ಪೇಜಾವರ ಶ್ರೀಗಳು ಸಮಾಜ ಬದಲಾವಣೆಗೆ ಶ್ರಮಿಸಿದ್ದರು : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಶ್ರಮಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.  ನಗರದ ವಿದ್ಯಾಪೀಠದಲ್ಲಿ ಶ್ರೀ ವಿಶ್ವೇಶ್ವತೀರ್ಥರ ಬೃಂದಾವನಕ್ಕೆ ಭಕ್ತಿಪೂರ್ವಕ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಮಠದಲ್ಲೆ ಇಫ್ತಿಯಾರ್ ಕೂಟ ಮಾಡಿ ಸಮಾಜಕ್ಕೆ ಸುಧಾರಣೆಯನ್ನು ತೋರಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.

ಶ್ರೀಗಳು ತಮ್ಮ ಪರ್ಯಾಯದಲ್ಲಿ ಅನೇಕ ಕೆಲಸ ಮಾಡಿದ್ದಾರೆ. ದಲಿತ ಕೇರಿಗೆ ಹೋಗಿ ಅಸ್ಪಶ್ಯತೆ ನಿವಾರಣೆ ಕೆಲಸ ಮಾಡಿದ್ದು ತೋರಿಕೆಗಲ್ಲ. ಅನೇಕ ಬಾರಿ ನಾನು, ನನ್ನ ಪತ್ನಿ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ. ಬೃಂದಾವನಕ್ಕೆ ಬಂದು ನಮನ ಸಲ್ಲಿಸಿದ್ದೇನೆ. ನನಗೂ ಕೃಷ್ಣ ಮಠಕ್ಕೂ 40 ವರ್ಷಕ್ಕಿಂತ ಹೆಚ್ಚು ಒಡನಾಟವಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆದಾಗ ನಾನು ಹೋಗಿದ್ದೆ. ಅನೇಕ ಬಾರಿ ಶ್ರೀಗಳನ್ನು ಭೇಟಿ ಮಾಡಿ ದರ್ಶನ ಮಾಡಿಕೊಂಡು ಬಂದಿದ್ದೇನೆ ಎಂದರು.

ಶ್ರೀಗಳು ಕೃಷ್ಣನ ಸಾನಿಧ್ಯ ಸೇರಿದಾಗ ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಹೀಗಾಗಿ ಬರೋದಕ್ಕೆ ಆಗಿರಲಿಲ್ಲ. ಮಾಧ್ಯಮಗಳಲ್ಲಿ ಶ್ರೀಗಳ ಕೃಷ್ಣೈಕ್ಯ ಕಾರ್ಯಕ್ರಮ ನೋಡುತ್ತಿದ್ದೇ ಎಂದು ಹೇಳಿದರು.  ಕಳೆದ 3 ತಿಂಗಳ ಹಿಂದೆ ಉಡುಪಿಗೆ ಚಿಕಿತ್ಸೆಗೆ ಹೋಗಿದ್ದೆ. ಆಗ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ಶ್ರೀಗಳು ಉತ್ತರಾಧಿಕಾರಿಯಾಗಿ ಚಿಕ್ಕವರನ್ನು ನೇಮಕ ಮಾಡಿದ್ದಾರೆ. ಇಂತಹ ಘಟನೆ ಆಗುತ್ತೆ ಅಂತ ನಾನು ಊಹೆ ಮಾಡಿರಲಿಲ್ಲ. ಈ ಘಟನೆ ನಂಬೋದಕ್ಕೆ ಆಗುತ್ತಿಲ್ಲ. ಆದರೆ ಕೃಷ್ಣ ಕರೆದಾಗ ಹೋಗಲೇಬೇಕು. ಇದು ಜಗತ್ತಿನ ಸೃಷ್ಟಿ ನಿಯಮ ಅಲ್ಲವೇ ಎಂದರು.

ಶ್ರೀಗಳ ಕನಸಿನಂತೆ ವಿದ್ಯಾಪೀಠದಲ್ಲಿ ಬೃಂದಾವನ ಆಗಿದೆ. ಶ್ರೀಗಳು ಅನೇಕ ಸಾರಿ ನನ್ನನ್ನ ಕರೆದು ದೆಹಲಿಯಲ್ಲಿ ಮಠ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು. ನರಸಿಂಹರಾವ್ ಪ್ರಧಾನಿಯಾಗಿದ್ದ ಕಾಲದಲ್ಲಿ ಜಾಗ ಕೇಳಿದ್ದರು. ನಾನು ಪ್ರಧಾನಿಯಾದಾಗ ಅತ್ಯಂತ ಕಡಿಮೆ ಮೊತ್ತದಲ್ಲಿ ಜಾಗ ಕೊಟ್ಟಿದ್ದಾಗಿ ಹೇಳಿದರು. ಇದನ್ನ ಶ್ರೀಗಳು ಅನೇಕ ಬಾರಿ ಹೇಳಿದ್ದಾರೆ. ನಾನು ಇದನ್ನು ಹೇಳಿಬೇಡಿ ಅಂತ ಹೇಳಿದ್ದೆ. ಶ್ರೀಗಳ ಒಡನಾಡವನ್ನು ದೇವೇಗೌಡರು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಹಾಜರಿದ್ದರು.

Facebook Comments