ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚಿಸುವುದೇ ನನ್ನ ಗುರಿ : ರೇವಣ್ಣ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಜಿಲ್ಲೆಯಲ್ಲಿ “ಕಾವೇರಿ ಗ್ರಾಮೀಣ ಬ್ಯಾಂಕ್ ಬಾಗಿಲು ಮುಚ್ಚಿಸುವುದೆ ನನ್ನ ಮೊದಲ ಗುರಿ” ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣನವರು ಆಕ್ರೋಶ ವ್ಯಕ್ತಪಡಿಸಿದ ಘಟನೆ‌ ನಡೆದಿದೆ. ರೇವಣ್ಣ ಅವರು ತಮ್ಮ ತಾಳ್ಮೆ ಕಳೆದುಕೊಂಡು
ಬ್ಯಾಂಕ್ ಅಧಿಕಾರಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಕೆ ಮಾಡಿದ ಪ್ರಸಂಗ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಶುಕ್ರವಾರ ನಡೆದಿದೆ.

ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗ ಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆ ಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣನವರು ಮಾತನಾಡಿ, ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಸಿಡಿ ಮಿಡಿಗೊಂಡು ಸಭೆಯಲ್ಲಿ ತಾಳ್ಮೆ ಕಳೆದುಕೊಂಡು ರೇಗಾಡಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ನವರು ಜನರನ್ನ ಹಾಳು ಮಾಡುತ್ತಿದ್ದಾರೆ ಎಂದರಲ್ಲದೇ “ಲೋಫರ್ ನನ್ಮಕ್ಕಳು, ಹಲ್ಕಾ ನನ್ಮಕ್ಕಳು, ಲೂಟಿ ಕೋರರು, ಜನರ ದುಡ್ಡು ದೋಚಲು ಇವರಿದ್ದಾರೆ” ಎಂದು ಹರಿಹಾಯ್ದರು. ನಾನೇ ಜಾಮೀನು ಹಾಕಿದ್ರೂ ಇವರು ಸಾಲಾ ಕೊಡಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಈ ಜಿಲ್ಲೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚಿ ಸೋದೆ ನನ್ನ ಮೊದಲ ಗುರಿ ಎಂದು ಶಪಥ ಮಾಡಿದರು.

ಉದ್ಯೋಗಿನಿ ಯೋಜನೆಯಲ್ಲಿ ಸಬ್ಸೀಡಿ ಕೊಡುವುದಕ್ಕೆ ನಾನೆ ಖುದ್ಧಾಗಿ ಇಬ್ಬರಿಗೆ ನಾನೇ ಜಾಮೀನು ನೀಡಿ ಸಹಿ ಹಾಕಿದರೂ ಕಾವೇರಿ ಬ್ಯಾಂಕಿನವರು ಅಪ್ರೋಲ್ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ಅಸಮಧಾನ ಹೊರ ಹಾಕಿದರು. ಹಾಸನ ಜಿಲ್ಲೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚು ವುದೆ ನಮ್ಮ ಮೊದಲ ಆಧ್ಯತೆ ಎಂದು ಎಚ್ಚರಿಸಿದಲ್ಲದೇ ಸಿಟ್ಟಿಗೆದ್ದು ಸಭೆಯಲ್ಲಿ ಕೂಗಾಡಿದರು.

Facebook Comments

Sri Raghav

Admin