ಹಾವೇರಿಯಲ್ಲಿ ಕೊರೊನಾತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಹಾವೇರಿ, ಜ.4- ಶಾಲೆ ಆರಂಭದ ಬೆನ್ನಲ್ಲೇ ರಾಣೆಬೆನ್ನೂರಿನ ಎರಡು ಶಾಲೆಗಳ ಇಬ್ಬರು ಶಿಕ್ಷಕರಿಗೆ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾ ಆರ್ಭಟ ಕಡಿಮೆಯಾಗಿ ನಿಟ್ಟು ಸಿರು ಬಿಡುತ್ತಿದ್ದಂತೆ ಮತ್ತೆ ಆತಂಕ ಎದುರಾಗಿದೆ. ಕೋವಿಡ್ ಪಾಸಿಟೀವ್ ಬಂದ ಶಿಕ್ಷಕರಿಗೆ ಶಾಲೆಯಲ್ಲಿ ಐಸೊಲೇಷನ್ ಸೆಂಟರ್‍ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎರಡು ಶಾಲೆಗಳ 23 ಮಕ್ಕಳಿಗೂ ಕೊರೊನಾ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ. ರಾಣೆಬೆನ್ನೂರಿನ ಒಂದು ಸರ್ಕಾರಿ ಮತ್ತು ಒಂದು ಖಾಸಗಿ ಶಾಲೆಯ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಂದಾನಪ್ಪ ವಡಗೇರಿ ತಿಳಿಸಿದ್ದಾರೆ.

Facebook Comments