ಅಕ್ರಮವೆಸಗಿಲ್ಲಾ…ಆತಂಕವಿಲ್ಲಾ, ಐಟಿ ದಾಳಿಗಾಗಿ ನಾನು ಕಾಯ್ತಿದಿನಿ : ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ನಾನು ಐಟಿ‌ ದಾಳಿ ಮಾಡುವುದನ್ನು ವಿರೋಧಿಸುವುದಿಲ್ಲಾ‌….ಐಟಿ‌ ದಾಳಿಗಾಗಿ‌ ಕಾಯುತ್ತಿದ್ದೇನೆ.. ಸಿಎಂ ಆಗಿದ್ದ ಅವಧಿಯಲ್ಲಿ ಯಾವುದೇ ಅಕ್ರಮವೆಸಗಿಲ್ಲ ಆದ್ದರಿಂದ ಯಾವುದೇ ಆತಂಕವಿಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನಗರದ ಹಾಸನಾಂಭ ದರ್ಶನ ಕ್ಕೆ ಕುಟುಂಬ ಸಮೆತರಾಗಿ‌‌ ಆಗಮಿಸಿದ ಅವರು ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷದವರನ್ನು ಹೊರತು ಪಡಿಸಿ ರಾಜ್ಯ ದಲ್ಲಿ‌‌ ಹಾಗೂ ದೇಶದಲ್ಲಿ ಐಟಿ ದಾಳಿ‌ ನಡೆಯುತ್ತಿದೆ‌‌ ಇದು ಎಷ್ಟರ ಮಟ್ಟಿಗೆ ಸರಿ‌ …ಐಟಿ‌ ಇಲಾಖೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ. ಅಲ್ಲದೆ ಬಿಜೆಪಿ ಪಕ್ಷದವರನ್ನು ಬಿಟ್ಟು ಕಾಂಗ್ರೆಸ್ ಪಕ್ಷದವರನ್ನೆ‌ ಗುರಿಯಾಗಿಸಿ ದಾಳಿ ಮಾಡಲಾಗುತ್ತದೆ‌ ಎಂದರು.

# ಬಿಜೆಪಿ‌ ಅವರೇನು ಬಿಕಾರಿಗಳೇ..!!!
ಕಾಂಗ್ರೆಸ್ ಹಾಗೂ ಇತರೆ ಪಕ್ಷದವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ‌. ಆಗಾದರೇ ಬಿಜೆಪಿ‌‌ ಅವರೇನು ಬಿಕಾರಿಗಳೇ ಎಂದು ಕಾರವಾಗಿ ನುಡಿದ ಕುಮಾರಸ್ವಾಮಿ ಅವರು ನಾನು ಯಾವುದೇ ದಾಳಿಗೆ ಹೆದರೊಲ್ಲಾ ಎಂದರು.

# ಐಟಿ‌ ದಾಳಿಗೆ ಕಾಯುತ್ತಿದ್ದೇನೆ..!!
ಐಟಿ ದಾಳಿ ಮಾಡುವುದನ್ನು‌ ನಾನು ಎಂದೂ ವಿರೋಧಿಸಿಲ್ಲಾ ಹಾಗೂ ದಾಳಿ ಮಾಡಲೀ ಎಂದೇ ಕಾಯುತ್ತಿದ್ದೇನೆ ….ದಾಳಿ‌ ಮಾಡಿದ ಪಕ್ಷದಲ್ಲಿ ನನ್ನ‌ ಮನೆಯಲ್ಲಿ ಹಾಲಿ ಸಿಎಂ ಬಿ.ಎಸ್ .ಯಡಿಯೂರಪ್ಪ ಅವರ ಆಕ್ರಮದ ಕಡತಗಳೇ ದೊರೆಯಲಿದೆ ಎಂದರು.

# ಪರಿಹಾರ ನೀಡುವ ಬದಲು‌ ಲೂಟಿ….!
ರಾಜ್ಯ ಸರ್ಕಾರದ ಖಜಾನೆಯು ಸಮೃದ್ಧ ವಾಗಿದೆ ಇದನ್ನು ಸರಿಯಾಗಿ ಉಪಯೋಗಿಸುವ ಬದಲು ಲೂಟಿ ಮಾಡುವುದರಲ್ಲಿ ಸರ್ಕಾರದ ಮಂತ್ರಿಗಳು ಹಾಗೂ ಆಡಳಿತ ಮುಂದಾಗಿದೆ ಎಂದು ಆರೋಪಿಸಿದ ಎಚ್‌ಡಿ ಕೆ ಅವರು ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿದ್ದಾರೆ ತಾತ್ಕಾಲಿಕ ಪರಿಹಾರ ನೀಡಿ ತೇಪೆಯಾಕುವ ಬದಲು ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು; ಮುಂಬರುವ ಹವಮಾನ ವೈಪರೀತ್ಯವನ್ನು ಅರಿತು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸಲಹೆ‌ ನೀಡಿದರು.

ನಾನು ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಹಿಂದಿನ ಸರ್ಕಾರದ ಯಾವುದೇ ನಿರ್ಧಾರವನ್ನು- ಯೋಜನೆಯನ್ನು ವಿರೋಧಿಸಿಲ್ಲ ಹಾಗೂ ಸಿದ್ದರಾಮಯ್ಯ ಅವರು ರೂಪಿಸಿದ ಯೋಜನೆಗಳಿಗೆ ಯಾವುದನ್ನು ತಡೆಯಲಿಲ್ಲ ಎಂದು ಹೇಳಿದ ಅವರು ಬಿಜೆಪಿ ಸರ್ಕಾರ ನನ್ನ ಅವಧಿಯಲ್ಲಿ ಜಾರಿಗೆತಂದ ಹಲವು ಯೋಜನೆಗೆ ತಡೆಯೊಡ್ಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಮತ್ತೊಂದು ರೆವಲ್ಯೂಷನ್ ಹಾಕಬೇಕಿದೆ ಮೋದಿಯವರ ಆಕರ್ಷಣೆಯಿಂದ ಇಂದು ದೇಶ ಹಾಳಾಗಿದೆ ದೇವೇಗೌಡರು ಕೇಂದ್ರದಲ್ಲಿದ್ದು ದೇಶದ ಉನ್ನತಿಗೆ ಲೋಕಸಭೆಯಲ್ಲಿ ಧ್ವನಿ ಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಎದುರಾಗಿದ್ದು ಕೇಂದ್ರದಲ್ಲಿ ಆಡಳಿತ ಇದೇ ರೀತಿಯಲ್ಲಿ ಮುಂದುವರೆದರೆ ತುರ್ತು ಪರಿಸ್ಥಿತಿ ಹೇರಿಕೆಯು ದೂರವಿಲ್ಲ ; ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದಲೇ ನಿಲ್ಲಬೇಕಿತ್ತು ಎಂದು ಹೇಳಿದ ಅವರು ಲೋಕಸಭೆಯಲ್ಲಿ ಇದ್ದಿದ್ದರೆ ಸದನದಲ್ಲಿ ಗಟ್ಟಿ ಧ್ವನಿಯಾಗಿ ದೇವೇಗೌಡರು ಪ್ರತಿನಿಧಿಸುತ್ತಿದ್ದರು ಈ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಎಂದು ನುಡಿದರು .

ಕೇಂದ್ರ ಬಿಜೆಪಿ ಸರ್ಕಾರಕ್ಕೆ ಯಾವುದೇ ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂದರೆ ಸರ್ಜಿಕಲ್ ಸ್ಟ್ರೈಕ್ ನೆನಪಾಗುತ್ತದೆ ಅದರಂತೆ ನಡೆಯುತ್ತಿದ್ದು ಜಮ್ಮು-ಕಾಶ್ಮೀರದಲ್ಲಿ ಎಷ್ಟು ದಿನ ಸೇನೆ ಮೂಲಕ ನಿಯಂತ್ರಣ ಸಾಧ್ಯ ಎಂದು ಹೇಳಿದ ಅವರು ಅಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಅಗತ್ಯ ಎಂದರು.

ಮುಂದಿನ ರಾಜ್ಯ ವಿಧಾನಸಭೆ ಉಪಚುನಾವಣೆಗೆ ಎಲ್ಲಾ 15 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವುದು ಖಚಿತ; ಈ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

# ರಾಜ್ಯದ ಹಿತ‌ಕ್ಕೆ ಪ್ರಾರ್ಥನೆ;
ಹಾಸನಾಂಭ ದರ್ಶನ ಬಳಿಕ ಮಾತನಾಡಿದ ಕುಮಾರಸ್ವಾಮಿ ಪ್ರತಿವರ್ಷ ಹಾಸನಾಂಭ ದರ್ಶನ ಕ್ಕೆ ಕುಟುಂಬ ಸಮೇತ ಆಗಮಿಸಿ ಪ್ರಾರ್ಥನೆ‌ ಸಲ್ಲಿಸಿದ್ದೇವೇ‌ ಅಲ್ಲದೆ ರಾಜ್ಯದ ಹಿತಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ನೆರೆ ಹಾವಳಿಯಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದಕ್ಕೆ ಸರ್ಕಾರ ಕೂಡ ಸೂಕ್ತ ಸ್ಪಂದನೆ ಅಗತ್ಯವಿದೆ ಮುಂದಿನ ದಿನಗಳಲ್ಲಿ ದೇವಿಯ ಆಶೀರ್ವಾದ ದಿಂದಾಗಿ‌ ಜನರ ಕಷ್ಟ ಪರಿಹಾರವಾಗಲಿದೆ ಎಂದು ನುಡಿದರು.

# ದೇವೇಗೌಡರ ಕುಟುಂಬದಿಂದ ಹಾಸನಾಂಭ ದರ್ಶನ;
ದೇವೇಗೌಡರು ತಮ್ಮ ಕುಟುಂಬದ ಸದಸ್ಯರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸೊಸೆ ಅನಿತಾ ಕುಮಾರಸ್ವಾಮಿ, ಪತ್ನಿ ಚನ್ನಮ್ಮ, ಮಗಳಾದ ಅನುಸೂಯ ಅವರೊಂದಿಗೆ ದೇವಿಯ ದರ್ಶನ ಪಡೆದರು..ದೇವಾಲಯದ ಆವರಣದಲ್ಲಿ ಇರುವ ಗಣೇಶ , ಸಿದ್ದೇಶ್ವರ ಸ್ವಾಮಿ ದೇವಾಲಯ ಕ್ಕೂ ಭೇಟಿ‌ ನೀಡಿ ಪೂಜೆ ಸಲ್ಲಿಸಿದರು.ನಂತರ ಪ್ರತ್ಯೇಕ ವಾಗಿ ಆಗಮಿಸಿದ ನಿಕಿಲ್ ಕುಮಾರಸ್ವಾಮಿ ಕೂಡ ಹಾಸನಾಂಭ ದರ್ಶನ ‌ಪೆಡೆದರು.

Facebook Comments

Sri Raghav

Admin