ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕೆಂಡಕಾರಿದ ಎಚ್‍ಡಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಡಿ.5- ಮಣ್ಣಿನ ಮಗ ಎಂದು ನಾನು ವೈಯಕ್ತಿಕವಾಗಿ ಕರೆಸಿಕೊಂಡಿಲ್ಲ. ಅದನ್ನ ಯಾರಿಟ್ಟರೋ ಎಂಬುದೇ ನನಗೆ ಯಕ್ಷ ಪ್ರಶ್ನೆಯಾಗಿದೆ. ಆದರೆ ನನ್ನ ಪಕ್ಷದಲ್ಲಿ ಬೆಳೆದವರೆ ಈ ಬಗ್ಗೆ ಟೀಕೆ ಮಾಡುತಿದ್ದಾರೆ ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ ಪರೋಕ್ಷವಾಗಿ ಸಿದ್ದರಾಮಯ್ಯ ನವರಿಗೆ ಚಾಟಿ ಬೀಸಿದ್ದಾರೆ.

ತಾಲ್ಲೂಕಿನ ಗವಿಮಠದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕಾರ ಶಾಶ್ವತವಲ್ಲ ಎಂಬ ತತ್ವದ ಮೇಲೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ ಆದರೆ ಕೆಲವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಯಾಗಿ ಮತ್ತೊಂದು ಬಾರಿಗೂ ಕನಸು ಕಾಣುತ್ತಿದ್ದಾರೆ. ಮೂಲ ಕಾಂಗ್ರೆಸ್‍ನವರ ಪಾಡೇನು ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಕುಣಿಗಲ್ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಕೆ ಸೇರಿದ ಪರಿಣಾಮ ನಾನು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಸೋತೆ ಈ ಕ್ಷೇತ್ರದ ರಾಜಕೀಯ ಮಹಿಮೆ ಇತಿಹಾಸ ಪುಟ ಪುನರ್ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಎಂದು 1991ರ ಉಪ ಚುನಾವಣೆಯನ್ನು ಸ್ಮರಿಸಿದರು.

ಈಗ ನಿಂತಿರುವ ಅಭ್ಯರ್ಥಿ ಅನಿಲ್ ಕುಮಾರ್ ನನ್ನ ಸಂಬಂದಿಕನಲ್ಲ ಆತ ಸಣ್ಣ ಜನಾಂಗದ ಅಕಾರಿ ಜನ ಸೇವೆ ಮಾಡಲು ಮನಸ್ಸು ಮಾಡಿ ತನ್ನ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ನನ್ನ ಬಳಿ ಬಂದು ತನ್ನ ಅಳಲು ತೋಡಿಕೊಂಡಿದ್ದರಿಂದ ಆತನನ್ನೆ ಅಭ್ಯರ್ಥಿ ಮಾಡುವ ಸಂದರ್ಭ ಬಂತು ಅದಕ್ಕು ಮುಂಚೆ ಈ ಕ್ಷೇತ್ರ ದ ನಾಯಕ ನನ್ನ ಒಡನಾಡಿ.

ಡಿ.ನಾಗರಾಜಯ್ಯನವರ ಮಗ ರವಿ ಬಾಬುಗೆ ಟಿಕೆಟ್ ನೀಡಲು ನಿರ್ಧರಿಸಿದ್ದೆ ಆದರೆ ದೊಡ್ಡ ಗುಣವುಳ್ಳ ವ್ಯಕ್ತಿ ನಾಗರಾಜಯ್ಯ ಎಲ್ಲಾ ನನ್ನ ಕುಟುಂಬಕ್ಕೆ ಬೇಎ ಬೇರೆಯವರನ್ನು ಬೆಳೆಸಿ ಎಂದು ಸಲಹೆ ನೀಡಿದ್ದ ಪರಿಣಾಮ ಅನಿಲ್ ರವರನ್ನು ಅಭ್ಯರ್ಥಿ ಮಾಡಿದ್ದೇನೆ ದಯವಿಟ್ಟು ಎಲ್ಲಾ ಮುಖಂಡರು ಗ್ರಾ.ಪಂ ಸದಸ್ಯ ರು ಪುರಸಬೆ ಸದಸ್ಯರು ಮತ ನೀಡಿ ಎಂದು ಮನವಿ ಮಾಡಿಕೊಂಡರು.

ಮಾಜಿ ಸಚಿವ ಡಿ.ನಾಗರಾಜಯ್ಯ. ಜಿಪಂ ಮಾಜಿ ಸದಸ್ಯ ಡಾ.ಬಿ.ಎನ್.ರವಿಬಾಬು,.ಒಕ್ಕಲಿಗರ ಸಂಘದ ಅಭ್ಯರ್ಥಿ ಬಿ.ಎನ್.ಲೋಕೇಶ್.ತಾಲ್ಳೊಕ್ ಜೆ.ಡಿ.ಎಸ್. ಅದ್ಯಕ್ಷ .ಜಗದೀಶ್. ತಾಲ್ಲೂಕು ವಕ್ತಾರ ತರೀಕೆರೆ ಪ್ರಕಾಶ್, ಮಾಜಿ.ಪುರಸಭಾ ಸದಸ್ಯ ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು

Facebook Comments