‘ಮುಂದಿನ ಚುನಾವಣೆಯಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ’ : HDK ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.27- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಏನು ಅನ್ನೋದನ್ನು ತೋರಿಸುತ್ತೇವೆ. 2023ರಿಂದ ಹೊಸ ಯುಗ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹೇಳಿದರು. 2023ಕ್ಕೆ ಜಾತ್ಯತೀತ ಜನತಾದಳದ ಜನತಾ ಸರಕಾರ ರಚನೆ ಮಾಡುವ ಗುರಿಯೊಂದಿಗೆ ಬಿಡದಿ ಬಳಿಯ ತಮ್ಮ ತೋಟದ ಮನೆಯಲ್ಲಿ ಆರಂಭವಾದ 4 ದಿನಗಳ ಜನತಾ ಪರ್ವ 1. ಕಾರ್ಯಗಾರದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಜೆಡಿಎಸ್ ಬಗ್ಗೆ ಮಾತನಾಡೋರು ಮಾತನಾಡಲಿ. ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಪಕ್ಷದ ಚಟುವಟಿಕೆಗಳು ಇರಲಿಲ್ಲ. ಇಂದಿನಿಂದ ನಾಲ್ಕು ದಿನಗಳ ಕಾಲ ಕಾರ್ಯಗಾರ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು.

ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. ಅವರು ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಬೇಕು. ಆತ್ಮೀಯತೆ ವ್ಯಾಮೋಹ ಅವರ ಮೇಲೆ ಇಲ್ಲ. ಅವರು ಕಾರ್ಯದಕ್ಷತೆಯಿಂದ ಇರಬೇಕು. ಇಲ್ಲದೇ ಹೋದರೆ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಕೆಲಸವನ್ನೂ ಮಾಡುತ್ತೇವೆ.

ನಮ್ಮ ಪಕ್ಷದಲ್ಲಿ ಕುಮಾರಸ್ವಾಮಿ ಹೋದಾಗ ದೊಡ್ಡ ಮಟ್ಟದಲ್ಲಿ ಸೇರ್ತಾರೆ. ಆದರೆ, ಮತವಾಗಿ ಪರಿವರ್ತನೆ ಆಗುವುದಿಲ್ಲ ಎಂಬ ಮಾತಿದೆ. ಅದು ಕೂಡ ಒಂದು ಲೋಪ್ ಇದೆ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಕಾರದಲ್ಲಿವೆ. ಕನ್ನಡಿಗರಿಗಾಗಿ, ಕನ್ನಡಿಗರಿಗೋಸïಕರ ಇರುವ ಪಕ್ಷ ನಮ್ಮದು. ಹಲವಾರು ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೊರಾಟ ಮಾಡುತ್ತಿದ್ದೇವೆ.

ಬಿಜೆಪಿ ಪಕ್ಷವನ್ನು ಶ್ಯಾಮï ಪ್ರಸಾದ್ ಮುಖರ್ಜಿ ಪ್ರಾರಂಭ ಮಾಡಿದರು. ಇಲ್ಲಿಯವರೆಗೆ ಯಾವ ರೀತಿ ಬೆಳೆದು ಬಂದಿದ್ದಾರೆ. ಬಡವರಿಗೆ ಕಾರ್ಯಕ್ರಮ ಕೊಟ್ಟ ಪಕ್ಷ ನಮ್ಮದು. ಕಾರ್ಯಗಾರ ಮಾಡಿ ನಂತರ ನಿರಂತರವಾಗಿ ಕಾರ್ಯಕ್ರಮ ನಡೆಸುತ್ತೇವೆ. ಮುಂಬರುವ ದಿನಗಳಲ್ಲಿ ಅಕಾರಕ್ಕೆ ಬರಲು ಶ್ರಮಿಸುತ್ತಿದ್ದೇವೆ. ನಮ್ಮ ಪಕ್ಷದಿಂದಲೇ ಬೆಳೆದು ಹೋದವರೊಬ್ಬರು ಲಘುವಾಗಿ ಮಾತನ್ನಾಡುತ್ತಿದ್ದಾರೆ. ನಮ್ಮ ಪಕ್ಷ ಕುರಿತು ಕೇವಲವಾಗಿ ಮಾತನ್ನಾಡುತ್ತಿದ್ದಾರೆ ಎಂದರು.

Facebook Comments