“ಚುನಾವಣೆಗೆ ನಿಲ್ಲಬಾರದೆಂದು ಮನಸ್ಸುಗಟ್ಟಿ ಮಾಡಿದ್ದೆ, ಆದರೆ…”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.9- ಭಾರತದಲ್ಲಿ ಯಾರು ಪ್ರಶ್ನೆ ಮಾಡದಂತೆ ನಡೆದುಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಇನ್ನು ಮುಂದೆಯೂ ಯಾರೂ ಪ್ರಶ್ನೆ ಮಾಡದಂತೆ ನಡೆದುಕೊಳ್ಳುತ್ತೇನೆ. ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗೆ ಹೋರಾಟ ಮಾಡಿದ್ದೇನೆ ಎಂದರು.

ಸೋಲು ವಿಧಿಯಾಟ. ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲಬಾರದೆಂದು ಮನಸ್ಸುಗಟ್ಟಿ ಮಾಡಿಕೊಂಡಿದ್ದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಮಾಜಿ ಸಚಿವ ಖರ್ಗೆ ಅವರ ಒಂದೇ ಹೆಸರನ್ನು ಘೋಷಣೆ ಮಾಡಿದ್ದರು. ತಮ್ಮೊಂದಿಗೂ ದೂರವಾಣಿ ಮೂಲಕ ಅವರು ಮಾತನಾಡಿದ್ದರು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ದೆಹಲಿಯಲ್ಲಿ ನಮ್ಮ ಪಕ್ಷವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಅವರು ಕೂಡ ನನ್ನ ಬಳಿ ಮಾತನಾಡಿ ನೀವೆ ನಿಲ್ಲಬೇಕು ಎಂದು ಹೇಳಿದ್ದರು. ನಾನು ನಿಲ್ಲೊದೆ ಇಲ್ಲ ನೀವೆ ನಿಲ್ಲಿ ಎಂದು ಹೇಳಿದ್ದರು. ಪಕ್ಷದ ಕಾರ್ಯಕರ್ತರು ಒಮ್ಮತದ ನಿರ್ಧಾರ ತೆಗೆದುಕೊಂಡರು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಅವರ ಒತ್ತಡ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿದೆ. ನೀವು ಒಂದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೀರಿ. ನಾನೂ ನಾಮಪತ್ರ ಹಾಕುತ್ತೇನೆ ಎಂದು ಹೇಳಿದ್ದೆ. ಭಾನುವಾರ ಸೋನಿಯಾ ಗಾಂಧಿ ಅವರ ಜೊತೆಯೂ ಮಾತನಾಡಿದ್ದೆ ಅವರು ಕೂಡ ಸಂತೋಷ ಪಟ್ಟರು ಎಂದರು.

ಈ ಹಿಂದೆ ಯಾವ ಪಕ್ಷದ ಬೆಂಬಲ ಇಲ್ಲದೆ ಚುನಾವಣೆ ಗೆದ್ದಿದ್ದೆ. ಹಲಬಾರು ಬಾರಿ ಸೋತ್ತಿದ್ದೇನೆ, ಗೆದ್ದಿದ್ದೇನೆ. ವಯಸ್ಸಾಯ್ತು ನೀನೆ ನಿಂತುಕೋ ಎಂದು ಕುಮಾರಸ್ವಾಮಿಗೆ ಹೇಳಿದ್ದೆ. ನಾನು ಅವಿರೋಧವಾಗಿ ಆಯ್ಕೆಯಾಗಲು ಬಿಜೆಪಿ ಸಹಕಾರವೂ ಇದೆ. ಅವರ ಪಕ್ಷದಲ್ಲಿ ಅಷ್ಟೆಲ್ಲಾ ಹೋರಾಟ ಇದ್ದರೂ ಸಾಮಾನ್ಯ ಕಾರ್ಯಕರ್ತರನ್ನು ಕಣಕ್ಕಿಳಿಸಿವೆ.

ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಹಾಕಲಿಲ್ಲ. ಬಿಜೆಪಿಯವರು ಯಾರನ್ನೂ ಭೇಟಿ ಮಾಡಿಲ್ಲ. ಯಾರನ್ನು ಕೇಳದೆ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಮಾತನಾಡಲು ಎರಡು ಮೂರು ನಿಮಿಷ ಅಷ್ಟೆ ಅವಕಾಶ ಸಿಗುತ್ತೆ. ಜನರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡುವಾಗ ಯಾರ ದಾಕ್ಷಿಣ್ಯಕ್ಕೂ ಒಳಗಾಗಲ್ಲ. ಅಗತ್ಯ ಬಿದ್ದರೆ ನಿಯೋಗ ಕರೆದುಕೊಂಡು ಹೋಗಲು ಕ್ರಮ ತೆಗೆದುಕೊಳ್ಳುತ್ತೇನೆ.ಇದು ಕೊನೆ ಹೋರಾಟವೋ ಏನೊ ಗೊತ್ತಿಲ್ಲ. ಜೀವನದಲ್ಲಿ ಸಿದ್ಧಾಂತದ ಜೊತೆ ಯಾವುದೇ ರಾಜಿ ಇಲ್ಲ. ನಾಯಕರ ತೀರ್ಮಾನಕ್ಕೆ ತಲೆ ಬಾಗಿದ್ದೇನೆ ಎಂದರು.

ಕೊಬ್ಬರಿ ಬೆಲೆ ಬಿದ್ದಿದೆ. ಹೋರಾಟ ನಡೆಯುತ್ತಿದೆ. ಅದನ್ನ ಚರ್ಚಿಸಲು ಅವಕಾಶ ಸಿಕ್ಕಲಿಲ್ಲ.ರಾಜ್ಯನಾಯಕರಿಗೆ ನಾನು ಶತ್ರು ಅಲ್ಲ. ನಮ್ಮ ಪಕ್ಷದ ಎಲ್ಲಾ ನಾಯಕರು ಒತ್ತಾಯ ಮಾಡಿದರು. ಕಾಂಗ್ರೆಸ್ ನಾಯಕ ವೇಣುಗೋಪಾಲ್ ಕುಮಾರಸ್ವಾಮಿಗೆ ಫೋನ್ ಮಾಡಿದ್ದರು. ನಮ್ಮ ಜಾತ್ಯತೀತ ಹೋರಾಟ ನಡೆಸುತ್ತೇನೆ. ಮಾಜಿ ಸಚಿವ ಅರವಿಂದ ಲಿಂವಾವಳಿ ಮೂರನೆ ಅಭ್ಯರ್ಥಿ ಹಾಕಲ್ಲ ಎಂದಿದ್ದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಶಾಸಕರಾದ ಬಂಡೇಪ್ಪ ಕಾಶೇಂಪುರ್, ಎ.ಟಿ.ರಾಮಸ್ವಾಮಿ, ಸಾ.ರಾ.ಮಹೇಶ್ ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಟಿ.ಎ.ಶರವಣ, ಮಾಜಿ ಸಚಿವ ಎಲ್.ಆರ್.ಶಿವರಾಮರೇಗೌಡ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.

Facebook Comments