ದಣಿವರಿಯದೆ ಪ್ರಚಾರ ಮಾಡಿದ ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.4- ವಿಧಾನ ಪರಿಷತ್ ಚುನಾವಣೆ ಪ್ರಚಾರ ಅಬ್ಬರದಿಂದ ಶುರುವಾಗಿದ್ದು ಇಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಗುಬ್ಬಿ , ಚಿಕ್ಕನಾಯಕನಹಳ್ಳಿ , ತಿಪಟೂರು ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು.
ತುಮಕೂರು ಗ್ರಾಮಾಂತರದ ಶಾಸಕರಾದ ಡಿ.ಸಿ.ಗೌರಿಶಂಕರ್‍ರವರ ಬಳ್ಳಗೆರೆ ನಿವಾಸದಲ್ಲಿ 6 ಗಂಟೆಗೆ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಪ್ರಧಾನಮಂತ್ರಿ ದೇವೇಗೌಡರು ಉದ್ಘಾಟಿಸಿ ಮಾತನಾಡಿದರು.

ಮೊದಲ ಬಾರಿಗೆ ಕಾರ್ಯಕರ್ತರುಗಳಲ್ಲಿ ಸಮಯದ ಅಭಾವದ ಬಗ್ಗೆ ಕ್ಷಮೆ ಯಾಚಿಸಿ ಮಾತನಾಡಿದ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿಯನ್ನು ನಿಗದಿಪಡಿಸಿದ ಪರಿಣಾಮವಾಗಿ ಎಲ್ಲಾ ವರ್ಗದ ಜನರಿಗೆ ರಾಜಕೀಯ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಕಾರಣವಾಗಿತ್ತು.
ಈ ಉದ್ದೇಶದಿಂದಲೇ ತುಮಕೂರು ಜಿಲ್ಲಾಗೆ ಹಿಂದುಳಿದ ವರ್ಗಕ್ಕೆ ಸೇರಿದ ಅನಿಲ್ ಕುಮಾರ್‍ರವರಿಗೆ ಟಿಕೆಟ್ ನೀಡಿದ್ದು, ನಿಮ್ಮೆಲ್ಲರ ಜನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಂಡರು.

ನಮ್ಮ ಮನೆಯ ಬಾಗಿಲಿಗೆ ಬಂದ ಕಾಂಗ್ರೆಸ್ ಮುಖಂಡರ ಮಾತುಗಳಿಗೆ ಮರುಳಾಗಿ ನಾನು ಅವರ ರಾಜಕೀಯ ಕುತಂತ್ರ ಕುತಂತ್ರಕ್ಕೆ ಬಲಿಯಾಗಿದ್ದು ತಮಗೆ ತಿಳಿದಿರುವ ವಿಷಯವೇ. ನನ್ನ ಸೋಲಿಗೆ ಯಾರು ಕಾರಣ ಎಂಬುದು ತಿಳಿದಿದ್ದು ಅವರನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕೆಂದರು.

ಅನಿಲ್ ಕುಮಾರ್‍ರವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಕಳುಹಿಸಿಕೊಡಬೇಕಾಗಿ ಅವರು ವಿನಂತಿಸಿಕೊಂಡರು. ಮಾಜಿ ಸಚಿವ ಚನ್ನಿಗಪ್ಪನವರು ನಮ್ಮ ಜೆಡಿಎಸ್ ಪಕ್ಷಕ್ಕೆ ಅತ್ಯಂತ ನಿಷ್ಠಾವಂತ ಮುಖಂಡರಾಗಿದ್ದು ಅವರು ತುಮಕೂರು ಜೆಡಿಎಸ್ ಪಕ್ಷದ ಕಟ್ಟಡ ನಿರ್ಮಿಸಲು ಬಹಳ ಆರ್ಥಿಕ ಧನ ಸಹಾಯ ಮಾಡಿದ್ದರು. ಇಂಥವರ ಮಗನಾದ ಗೌರಿಶಂಕರ್ ರಾಜ್ಯದಲ್ಲಿ ಕೊರೊನಾ ಬಂದಂತಹ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಜನರಿಗೆ ಮೊದಲ ಬಾರಿಗೆ ನನ್ನನ್ನು ಕರೆಸಿ ಫುಡ್ ಕಿಟ್ ವಿತರಣೆ ಸಂದರ್ಭವನ್ನು ಎಂದಿಗೂ ಮರೆಯಲಾಗುವುದಿಲ್ಲ.

ಈ ಕಾರ್ಯಕ್ರಮವನ್ನು ನಾನು ನನ್ನ ಮಕ್ಕಳಿಗೂ ಸಹ ತಿಳಿಸಿ, ಅದೇ ರೀತಿ ಅವರವರ ಕ್ಷೇತ್ರಗಳಲ್ಲಿ ಫುಡ್ ಕಿಟ್ ವಿತರಣೆ ಕಾರ್ಯಕ್ರಮವನ್ನು ನಡೆಸಲು ತಿಳಿಸಿದ್ದೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸೇರಿದ್ದ ಗ್ರಾಮಾಂತರದ ಜೆಡಿಎಸ್ ಕಾರ್ಯಕರ್ತರು ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗ್ರಾಮಾಂತರದಿಂದ ಗೌರಿಶಂಕರ್ ಅವರನ್ನು ಗೆಲ್ಲಿಸಿ ಕಳುಹಿಸುತ್ತೇವೆ ಹಾಗೂ ಮುಂದಿನ ಸರ್ಕಾರದಲ್ಲಿ ಅವರನ್ನು ಸಚಿವರನ್ನಾಗಿ ಮಾಡಲೇಬೇಕೆಂದು ಒತ್ತಾಯಿಸಿದರು.

ಹಾಗೂ ರಾತ್ರಿ ದೇವೆಗೌಡರು ಅಲ್ಲೇ ವಾಸ್ತವ್ಯ ಹೂಡಿದ್ದು, ಅವರಿಗೆ ಬಸ್ ಸಾರು ರಾಗಿ ಮುz್ದÉ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಹಾಗೂ ಬಂದಿದ್ದಂತಹ ಕಾರ್ಯಕರ್ತರುಗಳಿಗೆ ಭರ್ಜರಿ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

Facebook Comments