ಉಪಚುನಾವಣೆಗೆ ಫಲಿತಾಂಶದ ಬಗ್ಗೆ ದೇವೇಗೌಡರ ಮಾತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ನ.4- ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಕ್ರಿಯಾಶೀಲವಾಗಿ ಕೆಲಸ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚï.ಡಿ.ದೇವೇಗೌಡರು ತಿಳಿಸಿದರು. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲ್ಲರೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಅನೇಕ ಯೋಜನೆ ಯೋಜಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರನ್ನು ಒಳಗೊಂಡಂತೆ ನಿನ್ನೆ ನಡೆಸಿದ ಸಭೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿದೆವು ಎಂದರು.

ನ.8ರಿಂದ ಎರಡನೇ ಹಂತದ ಕಾರ್ಯಾಗಾರ ನಡೆಯಲಿದೆ. ಅಲ್ಲಿಂದ ಕಾರ್ಯಕ್ರಮ ಹಾಗೆಯೇ ಮುಂದುವರೆಯಲಿದೆ. ಉಪ ಚುನಾವಣೆ ಫಲಿತಾಂಶ ಬಗ್ಗೆ ಹೇಳಲ್ಲ. ಉಪ ಚುನಾವಣೆ ಫಲಿತಾಂಶವನ್ನು ಸ್ವೀಕಾರ ಮಾಡುತ್ತೇವೆ. ಜನರ ತೀರ್ಮಾನದಂತೆ ಪ್ರಾದೇಶಿಕ ಪಕ್ಷ ಉಳಿಯಲು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಪ್ರತಿ ವರ್ಷ ಮನೆಯಲ್ಲಿ ಮೊದಲನೇ ದಿನ ನೀರು ತುಂಬುವುದು ಸಂಪ್ರದಾಯ. ಎರಡನೇ ದಿನ ಲಕ್ಷ್ಮಿ ಪೂಜೆ ಮಾಡುತ್ತೇವೆ. ಈ ಕಚೇರಿ ಕಟ್ಟುವಾಗ ಕಷ್ಟ ಕಾಲ ಇತ್ತು. ತುಂಬಾ ಕಷ್ಟದ ಸಮಯದಲ್ಲಿ ಬಿಲ್ಡಿಂಗ್ ಕಟ್ಟಿದೆವು. ಯಾವುದೇ ಪಕ್ಷ ಕಟ್ಟೋದಿಕ್ಕೆ ಆರ್ಥಿಕ ಶಕ್ತಿ ಮುಖ್ಯ. ಕಾಂಗ್ರೆಸ್, ಬಿಜೆಪಿ ಹಣ ಎಷ್ಟಿದೆ ಅಂತ ಪುನರುಚ್ಚಾರ ಮಾಡಲ್ಲ. ಪ್ರಾದೇಶಿಕ ಪಕ್ಷ ಉಳಿಸಬೇಕು.

ಜವಾಬ್ದಾರಿ ಎಲ್ಲರೂ ಹೊರಬೇಕು. ಕುಮಾರಸ್ವಾಮಿ ಹಾಗೂ ನಾನು ಐದು ಪಂಚರತ್ನ ಯೋಜನೆ ಮಾಡಲು ಶಾಸಕರಿಗೆ ಕಾರ್ಯಗಾರ ಮಾಡಿದೆವು.ಮಹಿಳಾ, ಯುವ, ಮುಸ್ಲಿಂ, ಕ್ರಿಶ್ಚಿಯನ್, ಒಬಿಸಿ ಹೀಗೆ ಎಲ್ಲರನ್ನು ಕರೆದು ಕಾರ್ಯಾಗಾರ ಮಾಡಲಾಯಿತು. ಏಳು ದಿನಗಳ ಕಾರ್ಯಕ್ರಮ ಇದಾಗಿತ್ತು. ಇದು ಉತ್ತಮ ಕಾರ್ಯಕ್ರಮವಾಗಿತ್ತು. ಅದಕ್ಕೆ ಹಣ ಜೋಡಿಸಲು ಏನು ತೊಂದರೆ ಆಯ್ತು ಎಂಬುದು ಗೊತ್ತಿದೆ ಎಂದರು.

ಉಪ ಚುನಾವಣೆಗೂ ಎಷ್ಟು ಶ್ರಮ ಪಟ್ಟರೂ ಗೊತ್ತಿದೆ. ಸೋಲು ಗೆಲುವಿನ ಬಗ್ಗೆ ಮಾತಾಡಲ್ಲ. ಸಿಂಧಗಿ ಕ್ಷೇತ್ರದಲ್ಲಿ 38 ಸಾವಿರ ಮುಸ್ಲಿಂ ಮತದಾರರು ಇದ್ದರು. ನಮಗಿಲ್ಲ ಅಂದರೆ ಕಾಂಗ್ರೆಸ್ ಗೆ ಹೋಗಿರುತ್ತದೆ. ಅವರ ಆಪಾದನೆ ಕೂಡ ನಮ್ಮ ಮೇಲೆ ಇದೆ. ದೇವೇಗೌಡರು ಅವರ ಮಗ ಸೇರಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ನಮ್ಮನ್ನು ಸೋಲಿಸಲು ಹೀಗೆ ಮಾಡಿದ್ದಾರೆ ಅಂದರು. ನಾಲ್ಕು ಸಾವಿರ ನಮಗೆ ಬಂದಿದೆ ಉಳಿದದ್ದು ಎಲ್ಲಿ ಹೋಯ್ತು. ನಾನು ಜನತೆ ತೀರ್ಮಾನಕ್ಕೆ ಬೀಡುತ್ತೇನೆ. ಯಾರ ಬಗ್ಗೆಯೂ ನಾನು ಮಾತಾಡಲ್ಲ ಎಂದು ಹೇಳಿದರು.

ನಾನು ಮಾಡಿದ ಕೆಲಸವನ್ನು ಕಾಂಗ್ರೆಸ್ ಅಲ್ಲಗಳೆಯಲು ಸಾಧ್ಯವಿಲ್ಲ. ನನ್ನ ಪ್ರತಿಮೆ ಮಾಡಿ ನಾನು ರಾಜಕೀಯವಾಗಿ ಬೆಳೆಸಿದ ವ್ಯಕ್ತಿಯ ಮಗನನ್ನು ಕರೆದುಕೊಂಡು ಹೋದರು. ಆ ವ್ಯಕ್ತಿಗೆ ಎಷ್ಟು ಮತ ಬಂದಿದೆ. ಎಷ್ಟು ಅಂತರದಲ್ಲಿ ಸೋತರು. ಎರಡು ತಿಂಗಳು ತೋಟಕ್ಕೆ ಬಂದು ಮಾತನಾಡಿದ್ದರು. 50 ಸಾವಿರ ಮುಸ್ಲಿಂ ಮತದಾರರು ಇದ್ದಾರೆ ಅಂದಿದ್ದರು.

ಚುನಾವಣೆಯಲ್ಲಿ ಅಕಾರ ಹಣದ ದುರುಪಯೋಗ, ಯಾರು ದುಡ್ಡು ಹಂಚಿದರು ಎಂಬುದು ಅವೆಲ್ಲ ಬೇಡ. ನಾನು ಯಾವುದೇ ಕೆಲಸ ಮಾಡೋದು ದೇವರ ನಂಬಿಯೇ. ಪಕ್ಷದ ಕಚೇರಿ ಕೂಡ ನಮ್ಮ ಮನೆ ಇದ್ದಂತೆ ಎಂದರು.

ನಾನು ಸಿಂದಗಿಗೆ ಹೋದಾಗ ಅನೇಕರು ಚಿಕ್ಕವರಿದ್ದರು. ಅಲ್ಲಿರುವ ಜನರಿಗೆ ಗೊತ್ತಿದೆ ನೀರು ಕೊಟ್ಟವರು ಯಾರು? ಏತ ನೀರಾವರಿ ಮಾಡಿದ್ದಾರೆ ನನ್ನ ಪ್ರತಿಮೆನೂ ಮಾಡಿದ್ದಾರೆ. ಐದು ಸಲ ಸೋತರೂ ಕಾಂಗ್ರೆಸ್‍ಗೆ ಹೋಗಲಿಲ್ಲ ಮಾಜಿ ಸಚಿವ ಮನುಗೂಳಿ. ಆದರೆ ಅವರು ನಿಧನರಾಗುವ ಮುನ್ನ ಮಗನನ್ನು ಕಾಂಗ್ರೆಸ್‍ಗೆ ಕಳೀಸಿದ್ದರೂ ಅಂತಾರೆ ಗೊತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಬೀಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದಿಂಡಗಲ್ ನಲ್ಲಿ ಇಂದಿರಾಗಾಂ ಗೆ ಠೇವಣಿ ಹೋಗಿತ್ತು. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ ಎಂದರು.

ಮುಸ್ಲಿಂರು ಜೆಡಿಎಸ್ ಜೊತೆ ಇರಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ದೇವೇಗೌಪು ಶಾಸಕ ಜಮೀರ್ ಅಹಮದ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಯಕರಾಗಿ ಪಕ್ಷ ಗೆಲ್ಲಿಸಲು ಏನು ಮಾಡ್ಬೇಕೋ ಮಾಡುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ನಾನು ನಂದೇ ಆದ ಮಾರ್ಗ ಇದೆ ಅದರಲ್ಲಿ ಹೋಗುತ್ತೇನೆ ಎಂದು ಹೇಳಿದರು.

Facebook Comments