‘ನನ್ನದು ಸ್ವಾತಿ ನಕ್ಷತ್ರ, ಯಾರೇನೇ ಮಾಡಿದರೂ ನಂಗೇನೂ ಆಗಲ್ಲ, ಅವರಿಗೇ ಉಲ್ಟಾ ಆಗುತ್ತೆ’ ‘

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 11-ನನಗೆ ಸಿಎಂ ಆಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಆಗಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಲೋಕೋಪಯೋಗಿ ಸಚಿವನಾಗಿದ್ದೇನೆ.  ಸದ್ಯದ ಮಟ್ಟಿಗೆ ಈ ಸ್ಥಾನದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದರು.

ನೀವು ಡಿಸಿಎಂ ಆಗ್ತೀರಾ ಅನ್ನೊ ಮಾಧ್ಯಮದವರ ಪ್ರಶ್ನೆಗೆ ಸಚಿವ ಹೆಚ್​.ಡಿ.ರೇವಣ್ಣ ಮತ್ತೆ ತಮ್ಮ ನಕ್ಷತ್ರದ ಬಗ್ಗೆ ಮಾತ್ನಾಡಿದ್ದಾರೆ. ನಾನು ಉಪನೂ ಇಲ್ಲ, ಮುಖ್ಯನೂ ಇಲ್ಲ. ದೇವೇಗೌಡರು, ಕುಮಾರಣ್ಣ ಏನ್ ಹೇಳ್ತಾರೋ ಅದನ್ನ ಮಾಡ್ತೇನೆ.  ನನ್ನದು ಸ್ವಾತಿ ನಕ್ಷತ್ರವಾಗಿರುವುದರಿಂದ ಯಾರಿಂದಲೂ ನನ್ನ ಯೋಗ, ಅದೃಷ್ಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯೋಗ ಬಂದಾಗ ಯಾರೂ ಅದನ್ನ ಹಿಡಿದುಕೊಳ್ಳೋಕೆ ಹೋಗಲ್ಲ. ನಾನು ಜೋತಿಷ್ಯ, ಶಾಸ್ತ್ರ ಕೇಳೋಕೆ ಹೋಗಲ್ಲ. ಆದ್ರೆ ನನ್ನದು ಸ್ವಾತಿ ನಕ್ಷತ್ರ. ಯಾರು ಏನೇ ಮಾಡಿದ್ರೂ ನನಗೆ ಏನೂ ಆಗಲ್ಲ. ಅವರಿಗೆ ಉಲ್ಟಾ ಆಗುತ್ತೆ ಎಂದಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಅಭಿಲಾಷೆಯನ್ನು ಒಪ್ಪಿಕೊಂಡಿದ್ದಾರೆ.

Facebook Comments