“ರಾಜೀನಾಮೆ ನೀಡಿದ ಶಾಸಕರಿಗೆ ಜೀರೋ ಟ್ರಾಫಿಕ್ ಕಲ್ಪಿಸಿದ ಯಾರು..?”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19-ರಾಜೀನಾಮೆ ನೀಡಿದ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಮದ್ಯಪ್ರವೇಶಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ರೇವಣ್ಣ, ರಾಜೀನಾಮೆ ನೀಡಿದ ಶಾಸಕರಿಗೆ ಎಚ್‍ಎಎಲ್ ಏರ್‍ಪೆಫೋರ್ಟ್‍ವರೆಗೂ ಏಕೆ ಜೀರೊ ಟ್ರಾಫಿಕ್ ನೀಡಲಾಯಿತು ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ತಮಗೆ ಗೊತ್ತಿರುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ , ರಾಜ್ಯಪಾಲರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಇರುತ್ತದೆ. ಯಾವ ಕಾರಣಕ್ಕೆ ಆ ವ್ಯವಸ್ಥೆ ಕೊಟ್ಟರೋ ಗೊತ್ತಿಲ್ಲ.

ನಮಗೆ ಮಾಮೂಲಿ ಟ್ರಾಫಿಕ್ ಎಂದ ಅವರು, ಆ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ನಾನು ಕೊಡಿಸಿಲ್ಲ. ನನಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಇಲ್ಲ ಅವರಿಗೆ ಹೇಗೆ ಕೊಡಿಸಲಿ ಎಂದರು.

ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಗೌರವಾನ್ವಿತ ರಾಜ್ಯಪಾಲರು ಶಾಸಕರಿಗೆ ರಕ್ಷಣೆ ಕೊಡಿಸಿದ್ದಾರೆ. ರಾಜೀನಾಮೆ ನೀಡಿದ 8 ಶಾಸಕರಿಗೆ ರಕ್ಷಣೆ ನೀಡುವಂತೆ ಫೋಲೀಸರಿಗೆ ಆದೇಶ ಮಾಡಿದ್ದರು. ಅದರಲ್ಲಿ ತಪ್ಪೇನು ಇಲ್ಲ ಎಂದರು.

Facebook Comments