ಈಜಲು ಹೋದ ವಿದ್ಯಾರ್ಥಿಗಳು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

waterಹಾಸನ, ನ.4- ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಶವಗಳು ನಗರದ ಹುಣಸಿನ ಕೆರೆಯಲ್ಲಿ ಪತ್ತೆಯಾಗಿವೆ.ತೇಜೂರು ಗ್ರಾಮದ ಕೌಶಿಕ್ (14) ಹಾಗೂ ಹೊಸ ಕೊಪ್ಪಲು ಗ್ರಾಮದ ಕುಶಾಲ್ (14) ಮೃತಪಟ್ಟ ವಿದ್ಯಾರ್ಥಿಗಳು.

ನ.1ರಂದು ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ 8ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು ರಾಜ್ಯೋತ್ಸವ ಕಾರ್ಯಕ್ರಮವನ್ನು ಮುಗಿಸಿಕೊಂಡು ಮನೆಗೆ ಬಾರದೆ ಪೋಷಕರಿಗೂ ಹೇಳದೆ ಈಜಾಡಲು ನಗರದ ಹುಣಸಿನ ಕೆರೆಗೆ ತೆರಳಿದ್ದಾರೆ.ಮಕ್ಕಳು ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಪೋಷಕರು ಬಡಾವಣೆ ಪೊಲೀಸ್ ಠಾಣೆಗೆ ಮಕ್ಕಳು ಕಾಣೆಯಾಗಿರುವುದರ ಬಗ್ಗೆ ದೂರು ನೀಡಿದ್ದಾರೆ.

ಇಂದು ಬೆಳಗ್ಗೆ ಹುಣಸಿನ ಕೆರೆಯಲ್ಲಿ ಮೃತ ದೇಹಗಳು ತೇಲುತ್ತಿದ್ದು , ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ