ಬಿಜೆಪಿ ಸರ್ಕಾರದಲ್ಲಿ ಲೇಔಟ್ ದಂಧೆ ಮಿತಿಮೀರಿದೆ : ಹೆಚ್.ಡಿ.ರೇವಣ್ಣ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಫೆ.27-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನದಲ್ಲಿ ಲೇಔಟ್ ದಂಧೆ ಮಿತಿಮೀರಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನಗರದ ಸುತ್ತ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಲೇಔಟ್ ಮಾಡಿ 12 ಸಾವಿರ ನಿವೇಶನ ಮಾಡಲು ರೂಪುರೇಷೆ ಸಿದ್ದಪಡಿಸಿ ರೈತರೊಟ್ಟಿಗೆ ಸಭೆ ನಡೆಸಿ ಪ್ರಾಧಿಕಾರ ಹಾಗೂ ರೈತರಿಗೆ 50-50 ಅನುಪಾತದಲ್ಲಿ ಹಂಚಲು ನಿರ್ಧರಿಸಲಾಗಿತ್ತು.

ಅದು ಅನುಷ್ಟಾನಕ್ಕೆ ಬಂದಿದ್ದರೆ ಅಡಿಗೆ 900ರೂ ಅಂತೆ ನಿವೇಶನ ಹಂಚಬಹುದಿತ್ತು. ಆದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿ ಖಾಸಗಿಯವರೊಟ್ಟಿಗೆ ಶಾಮೀಲಾಗಿ ಖಾಸಗಿ ಲೇಔಟ್ ದಾರರಿಗೆ ಶ್ರೀರಕ್ಷೆಯಾಗಿದ್ದಾರೆ ಎಂದು ದೂರಿದರು. ಹೀಗೆ ಎಲ್ಲಾ ಖಾಸಗಿಯವರೇ ಲೇಔಟ್ ಮಾಡುವುದಾದರೆ ನಗರಭಿವೃದ್ಧಿ ಪ್ರಾಧಿಕಾರ ಏಕೆ ಬೇಕು? ಹೌಸಿಂಗ್ ಬೋರ್ಡ್ ಯಾಕೆ ಬೇಕು? ಮುಚ್ಚಿಬಿಡ್ಲಿ.

ಹಾಸನದ ಬೂವನಹಳ್ಳಿಯಲ್ಲಿ ಪೊಲೀಸರೂ ಕೆಲಸ ಬಿಟ್ಟು ಲೇಔಟ್ ಮಾಡಿಕೊಂಡು ಹಂಚಿಕೆ ಮಾಡಲು ಓಡಾಡ್ತಿದ್ದಾರೆ. ರಾಜ್ಯದ ಗೃಹ ಮಂತ್ರಿಗಳೇ ನಿಮ್ಮ ಅಧಿಕಾರಿಗಳನ್ನು ಸೈಟ್ ಮಾಡಿ ದುಡ್ಡು ಮಾಡೋದಕ್ಕೆ ಬಿಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಿದರು. ಯಾರೊ ಟೌನ್ ಪ್ಲಾನಿಂಗ್ ಆಫೀಸರ್ ಇದ್ದಾನೆ ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ನಾನು ಮಿನಿಷ್ಟರ್ ಆಗಿದ್ದರೆ ಸರಿಯಾದ ಕ್ರಮ ತಗೋತಾ ಇದ್ದೆ. ಪಂಚಾಯತ್ ಪಿಡಿಒಗಳು ದುಡ್ಡು ಕೊಟ್ಟರೆ ಎನನ್ನಾದರೂ ಮಾಡ್ತಾರೆ ಯಾವುದೇ ದಾಖಲೆ ಎನ್‍ಓಸಿ ನೀಡುತ್ತಾರೆ. ಡಿಸಿ ಕೇವಲ ಮೀಟಿಂಗ್, ಪ್ರೆಸ್ ಕಾನ್ಫರೆನ್ಸ್ ಮಾಡೋದಲ್ಲ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಒತ್ತಾಯಿಸಿದರು.

Facebook Comments