ರಾಜೀನಾಮೆ ಬಗ್ಗೆ ಕೇಳಿದರೆ ‘ದೈವ ಭಕ್ತಿ’ ಮೆರೆದ ಎಚ್.ಡಿ.ರೇವಣ್ಣ….!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಒಂದೆಡೆ ಆನಂದ್ ಸಿಂಗ್ ರಾಜೀನಾಮೆ ವಿಚಾರ ರಾಜ್ಯವನ್ನು ತಲ್ಲಣ ಗೊಳಿಸಿದ್ದರೆ ಇತ್ತ ರಾಜ್ಯದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದೈವ ಭಕ್ತಿ ಮೆರೆದಿದ್ದಾರೆ.

ಹೌದು.. ನಗರದ ಜಿಲ್ಲಾಧಿಕಾರಿ ಕಚೇರಿಯ ಲ್ಲಿ ಇಂದು ಜಿಲ್ಲೆಯ ಮಲೆನಾಡು‌ ಭಾಗದ ರೈತರ ತಲೆನೋವಾಗಿರುವ ಆನೆ ಹಾವಳಿಗೆ ಪರಿಹಾರ ಕಂಡುಕೊಳ್ಳಲು ಆನೆ ಟಾಸ್ಕ್ ಫೋರ್ಸ್ ಸಭೆಗೆ ರೇವಣ್ಣ ಆಗಮಿಸಿದರು.

ಸಭೆಗೆ ಆಗಮಿಸಿದ ರೇವಣ್ಣ ಅವರು ಪ್ರವಾಸಿ ಮಂದಿರ ಮೆಟ್ಟಿಲು ಹತ್ತುವಾಗಲೇ ಎದುರಿಗೆ ಬಂದ ಮಾಧ್ಯಮದವರು ಆನಂದ್ ಸಿಂಗ್ ರಾಜೀನಾಮೆ‌ ವಿಚಾರ ಪ್ರಸ್ತಾಪಿಸಿದ್ದಾರೆ ಇದನ್ನು ಕೇಳಿದ ರೇವಣ್ಣ ತಮ್ಮ ಜೇಬಿನಲ್ಲಿ ಇದ್ದ ದೇವರ ಪೋಟೋವನ್ನ ಜೇಬಿನಿಂದ ತೆಗೆದು ಹಣೆಗೆ ಸ್ಪರ್ಶಿಸಿ ನಮಸ್ಕಾರ ಮಾಡಿಕೊಂಡು ಜೊತೆಯಲ್ಲಿ ಇದ್ದ ಕಲ್ಲುಸಕ್ಕರೆ ಸವಿದು ಮತ್ತೆ ಪೋಟೋವನ್ನು ತಮ್ಮ ಜೇಬಿನಲ್ಲಿ ಇಟ್ಟು ಜಿಲ್ಲಾಧಿಕಾರಿ ಸಭೆಗೆ ತೆರಳಿದರು.

ರಾಜೀನಾಮೆ ನಂಗೊತ್ತಿಲ್ಲಾ: ಬಳ್ಳಾರಿ ಶಾಸಕ ಆನಂದ್ ಸಿಂಗ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ‌ ಎಚ್.ಡಿ.ರೇವಣ್ಣ ಅವರು ರಾಜೀನಾಮೇ ಕೊಟ್ಟ ವಿಷಯ ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ.

ಹಾಗೂ ಈ ವಿಚಾರವಾಗಿ ಹೆಚ್ಚು ಮಾತನಾಡದೆ ಅಯ್ಯೂ ಬನ್ನಿ ಈ ಕಡೆ ನಾನು ಡಿಸಿ ಕಛೇರಿಗೆ ಹೋಗಬೇಕು ಎಂದು ಮಾಧ್ಯಮದವರನ್ನು ಪಕ್ಕಕ್ಕೆ ಸರಿಸಿ ಮುಂದೆ ಹೆಜ್ಜೆಯಾಕಿದ ರೇವಣ್ಣ ರಾಜೀನಾಮೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಿರಾಳವಾಗಿ ಡಿಸಿ ಕಚೇರಿಯಲ್ಲಿ ಆನೆ‌ ಟಾಸ್ಕ್ ಫೋರ್ಸ್ ಸಭೆಯನ್ನು ಮುಂದುವರೆಸಿದರು.

Facebook Comments

Sri Raghav

Admin