ಎಪಿಎಂಸಿ ಮಾರುಕಟ್ಟೆಗೆ ಕಂಟಕನಾದನೇ ಹಾವೇರಿ ಲಾರಿ ಚಾಲಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ನಗರದ ಎಪಿಎಂಸಿ ಮಾರುಕಟ್ಟೆಗೆ ಹಾವೇರಿ ಮೂಲದ ಲಾರಿ ಚಾಲಕನೇ ಕಂಟಕನಾಗಿ ಪರಿಣಮಿಸಿದ್ದಾನೆ. ಹಲವಾರು ಬಾರಿ ಮುಂಬೈಗೆ ಹೋಗಿ ಬಂದಿದ್ದ ಹಾವೇರಿ ಮೂಲದ ಲಾರಿ ಚಾಲಕನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಈತ ಅನಾನಸ್ ತುಂಬಿಕೊಂಡು ನಗರದ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ.

ಹೀಗಾಗಿ ಈ ಚಾಲಕನೇ ಎಪಿಎಂಸಿ ಮಾರುಕಟ್ಟೆಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಮೇ 5, 8, 12ರಂದು ಹಲವು ಬಾರಿ ಮುಂಬೈಗೆ ಪ್ರಯಾಣ ಬೆಳೆಸಿದ್ದ ಲಾರಿ ಚಾಲಕ ಹಾವೇರಿ ಜಿಲ್ಲಾಡಳಿತದ ಕಣ್ಣಿಗೆ ಮಣ್ಣೆರಚಿದ್ದ.

ಚಾಲಕ ಹಲವಾರು ಬಾರಿ ಮುಂಬೈಗೆ ಹೋಗಿ ಬಂದಿದ್ದರಿಂದ ಮನೆ ಮಾಲೀಕರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪಟ್ಟು ಹಿಡಿದಿದ್ದರು. ಹೀಗಾಗಿ ಚಾಲಕ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯ ಹಾವೇರಿ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಾಲಕ ಎಪಿಎಂಸಿಗೆ ಅನಾನಸ್ ತರುವುದರ ಜತೆಗೆ ಕೊರೊನಾ ವೈರಸ್‍ಅನ್ನೂ ತಂದು ಹರಡಿದ್ದಾನೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಆತ ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಓಡಾಡಿದ್ದ, ಯಾರ ಜತೆ ಸಂಪರ್ಕವಿರಿಸಿಕೊಂಡಿದ್ದ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

Facebook Comments

Sri Raghav

Admin