ಕಾಂಗ್ರೆಸ್ ಪಾದಯಾತ್ರೆಯ ಕ್ರೆಡಿಟ್, ಡೆಬಿಟ್ ಬಗ್ಗೆ ಯೋಚಿಸಬೇಕಾಗಿಲ್ಲ: ಎಚ್‍ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.8-ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಮಾಡುವ ಪಾದಯಾತ್ರೆಯಿಂದಾಗುವ ಕ್ರೆಡಿಟ್, ಡೆಬಿಟ್ ಬಗ್ಗೆ ಯೋಚಿಸಬೇಕಾಗಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ತಿಳಿಸಿದರು. ಜೆಪಿ ಭವನದಲ್ಲಿಂದು ಜನತಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ಪಾದಯಾತ್ರೆ ಮಾಡಿದರೆ ನಮಗೆ ಕ್ರೆಡಿಟ್ ಬರುತ್ತದೆ ಎಂದು ಕಾಂಗ್ರೆಸ್‍ವರು ಪಾದಯಾತ್ರೆ ಮಾಡುತ್ತಿದ್ದಾರೆ. ಅದರ ಕ್ರೆಡಿಟ್- ಡೆಬಿಟ್ ಬಗ್ಗೆ ಯಾರು ಯೋಚನೆ ಮಾಡಬೇಕಿಲ್ಲ ಎಂದರು.

ನಾವು ಈಗಾಗಲೇ ಯೋಜನೆ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಕಾವೇರಿ ಹೋರಾಟದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮನೆಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಹೀಗಾಗಿ ಸಮಯ ಬಂದಾಗ ನಾವು ಹೋರಾಟ ಮಾಡೋಣ.ಪಕ್ಷದ ಕಾರ್ಯಕರ್ತರು ನಿಷ್ಟೆಯಿಂದ ದುಡಿಬೇಕು. ಅಕಾರಕ್ಕಾಗಿ ಈ ಪಕ್ಷ ಸ್ಥಾಪನೆ ಮಾಡಿಲ್ಲ. ಜಯಪ್ರಕಾಶ್ ನಾರಾಯಣ ಅವರ ಹೋರಾಟದಿಂದ ಈ ಪಕ್ಷ ಬಂದಿದೆ ಹೇಳಿದರು.

ಈ ಪಕ್ಷವನ್ನು ಮುಗಿಸುತ್ತೇನೆ ಎನ್ನುವವರಿಗೆ ಜನತಾ ಪತ್ರಿಕೆ ಮೂಲಕ ಉತ್ತರ ಕೊಡಿ. ಮನೆ ಮನೆಗೆ ತಲುಪಿಸಿ. ನಮ್ಮ ಶತ್ರುಗಳು ತುಂಬಾ ಇದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ದೂರ ಉಳಿದು ನಮ್ಮ ಪಕ್ಷಕ್ಕೆ ಶಕ್ತಿ ತುಂಬಬೇಕು. ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಪೈಪೆÇೀಟಿಯಲ್ಲಿ ಇವೆ. ಆದರೆ ಅವು ಹಳ್ಳಿಗಳಿಗೆ ತಲುಪುವುದಿಲ್ಲ. ಹೀಗಾಗಿ ಈ ಪತ್ರಿಕೆಯನ್ನು ಬಲಪಡಿಸಿ ಎಂಬ ಸಲಹೆ ಮಾಡಿದರು.

ಪತ್ರಿಕೆಯನ್ನು ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರು ಒಳ್ಳೆಯ ಸಮಯದಲ್ಲೇ ಬಿಡುಗಡೆ ಮಾಡಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರೆ ಕಾಲದ ಒಳಿತು ಕೆಟ್ಟದ್ದು ಯೋಚನೆ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರು, ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ ಎಂದರು.

ಸೋಲು-ಗೆಲುವು ಬರುತ್ತೆ ಹೋಗುತ್ತೆ. ಈಗಾಗಲೇ ಎಲ್ಲವನ್ನೂ ಎದುರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏಳು ದಿನ ಕಾರ್ಯಗಾರ ಮಾಡಿದ್ದರು. ನಾನು ಬೆಳಗ್ಗೆ ಯಿಂದ ಸಂಜೆವರೆಗೆ ಕುಳಿತಿದ್ದೆ. ಕಾರ್ಯಗಾರಕ್ಕೆ ಒಳ್ಳೆ ಇಮೇಜ್ ಕೂಡ ಬಂದಿದೆ ಎಂದ ಅವರು, ಪತ್ರಿಕೆ ನಡೆಸುವುದು ಸುಲಭ ಅಲ್ಲ. ಆರ್ಥಿಕವಾಗಿ ಶಕ್ತಿ ಇರಬೇಕು. ನಮ್ಮ ಮೇಲಿನ ಅಭಿಮಾನ ಇದ್ದೇ ಇದೆ.

ಕುಮಾರಸ್ವಾಮಿ ಈ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದು ನಿಷ್ಕ್ರಿಯ ಆಗದಂತೆ ನೋಡಿಕೊಳ್ಳಿ. ಈ ಪಕ್ಷ ಮುಗಿಸಬೇಕು ಎಂದು ಹೇಳುವವರಿಗೆ ಕೌಂಟರ್ ನೀಡಲು ಈ ಆಫೀಸ್‍ನಲ್ಲಿ ಭದ್ರ ಮಾಡಿ ಎಂದು ಸಲಹೆ ಮಾಡಿದರು.

Facebook Comments