ಕುಡಿಯುವ ನೀರಿಗೂ ಕಷ್ಟದ ದಿನಗಳು ಬರಲಿವೆ : ದೇವೇಗೌಡರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 11- ಬೆಂಗಳೂರಿಗೆ ಕುಡಿಯುವ ನೀರಿನ ವಿಚಾರದಲ್ಲಿ ಇನ್ನಷ್ಟು ಕಷ್ಟದ ದಿನಗಳು ಬರಲಿವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.ಬಸವನಗುಡಿ ವಿಧಾನಸಭಾ ಕ್ಷೇತ್ರದ ಗವಿಗಂಗಾಧರೇಶ್ವರ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಜೆಡಿಎಸ್ನ ಜನತಾ ಜಲಧಾರೆ ಸಂಕಲ್ಪ ಸಮಾವೇಶ ಮತ್ತು ಗಂಗಾರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದ ಕೆಲವು ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಬೆಂಗಳೂರಿನ ಜನರ ಕುಡಿಯುವ ನೀರಿನ ಬವಣೆ ಪರಿಹರಿಸಬೇಕಾಗಿದೆ ಎಂದರು.

1994ರಲ್ಲಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರವನ್ನು ಆರಂಭಿಸಲಾಗಿತ್ತು. ಆಗ ಪಕ್ಷ ಅಕಾರಕ್ಕೆ ಬಂದಿತ್ತು. ಇಂದು ಕೂಡ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇವೆ. ಶಿವನ ಕೃಪೆ ನಮ್ಮ ಮೇಲೆ ಇರಲಿ. ಇದು ಶ್ರೇಷ್ಟವಾದ ಸ್ಥಳ ಎಂದರು.

ಮೇ 13ರಂದು ನೆಲಮಂಗಲದ ಬಳಿ ನಡೆಯುವ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಹಾಹಕಾರ ಬರುವ ದಿನಗಳು ದೂರವಿಲ್ಲ. ಕಳೆದ 75 ವರ್ಷದಲ್ಲಿ ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ನಮ್ಮ ಜನತಾ ಜಲಧಾರೆಯ ಉದ್ದೇಶವಾಗಿದೆ.

ನಗರದ ಹಲವು ಭಾಗಗಳಲ್ಲಿ ಟ್ಯಾಂಕರ್ ಮತ್ತು ಬೋರ್ವೆಲ್ ಮೂಲಕ ನೀರು ಪೂರೈಸಲಾಗುತ್ತಿದೆ. ಈಗಲೂ ದೊಡ್ಡ ಮಟ್ಟದ ಕುಡಿಯುವ ನೀರಿನ ಸಮಸ್ಯೆಯನ್ನು ಬೆಂಗಳೂರು ಎದುರಿಸುತ್ತಿದೆ ಎಂದರು.ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ 9 ಟಿಎಂಸಿ ನೀರನ್ನು ಬಳಕೆಗೆ ಒಪ್ಪಿಗೆ ಕೊಟ್ಟಿರಲಿಲ್ಲ. ದೇವೇಗೌಡರು ಪ್ರಧಾನಿಯಾದ ನಂತರ 9 ಟಿಎಂಸಿ ನೀರು ಬೆಂಗಳೂರಿಗೆ ದೊರೆಯುವಂತಾಯಿತು.

ಜನತಾದಳ ಸರ್ಕಾರವಿದ್ದಾಗ ಬೆಂಗಳೂರು ಅಭಿವೃದ್ಧಿಗೆ ಗುಣಾತ್ಮಕ ಕೆಲಸವಾಗಿತ್ತು. ಈಗ ಜನಪ್ರತಿನಿಗಳ ಅಭಿವೃದ್ಧಿಯಾಗುತ್ತಿದೆ. ಜನರ ಸಂಪತ್ತು ಲೂಟಿಯಾಗುತ್ತಿದೆ. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ವಾಜಪಾಯಿ ಕ್ರೀಡಾಂಗಣದ ಛಾವಣಿ ಕುಸಿದು ಬಿದ್ದಿದೆ. ಇದು ಈಗಿನ ಶಾಸಕರು ಕೊಡುತ್ತಿರುವ ಕೊಡುಗೆ ಎಂದು ವ್ಯಂಗ್ಯವಾಡಿದರು.

ಧರ್ಮದ ಆಚರಣೆಯನ್ನು ಮನೆಯಲ್ಲಿ ಮಾಡಿ ರಸ್ತೆಯಲ್ಲಿ ಅಶಾಂತಿ ಸೃಷ್ಟಿ ಉಂಟು ಮಾಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, 2023ಕ್ಕೆ ಶೇ.100ರಷ್ಟು ಜೆಡಿಎಸ್ ಅಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂ ಅವರ ಸಿನಿಮಾ ನೋಡಿದ್ದಾಗಿದೆ. ಬಿಜೆಪಿಯವರ ಗಂಗಾಪೂಜೆ ನಾಟಕ, ನಲ್ಲಿ ನೀರು ತಂದು ಗಂಗಾಜಲ ಎಂದರು. ನಾನು 19 ನದಿಗಳ ಶುದ್ದ ಗಂಗಾಜಲವನ್ನು ತಂದು ಪೂಜಿಸುತ್ತಿದ್ದೇವೆ ಎಂದರು.

ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಮಾತನಾಡಿ, 1994ರಲ್ಲಿ ಗವಿಗಂಗಾಧರೇಶ್ವರ ದೇವಾಲಯದಿಂದ ಜನತಾ ವಾಹಿನಿ ಪ್ರಾರಂಭ ಮಾಡಲಾಗಿತ್ತು. ಆಗ 118 ಕ್ಷೇತ್ರಗಳಲ್ಲಿ ಜಯಗಳಿಸಿ ಅಕಾರಕ್ಕೆ ಬರಲಾಗಿತ್ತು. ಈಗಲೂ ಇಲ್ಲಿ ಜನತಾ ಜಲಧಾರೆ ಕಾರ್ಯಕ್ರಮವನ್ನು ಮಾಡಿದ್ದು, ಮುಂದೆ ಅಕಾರಕ್ಕೆ ಬರುವುದು ನಿಶ್ಚಿತ. ಈ ದೇವಾಲಯ ದಕ್ಷಿಣ ಕಾಶಿ. ಇಲ್ಲಿ ಗಂಗಾಪೂಜೆ ನೆರವೇರಿಸಿದ್ದೇವೆ ಎಂದರು.

ಏ.16ರಂದು ಕೆಆರ್ಎಸ್ನಲ್ಲಿ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಜನತಾ ಜಲಧಾರೆ ಆರಂಭಿಸಲಾಗಿತ್ತು. ಆಗಿನಿಂದಲೂ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತವಾಗಿದೆ.
ಬಸವನಗುಡಿ ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸುತ್ತಿದ್ದು, ಯಾರೇ ಅಭ್ಯರ್ಥಿಯಾದರೂ ಬೆಂಬಲಿಸಬೇಕು, ಬಿಬಿಎಂಪಿ ಚುನಾವಣೆಯಲ್ಲಿ 4 ವಾರ್ಡ್ಗಳಲ್ಲಾದರೂ ಜಯಗಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಭೋಜೇಗೌಡ, ಜೆಡಿಎಸ್ ಬೆಂಗಳೂರು ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಪಕ್ಷದ ಮುಖಂಡರಾದ ಭಾಗೇಗೌಡ, ತಿಮ್ಮೇಗೌಡ, ರುತ್ ಮನೋರಮಾ, ಲತಾ ಸುಕುಮಾರ್, ಆದಿಶೇಷಯ್ಯ, ಪ್ರಸಾದ್ ಮತ್ತಿತರರು ಇದ್ದರು.

Facebook Comments

Sri Raghav

Admin