ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಗೂ ಸಾಧ್ಯವಿಲ್ಲ. ಜೆಡಿಎಸ್ ಪಕ್ಷ ಹಡಗಲ್ಲ, ಸಬ್‍ಮೆರಿನ್. ಯಾವಾಗ ಬೇಕಾದರೂ ಮೇಲಕ್ಕೆ ಏಳುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರೊಂದಿಗೆ ಮಾತನಾಡಿದ್ದಾರೆ. ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದರು.

ನಂಜನಗೂಡು ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸಬಾರದು ಎಂದಲ್ಲ, ದೇಗುಲ ಕೆಡಹುವುದು ಮುಖ್ಯವಲ್ಲ, ಅಭಿವೃದ್ಧಿ ಮುಖ್ಯ. ಯಾವುದೇ ದೇವಾಲಯವಿದ್ದರೂ ಅಭಿವೃದ್ಧಿ ಮಾಡಬೇಕು ಎಂದರು. ಬಿಜೆಪಿಯವರು ಬೆಳಗಾದರೆ ಹಿಂದೂ ಧರ್ಮ ಎನ್ನುತ್ತಾರೆ. ಅವರು ಧರ್ಮ ನೋಡಿಕೊಳ್ಳುವುದು ಇದೇನಾ ಎಂದ ಅವರು, ಇದು ರಾತ್ರೋರಾತ್ರಿ ಕಟ್ಟಿದ ದೇವಾಲಯವಲ್ಲ ಎಂದು ಹೇಳಿದರು.

Facebook Comments