“ಸಾವಿನ‌‌ ಭಯ ನನಗಿಲ್ಲಾ, ಉಸಿರಿರುವವರೆಗೂ ರೈತರ ಪರ ಹೋರಾಡುವೆ” : ಹೆಚ್‍ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಸಾವು ಯಾವಾಗ ಬರುತ್ತೆ ಎಂದು ತಿಳಿದಿಲ್ಲ. ಸಾವಿನ ಚಿಂತೆ ನನಗಿಲ್ಲ. ಅರವತ್ತು ವರ್ಷದ ನನ್ನ ರಾಜಕೀಯ ಜೀವನದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ರೈತಪರ ಹೋರಾಟ ನಡೆಸಿದ್ದೇನೆ; ನಮ್ಮ ಜನರು ತೊಂದರೆಗೆ ಸಿಲುಕಿರುವಾಗ ಸುಮ್ಮನೆ ಕೂರಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಕೊನೇ ತನಕ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದರು.

ಹಾಸನದಲ್ಲಿ ಭೂ ಸುಧಾರಣೆ, ಕಾಮಿರ್ಕ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಎಂಬ್ಬತ್ತೆಂಟು ವರ್ಷ ಪೂರೈಸಿರುವ ನನಗೆ ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋರಾಟಗಳೆಲ್ಲ ಬೇಡವೆಂದು ಸಾಕಷ್ಟು ಜನರು ಸಲಹೆ ನೀಡಿದ್ದರು.

ಆದರೆ, ನಮ್ಮ ಜನರು ತೊಂದರೆಗೆ ಸಿಲುಕಿರುವಾಗ ಸುಮ್ಮನೆ ಕೂರಲು ನನ್ನ ಮನಸ್ಸು ಒಪ್ಪಲಿಲ್ಲ, ಸಾವಿನ ಚಿಂತೆ ನನಗಿಲ್ಲ ಕೊನೆಯವರೆಗೂ ಹೋರಾಟ ನಡೆಸುವೆ ಎಂದರು .

ಬಿಜೆಪಿ ಪಕ್ಷ ದೇಶದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಹ ಮುಸ್ಲಿಂಮರನ್ನು ಹೀನಾಯವಾಗಿ ಕಾಣುತ್ತಿದೆ ಎಂದು ಹೇಳಿದ‌ ಅವರು ಬೆಂಗಳೂರು ಗಲಭೆ ಸಂಬಂಧ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ತನಿಖೆಯ ನಂತರ ಸತ್ಯಾಸತ್ಯತೆ ಹೊರಬೀಳಲಿದ್ದು ಯಾವ ಒಬ್ಬ ನಿರಪರಾಧಿಗೆ ತೊಂದರೆಯಾಗಬಾರದು ಎಂದು ಗೌಡರು ಹೇಳಿದರು.

ಎಪಿಎಂಸಿ ಹಾಗೂ ಭೂ ಹಿಡುವಳಿ ತಿದ್ದುಪಡಿ ಕಾಯ್ದೆ ವಿರುದ್ಧ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಹ ಜೆಡಿಎಸ್ ಹೋರಾಟ ನಡೆಸಲಿದ್ದು ಆಯಾ ಜಿಲ್ಲೆಗಳಲ್ಲಿ ನಮ್ಮ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಸಾಧ್ಯವಾದರೆ ನಾನು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದರು.

ಇಂದು ಸಾಂಕೇರಿವಾಗಿ ಹಾಸನದಲ್ಲಿ ಪ್ರತಿಭಟನೆಗೆ ಚಾಲನೆ ನೀಡಿದ್ದು ಜನವಿರೋಧಿ ಹಾಗೂ ರೈತ ವಿರೋಧಿ ಕಾಯ್ದೆ ತಿದ್ದುಪಡಿ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin