ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿ ಅಪಾರ : ಎಚ್.ಡಿ. ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.4- ಮೈಸೂರು ಮತ್ತು ಬೆಂಗಳೂರು ನಗರಗಳು ದೇಶದ ಮುಂಚೂಣಿ ನಗರಗಳಾಗಿರಲು ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯೇ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಗೌಡರು, ಒಡೆಯರ್ ಅವರು ತಮ್ಮ ಬದುಕಿನಾದ್ಯಂತ ಕನ್ನಡಿಗರ ಬದುಕನ್ನು ಹಸನು ಮಾಡಲು ದುಡಿದ ದೊರೆ ಎಂದು ಶ್ಲಾಘಿಸಿದ್ದಾರೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನವಾದ ಇಂದು ಅವರನ್ನು ಸ್ಮರಿಸಿ ಅವರಂತೆಯೇ ನಿಸ್ವಾರ್ಥವಾಗಿ ನಾಡಿಗಾಗಿ ದುಡಿಯುವ ಛಲವನ್ನು ಮೈಗೂಡಿಸಿಕೊಳ್ಳೋಣ ಎಂದು ಹೇಳಿದ್ದಾರೆ.

Facebook Comments