ಬಿಜೆಪಿ-ಕಾಂಗ್ರೆಸ್ ನಿಂದ ಅಡ್ಜೆಸ್ಟ್ಮೆಂಟ್ ರಾಜಕೀಯ : ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಅ.19- ಹಲವು ದಿನದಿಂದ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್‍ನ ಮುಖಂಡರ ರಾಜಕೀಯ ನಡೆ ಗಮನಿಸುತ್ತಿದ್ದೇನೆ. ಎರಡೂ ಪಕ್ಷದವರು ಅಡ್ಜೆಸ್ಟ ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬುಟಾಟಿಕೆ ಕಾಂಗ್ರೆಸ್ ಪಕ್ಷ ಇದೆ.

ಈ ಪಕ್ಷದಲ್ಲಿ ಯಾವೊಬ್ಬ ಹಿಂದುಳಿದ ವರ್ಗ ಮತ್ತು ಪ.ಜಾ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡಿಲ್ಲ .ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದರು ಮೀಸಲಾತಿ ತರಲಿಲ್ಲ. ದೇಶದಲ್ಲಿ ಮಹಿಳೆಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡಿದ್ದವರು ದೇವೇಗೌಡರು ಎಂದು ಮರೆಯಬಾರದು ಎಂದರು.

ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ, ಕೋಮುವಾದಿಗಳ ಜೊತೆ ಸೇರಿ ಕುಮಾರಣ್ಣ ಅವರ ಮಗನನ್ನು ಮತ್ತು ದೇವೇಗೌಡರ ಸೋಲಿಸಲು ಯಾರು ಯಾರು ಕಾರಣ ಎಂದು ಗೊತ್ತಿದೆ.ಇಂತಹ ತಂತ್ರಗಾರಿಕೆ ಕಾಂಗ್ರೆಸ್ ಮಾಡಿದೆ ದೇವೇಗೌಡರು ಎಷ್ಟೋ ಚುನಾವಣೆ ಎದುರಿಸಿದ್ದಾರೆ ಆದರೆ ಇಂತಹ ರಾಜಕಾರಣ ಸರಿಯಲ್ಲ ಎಂದರು.

ಇವರಿಗೆ ಇಂದು ಯಾವ ನೈತಿಕತೆ ಇದೆ ಜೆಡಿಎಸ್ ಪಕ್ಷವನ್ನು ದೂರಲು. ಇಡೀ ರಾಷ್ಟ್ರದಲ್ಲಿ ಯಾವುದೇ ಅಲ್ಪಸಂಖ್ಯಾತ ರಿಗೆ ಯೋಜನೆಗಳನ್ನು ನೀಡಿದ್ದು ದೇವೇಗೌಡರು ಎಂದು ಮರೆಯಬಾರದು.

ಸಿಎಂ ಇಬ್ರಾಹಿಂ ಕಾಂಗ್ರೆಸ್‍ನಲ್ಲಿ ಮೂಲೆ ಗುಂಪು ಮಾಡಿದ್ದಾರೆ. ಅವರಿಗೆ ದೇವೇಗೌಡರು ಪಿಎಂ ಆಗಿದ್ದ ವೇಳೆ ಸಚಿವ ಸ್ಥಾನ ನೀಡಿದ್ದರು. ಕುಮಾರಸ್ವಾಮಿ ಅವರು ಡೀಲಿಂಗ್ ಮಾಡುತ್ತಾರೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಉದ್ಯಮಿಗಳಿಂದ ಹಣ ಪಡೆದು ಪರಿಷತ್ ಸ್ಥಾನ ನೀಡಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ದೂರಿದರು.

ಡೇಂಜರ್ ಬಸ್: ಈ ರಾಜ್ಯದಲ್ಲಿ ಬಿಜೆಪಿ ಬರಲು ಕುಮಾರಸ್ವಾಮಿ ಅವರ ಬಸ್ ಸಂಚಾರ ಕಾರಣ ವಾಯಿತು. ನಮ್ಮ ಮನೆಯಲ್ಲೇ ಸಭೆ ಮಾಡಿ ಈ ಬೆಳವಣಿಗೆ ಸರಿಯಲ್ಲ ಎಂದು ಕುಮಾರಸ್ವಾಮಿ ಅವರಿಗೆ ತಿಳಿ ಹೇಳಿದರು ಕೇಳಲಿಲ್ಲ ಇಂದು ರಾಜ್ಯದಲ್ಲಿ ಬಿಜೆಪಿ ಚಿಗುರಲು ಕಾರಣವಾಗಿದೆ .ಪಾಪ ಕುಮಾರಸ್ವಾಮಿ ಅವರದು ಮೃದು ಮನಸ್ಸು ಯಾರಿಗಾದರೂ ಮರುಗುತ್ತಾರೆ ಎಂದರು.

ಟೀ ಶಾಪ್ ನಂತೆ ಮದ್ಯದಂಗಡಿ: ಜಿಲ್ಲಾಯಲ್ಲಿ ಟೀ ಶಾಪ್ನಂತೆ ಮದ್ಯದ ಅಂಗಡಿ ತೆರೆಯಲಾಗುತ್ತಿದೆ…ಬ್ರಾಂಡಿ , ವಿಸ್ಕಿ, ಟೀ ಮಾರಾಟದ ರೀತಿಯಲ್ಲಿ ಮಾರಾಟವಾಗುತ್ತಿದೆ ಎಂದು ದೂರಿದರು.

ರೇವಣ್ಣ ಉಪ ಮುಖ್ಯಮಂತ್ರಿ ಆಗುತ್ತಾರೆ ಎಂಬುದನ್ನ ಕುಮಾರಸ್ವಾಮಿ ಸಹಿಸಲಿಲ್ಲ ಎಂಬ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ರೇವಣ್ಣರನ್ನ ಕಿತ್ತಾಡಿಸಲು ಈ ರೀತಿ ಜಮೀರ್ ಹೇಳಿಕೆ ನೀಡಿದ್ದಾರೆ. ನಮ್ಮಿಬ್ಬರನ್ನ ಕಿತ್ತಾಡಿಸಲು ಯಾರಿಂದಲೂ ಸಾಧ್ಯವಿಲ್ಲ ನಾನು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗೋದಾದ್ರೆ ಕುಮಾರಣ್ಣನ ಕೇಳ್ಕೋತಿನಿ. ನಮ್ಮಿಬ್ಬರ ಬಗ್ಗೆ ಕಾಳಜಿ ಬೇರೆಯವರಿಗೆ ಬೇಡ ಎಂದು ವಾಗ್ದಾಳಿ ನಡೆಸಿದರು.

Facebook Comments