ರೈತರ ಸಂಪೂರ್ಣ ಸಾಲ‌‌ ಮನ್ನಾ ಮಾಡುವಂತೆ ಎಚ್. ಡಿ.ರೇವಣ್ಣ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಿದೆ ಹಾಗೆಯೇ ದೇಶದ ಬೆನ್ನೆಲುಬಾದ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಮಾಜಿ ಸಚಿವ ಎಚ್ ಡಿ ರೇವಣ್ಣ ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಅದಿನಾರು ಸಾವಿರ ಕೋಟಿ ರೂಗಳ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ನೇಕಾರರ- ಚಾಲಕರ ಹಾಗೂ ಇತರ ವರ್ಗದ ಜನರಿಗೆ ಸ್ಪಂದಿಸಿದೆ. ಅಂತೆಯೇ ರೈತರ ಸಮಸ್ಯೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಸ್ಪಂದನೆ ಅತ್ಯಗತ್ಯವಾಗಿದೆ ಎಂದು ಒತ್ತಾಯಿಸಿದರು .

ರಾಜ್ಯದಲ್ಲಿ ಪ್ರಸಕ್ತ ವರ್ಷ 25 ಲಕ್ಷ ರೈತರು ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲವನ್ನು ಮಾಡಿದ್ದು ಸುಮಾರು 13,300 ಕೋಟಿ ರೂ ಗಳು ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂದು ಆಗ್ರಹಿಸಿದರು.ಹಾಸನ ಜಿಲ್ಲೆಯ ಪ್ರಸ್ತುತ 131657 ರೈತರು 660 ಕೋಟಿಗಳಷ್ಟು ಸಾಲವನ್ನು ಮಾಡಿದ್ದು ಇವರ ಸಾಲಮನ್ನ ಮಾಡಬೇಕಿದೆ.

ಲಾಕ್‌ ಡೌನ್ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ರೈತರ ಸಮಸ್ಯೆಗೆ ಸ್ಪಂದಿಸುವುದು ಅತ್ಯಗತ್ಯವಾಗಿದ್ದು ರೈತರ ಪರಿಸ್ಥಿತಿ ಹೀಗೆ ಮುಂದುವರಿದರೆ ರೈತರ ಕುಟುಂಬ ಬೀದಿ ಪಾಲಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರ ಸಹಾಯಕ್ಕೆ ಬರುವ ಮೂಲಕ ಸಾಲಮನ್ನ ಮಾಡಬೇಕೆಂದು ಆಗ್ರಹಿಸಿದರು.

ಸರ್ಕಾರ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗದೆ ಸರ್ವ ಜನರಿಗೂ ಸಮನಾಗಿ ಪರಿಹಾರ ವಿತರಣೆ ಮಾಡಬೇಕು ಎಂದು ಹೇಳಿದ ಅವರು ಅರ್ಚಕರಿಗೂ ಸರ್ಕಾರ ಸಹಾಯ ಮಾಡಬೇಕಾಗಿದೆ ಎಂದರು.

Facebook Comments

Sri Raghav

Admin