ಎಚ್‍ಡಿಕೆ ಜತೆ ಮಗಳ ಫೋಟೋ: ಸಂತಸ ಪಟ್ಟ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ,ಜ.29- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ಕೈಯಲ್ಲಿ ನನ್ನ ಮಗಳು ಇರುವ ಫೋಟೋ ತೆಗೆದು ಕೊಡಿ ಎಂದು ತಾಯಿಯೊಬ್ಬರು ತನ್ನ ಪುಟ್ಟ ಮಗಳನ್ನು ಕುಮಾರಸ್ವಾಮಿರವರ ಕೈಗೆ ನೀಡಿ ಸಂತೋಷಪಟ್ಟ ಘಟನೆ ವಂದಾರುಗುಪ್ಪೆಯಲ್ಲಿ ನಡೆಯಿತು.  ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿರವರು ಗ್ರಾಮ ಸಂಪರ್ಕ ಸಭೆಗೆ ಆಗಮಿಸುವ ಸಂದರ್ಭದಲ್ಲಿ ಎದುರಾದ ತಾಯಿ ತನ್ನ ಎರಡುವರೆ ವರ್ಷದ ಮಗಳನ್ನು ಕುಮಾರಸ್ವಾಮಿರವರ ಕೈಗೆ ನೀಡಿ ಫೋಟೋ ತೆಗೆದುಕೊಂಡು ತನ್ನ ಬಹುದಿನಗಳ ಆಸೆಯನ್ನು ಹಿಡೇರಿಸಿಕೊಂಡರು.

ಈ ಸಂದರ್ಭದಲ್ಲಿ ಮಗುವನ್ನು ಎತ್ತಿಕೊಂಡು ಮುತ್ತಿಕ್ಕಿದ ಕುಮಾರಸ್ವಾಮಿ ಮಗುವಿಗೆ ಆಶೀರ್ವಾದ ಮಾಡಿದರು, ಈ ಘಟನೆಯನ್ನು ಕಣ್ಣಾರೇ ಕಂಡು ತಾಯಿ ಸಂತಸ ಪಟ್ಟರು.
ನಗರಸಭೆ ಮಾಜಿ ಸದಸ್ಯ ಕುಮಾರಸ್ವಾಮಿಯವರಿಗೆ ನಗರಸಭೆಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಿ, ಗ್ರಾಮ ಸಂದರ್ಶನದ ನಂತರ ನಗರಸಭೆ ಸಂದರ್ಶನ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಫರ್ವಿಜ್ ಹಾಗೂ ಹಲವಾರು ಮಂದಿ ಮುಸ್ಲಿಮ್ ಮತ್ತಿತರರು ಮುಖಂಡರು ಹಾಜರಿದ್ದರು.

Facebook Comments