7000 ಕೋಟಿ‌ ಕಾಮಗಾರಿಗೆ‌ ಯಡಿಯೂರಪ್ಪ ಬ್ರೇಕ್, ಎಚ್.ಡಿ.ರೇವಣ್ಣ ಕೆಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ರಾಜ್ಯದ ಕಾವೇರಿ‌ ಜಲಾನಯನ ಪ್ರದೇಶ ವ್ಯಾಪ್ತಿಯ 7 ಜಲಾಶಯದ ಸುಮಾರು 7150 ಕೋಟಿ ಕಾಮಗಾರಿಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬ್ರೇಕ್ ಹಾಕಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿ‌ ಚಾಕೇನಹಳ್ಳಿ ಮಿನಿಡ್ಯಾಂ ಗೆ ಪತ್ನಿ ಭವಾನಿ‌‌ ರೇವಣ್ಣ ಹಾಗು ಪುತ್ರ ಸಂಸದ ಪ್ರಜ್ವಲ್ ಅವರೊಂದಿಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು ರಾಜ್ಯದ ಕಬಿನಿ, ಕೆ ಆರ್ ಎಸ್, ಹಾರಂಗಿ, ಹೇಮಾವತಿ ಸೇರಿದಂತೆ 7 ಜಲಾಶಯಗಳ ಸುಮಾರು 7150 ಕೋಟಿ ಜಲಾಶಯ ಅಭಿವೃದ್ಧಿ ಯೋಜನೆಯ ಅನುದಾನ ಕ್ಕೆ‌‌ ಬಿಜೆಪಿ‌ ಸರ್ಕಾರ ತಡೆಯೊಡ್ಡುವ ಮೂಲಕ ದ್ವೇಷ ದ ರಾಜಕೀಯ ಮಾಡುತ್ತಿದೆ.

ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗೆ 2017-18 ,2018-19 ನೇ ಸಾಲಿನ ಕಾಮಗಾರಿಗಳಾಗಿದ್ದು ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಮಂಜೂರಾತಿ ನೀಡಲಾಗಿತ್ತು, ಅಲ್ಲದೆ ಮಂಡ್ಯ, ಹಾಸನ, ತುಮಕೂರು ಕ್ಷೇತ್ರದ ಜಲಾನಯನ ಪ್ರದೇಶದ ಜನರನ್ನು ಗುರಿಯಾಗಿಸಿ ಆಯಾ ಕ್ಷೇತ್ರದ ಶಾಸಕರನ್ನು‌ಗುರಿಯಾಗಿಸಿ ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಕಸಕರ‌ ಕ್ಷೇತ್ರಕ್ಕೆ ಸೇರಿದ ಜಲಾಶಯದ ಅಭಿವೃದ್ಧಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು‌ ಆರೋಪಿಸಿದರು. ಮಂಡ್ಯ‌ ,ಮೈಸೂರು ಜಲಾನಯನ ‌ವ್ಯಾಪ್ತಿಯ 5150 ಕೋಟಿ‌ ಕಾಮಗಾರಿ ಹಾಗೂ ಹಾಸನ ,ತುಮಕೂರು ಜಲಾನಯನ ವ್ಯಾಪ್ತಿಯ 1650 ಕೋಟಿ ಹಾಗೂ ಹೇಮಾವತಿ ಜಲಾಶಯ ಅಭಿವೃದ್ಧಿ ಯೋಜನೆಯ ಸುಮಾರು 500 ಕೋಟಿ‌‌ ಕಾಮಗಾರಿಗೆ‌ ಯಡಿಯೂರಪ್ಪ ತಡೆಯೊಡ್ಡಿದ್ದಾರೆ ಎಂದು ದೂರಿದರು.

ಪಕ್ಷ ತೊರೆದಿರೊ ಅತೃಪ್ತ ಶಾಸಕರ‌ ಕ್ಷೇತ್ರವನ್ನು‌ ಹೊರತು ಪಡಿಸಿ ಉಳಿದ ಕ್ಷೇತ್ರದ ಜಲಾಶಯಗಳ ಕಾಮಗಾರಿಗೆ ಬ್ರೇಕ್ ಹಾಕಲಾಗಿದೆ‌‌ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಈ ಕ್ಷೇತ್ರದ ಜನರು ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು. ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದ‌ ಅವಧಿಯಲ್ಲಿ ಈ ಕಟ್ಟೆ ತುಂಬಿತ್ತು ನಂತರ‌ ಇದೇ ಮೊದಲ ಬಾರಿ ಕಟ್ಟೆ ತುಂಬಿಹರಿದಿದ್ದು‌ ರೈತರ ಮೊಗದಲ್ಲಿ ಸಂತಸ‌ ತಂದಿದೆ‌ ಎಂದರು.

# ಬಿಜೆಪಿ‌ ತೆಗೆಯುವುದೆ ನಮ್ಮ‌ ಗುರಿ;
ಇಂತಹ ದ್ವೇಷದ ರಾಜಕೀಯ ಹೆಚ್ಚುದಿನ ನಡೆಯೋದಿಲ್ಲಾ ನಮ್ಮ‌ ಅಧಿಕಾರವಧಿಯಲ್ಲಿ ಮಂಜೂರಾತಿ ನೀಡಿದ್ದ ಕಾಮಗಾರಿಗಳಿಗೆ ಬಿಜೆಪಿ ಬ್ರೇಕ್ ಹಾಕುವ‌ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ‌ ಬಿಜೆಪಿ‌ ತೆಗೆಯುವುದೆ ನಮ್ಮ ಪ್ರಥಮ ಆದ್ಯತೆ ಎಂದು ರೇವಣ್ಣ ತಿಳಿಸಿದರು‌.

# ಅಧಿವೇಶನದಲ್ಲಿ ಚರ್ಚೆ;
ನೆರೆ ಹಾವಳಿ ಪರಿಹಾರ ಕ್ರಮದಲ್ಲಿ ವಿಳಂಬ, ಕಾಮಗಾರಿಗಳಿಗೆ ಬ್ರೇಕ್, ಆಡಳಿತ ವೈಫಲ್ಯ ಸೇರಿದಂತೆ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ನಾಳೆಯಿಂದ ನಡೆಯುವ ಚಳಿಗಾಲದ‌ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ರೇವಣ್ಣ ತಿಳಿಸಿದರು.

Facebook Comments

Sri Raghav

Admin