ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರೊಂದಿಗೆ ಹೆಚ್ಡಿಕೆ ವಿಡಿಯೋ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.31-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿ ಕೊರೋನ ಸೋಂಕು ಹರಡದಂತೆ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ವೈದ್ಯಕೀಯ ಪರಿಕರಗಳನ್ನು ಒದಗಿಸುವಂತೆ ಸಲಹೆ ಮಾಡಿದರು.

ಸರ್ಕಾರದಿಂದ ತಾಲ್ಲೂಕು ಆಸ್ಪತ್ರೆಗಳಿಗೆ ಒದಗಿಸಿರುವ ವೈದ್ಯಕೀಯ ಸೌಲಭ್ಯ ಹಾಗೂ ಕೂಲಿಕಾರರು, ಬಡವರ ನೆರವಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.ವೈದ್ಯರಿಗೆ ನೀಡಿರುವ ವೈದ್ಯಕೀಯ ಕಿಟ್ ಗುಣಮಟ್ಟ ಸರಿ ಇಲ್ಲ ಎಂಬ ಆರೋಪಗಳಿವೆ.

ಶಾಸಕರೇ ಇಂತಹ ಸಂಕಷ್ಟ ಪರಿಸ್ಥತಿಯಲ್ಲಿ ಗುಣಮಟ್ಟದ ಕಿಟ್ ಒದಗಿಸಿ, ಬಡವರಿಗೂ ನೆರವಾಗಿ ಎಂದು ಶಾಸಕರಿಗೆ ಸೂಚಿಸಿದರು. ಎಲ್ಲದಕ್ಕೂ ಸರ್ಕಾರವನ್ನೇ ಕಾಯದೇ ಶಾಸಕರೇ ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತೆಯೂ, ಸಾರ್ವಜನಿಕರಿಗೆ ನೆರವಾಗುವಂತೆಯೂ ಕುಮಾರಸ್ವಾಮಿ ತಿಳಿಸಿದರು.

ನಿನ್ನೆ ಮೈಸೂರಿನ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಕೊರೊನಾ ವೈರಸ್‌ನಿಂದ ಭಾದಿತವಾಗಿರುವ ಮೈಸೂರು ಜಿಲ್ಲೆಯ ಸ್ಥಿತಿಗತಿಯ ಕುರಿತು ಚರ್ಚಿಸಿದ್ದರು.

Facebook Comments

Sri Raghav

Admin