ್ದಯ ಒಬ್ಬ ಪೈಂಟರ್, ಆತನ ಬ್ಯಾರಿಕೇಡ್ ನಲ್ಲಿ ಬರೆಯುವ ವೇಳೆ ಮಾಡಿರುವ ಅಚಾತುರ್ಯವೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಆತನಿಗೆ ಬ್ಯಾರಿಕೇಡ್ ನ ಒಂದು ಬದಿಯಲ್ಲಿ ‘ಹೆಲ್ಮೆಟ್ ಧರಿಸಿ ಜೀವ ಉಳಿಸಿ’ ಎಂದು ಮತ್ತೊಂದು ಕಡೆಯಲ್ಲಿ ‘ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ’ ಎಂದು ಬರೆಯವಂತೆ ಸೂಚಿಸಲಾಗಿತ್ತು ಆದರೆ ಆತ ‘ಮದ್ಯಪಾನ ಮಾಡಿ ಜೀವ ಉಳಿಸಿ’ ಎಂದು ತಪ್ಪಾಗಿ ಬರೆದಿದ್ದಾನೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತಡವಾಗಿ ಎಚ್ಚೆತ್ತ ಪೊಲೀಸ್ರು ಅದನ್ನು ಬದಲಿಸಿದ್ದಾರೆ.

Facebook Comments

Sri Raghav

Admin