ಭಾರತದ ಶ್ರೀಮಂತ ಮಹಿಳೆಯಾಗಿ ಹೊರ ಹೊಮ್ಮಿದ ರೋಷಿಣಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.17- ಎಚ್‍ಸಿಎಲ್ ಟೆಕ್ನಾಲಜಿಸ್‍ನ ನೂತನ ಅಧ್ಯಕ್ಷೆಯಾಗಿರುವ ರೋಷಿಣಿ ನಾದರ್ ಮಲ್ಹೋತ್ರ ದೇಶದ ಶ್ರೀಮಂತ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ.

ಮಾಹಿತಿ ತಂತ್ರಜ್ಞಾನದಲ್ಲಿ ದೊಡ್ಡ ಹೆಸರು ಮಾಡಿದ್ದ ಎಚ್‍ಸಿಎಲ್ ಗ್ರೂಪ್‍ನ ಶಿವ ನಾದರ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ತಕ್ಷಣ ಅವರ ಏಕೈಕ ಪುತ್ರಿ ರೋಷಿಣಿ ನಾದರ್ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ.

38 ವರ್ಷದ ರೋಷಿಣಿ ನಾದರ್ ಎಚ್‍ಸಿಎಲ್ ಕಂಪೆನಿಯಲ್ಲಿ ಸಿಇಒ ಮತ್ತು ಕಾರ್ಯನಿವಾಹಕ ನಿರ್ದೇಶಕರಾಗಿ ಈ ಮೊದಲು ಕೆಲಸ ಮಾಡುತ್ತಿದ್ದರು.

ಅಮೆರಿಕಾದ ನಾರ್ತ್‍ವೆಸ್ಟ್ರನ್ ವಿಶ್ವವಿದ್ಯಾಲಯದಲ್ಲಿ ರೆಡಿಯೋ, ಟಿವಿ, ಫಿಲ್ಮ್‍ಂ ಕಮ್ಯೂನಿಕೇಷನ್‍ನಲ್ಲಿ ಪದವಿ ಪಡೆದಿದ್ದರು. ಕೆಲೋಗ್ ಕಾಲೇಜಿನಿಂದ ಸಾಮಾಜಿಕ ಉದ್ಯಮದಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದಿದ್ದರು.

ತಂದೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆ ಸಂಸ್ಥೆಯ ಅಧ್ಯಕ್ಷಗಾದಿಗೇರಿದ ರೋಷಿಣಿಯ ಆಸ್ತಿ ಮೌಲ್ಯ 36,800 ಕೋಟಿ ಎಂದು ಅಂದಾಜಿಸಲಾಗಿದೆ.

ವಿಶ್ವದ 54 ಪ್ರಭಾವಿ ಮಹಿಳೆಯರ ಪೈಕಿ ರೋಷಿಣಿ ಕೂಡ ಸ್ಥಾನ ಪಡೆದಿದ್ದಾರೆ. ಈಗ ಭಾರತ ದೇಶದಲ್ಲೇ ಶ್ರೀಮಂತ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ಧಾರೆ.

Facebook Comments

Sri Raghav

Admin