ವರ್ಗಾವಣೆ ದಂಧೆ ಹಾಗೂ ದ್ವೇಷ ರಾಜಕೀಯದಲ್ಲೆ‌ ಕಾಲ ಕಳೆದ‌ ಬಿಜೆಪಿ ಸರ್ಕಾರ : ರೇವಣ್ಣ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಕಳೆದ 12‌ ತಿಂಗಳಿಂದ ವರ್ಗಾವಣೆ ದಂಧೆಯಲ್ಲಿ‌‌ ಹಣ ಲೂಟಿ ಮಾಡಿರುವುದೇ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ‌ ಮಹಾ ಸಾಧನೆ‌ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಮುಂದಿನ ದಿನ ದಾಖಲೆ ಸಹಿತ ಆರೋಪ ಮಾಡುತ್ತೇನೆ‌.‌ ‌ಹಾಸನಕ್ಕೆ ನಿಯೋಜನೆ ಗೊಂಡಿರುವ ಇಂಜಿನಿಯರ್ ಗಳು ಲಕ್ಷಾಂತರ ರು ನೀಡಿ ಬಂದಿದ್ದಾರೆ ಈ ಬಗ್ಗೆ ಅವರೇ ಹೇಳಿದ್ದಾರೆ..

ಮಾನ‌ ಮರ್ಯಾದೆ ಇಲ್ಲದ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ‌ ಈಶ್ವರಪ್ಪ ಅವರು ನಾಲಿಗೆ ಹರಿಬಿಡೋದು ಬೇಡ.. ಹಣ ಎಣಿಕೆಯ ಮಿಷನ್ ಯಾರ ಮನೆಯಲ್ಲಿ ಇತ್ತು…!! ಚುನಾವಣಾ ಸಂದರ್ಭ ದಲ್ಲಿ ಅವರ ಮನೆಯಲ್ಲಿಯೇ ದೊರೆತದ್ದು ಜನರಿಗೆ ತಿಳಿದಿದೆ ಅಂತಹವರು ನನ್ನ ಮೇಲೇ ಆರೋಪ ಮಾಡೋದು ಎಷ್ಟು ಸರಿ..!! ಎಂದರು.

ಬಿಜೆಪಿ ಪಕ್ಷದ ಮುಖಂಡರಾದ ಹಾಗೂ ಸಚಿವರಾದ ಈಶ್ವರಪ್ಪ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಅಳಿಯನನ್ನು ಶಿವಮೊಗ್ಗ ಲೋಕೋಪಯೋಗಿ ಇಲಾಖೆಗೆ ನಿಯೋಜನೆ ಮಾಡಿದೆ ಅಲ್ಲದೆ ಈಶ್ವರಪ್ಪ ಅವರು ಕೆಲವರನ್ನು ವರ್ಗಾವಣೆ ಮಾಡಿಸಿದರು. ಸಹಾಯ ಪಡೆದ ಈಶ್ವರಪ್ಪ ಅವರು ಇಂದು ನನ್ನ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ..? ಅವರ ನಾಲಿಗೆಯನ್ನು ಹರಿಬಿಡುತ್ತಿರುವುದು ಅವರ ಗೌರವಕ್ಕೆ ತರವಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಹ ಸರಿಯಾದ ಆಡಳಿತ ನೀಡುತ್ತಿಲ್ಲ 1947 ರಲ್ಲಿ ಬ್ರಿಟಿಷರ ಆಡಳಿತವನ್ನು ಇಂದು ಬಿಜೆಪಿ ಆಡಳಿತ‌ ನೆನಪಿಸುತ್ತಿದೆ..ಗ್ರಾಪಂ ಚುನಾವಣೆ ನಡೆದಿಲ್ಲಾ.. ಹಾಗೂ ಪುರಸಭೆ ನಗರಸಭೆಗೆ ಚುನಾವಣೆ ಮುಗಿದು ಎರಡು ವರ್ಷಗಳು ಕಳೆದರು ಜನಪ್ರತಿನಿಧಿಗಳು ಅಧಿಕಾರ ಹಿಡಿದಿಲ್ಲಾ ಇಂತಹ ದುರಾಡಳಿತದ ಸರ್ಕಾರ‌ ನಾ ಎಂದು ಕಂಡಿಲ್ಲಾ ಎಂದು ರೇವಣ್ಣ ಕಿಡಿಕಾರಿದರು.

ಬಿಜೆಪಿ‌‌ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು‌ ವರ್ಷ ಆಯ್ತು ; ಯಡಿಯೂರಪ್ಪ ಅವರು ದ್ವೇಷ ರಾಜಕೀಯ ಮಾಡಲ್ಲಾ ಎಂದವರು‌ ಇಂದು ಜಿಲ್ಲೆಯಲ್ಲಿ ಯಾವುದೇ ಕಾಮಗಾರಿ ನಡಯದಂತೆ ಅಡ್ಡಿ‌‌ಮಾಡುತ್ತಿದ್ದಾರೆ. ಬಹುತೇಕ ಎಲ್ಲಾ‌ ಕೆಲಸ ಸ್ಥಗಿತ ವಾಗಿದೆ.

ಚಿಕ್ಕಮಗಳೂರು- ಬೇಲೂರು ರೈಲು ಮಾರ್ಗ 462 ಕೋಟಿ ಮಂಜೂರಾತಿ ದೊರೆತಿತ್ತು‌…ಮೂರು ವರ್ಷಗಳ ಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಆದರೆ‌ ಇದುವರೆಗೆ ಅದು ಕಾರ್ಯಗತವಾಗದೆ ನೆನೆಗುದಿಗೆ‌ ಬಿದ್ದಿದೆ.

ಈ ಮಾರ್ಗ ಹಾಗೂ ಕಡೂರು ಸಂಪರ್ಕ ರೈಲು ಮಾರ್ಗಕ್ಕೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ಎಚ್.ಡಿ.ದೇವೇಗೌಡರು ಮಂಜೂರಾತಿ ದೊರಕಿಸಿಕೊಟ್ಟಿದ್ದರು ಇಂದು‌‌ ಆ ಯೋಜನೆಗೂ ತಡೆಯೊಡ್ಡಲಾಗುತ್ತಿದೆ‌‌ ಎಂದು ದೂರಿದರು.

ಶಾಂತಿಗ್ರಾಮ ಬಳಿ ಬಂದಿಖಾನೆ ನಿರ್ಮಾಣ‌ ಕಾಮಗಾರಿಗೂ ಬ್ರೇಕ್ ಬಿದ್ದಿದೆ ಚನ್ನಪಟ್ಟಣ ಬಸ್ ನಿಲ್ದಾಣ ಎದುರಿನ ಉದ್ಯಾನವನ ನಿರ್ಮಾಣ 144 ಕೋಟಿ ವೆಚ್ಚದ ಕಾಮಗಾರಿಗೆ ತಡೆಯೊಡ್ಡಲಾಗಿದೆ ಈಗಾಗಲೇ ಕಾಮಗಾರಿಗೆ 36 ಕೋಟಿ‌‌ ಮಂಜೂರಾತಿ ದೊರೆತಿದೆ‌ ಎಂದರು.

ಹಾಸನ ಜಿಲ್ಲೆಯ ನೀರಾವರಿ ಇಲಾಖೆ ಸೇರಿದಂತೆ ಹಲವು‌ ಕಾಮಗಾರಿ‌ ನೆನೆಗುದಿಗೆ‌ ಬಿದ್ದಿವೆ . ನೀರಾವರಿ ಇಲಾಖೆ ಕಾಮಗಾರಿ ಟೆಂಡರ್‌ ಆಗಿ ವರ್ಕ್ ಆರ್ಡರ್‌ ನೀಡುವ ಸಮಯದಲ್ಲಿ ಕೆಲಸ‌ ನಿಲ್ಲಿಸಲಾಗಿದೆ. ಅಲ್ಲದೆ ಇಂದು ಬಹುತೇಕ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ‌ ಮಾಡುತ್ತಿಲ್ಲಾ… ಪಟ್ಟಣ ಪಂಚಾಯತ್ ಪುರಸಭೆ ಗಳಿಗೆ ನೀಡಿದ ಹಣ ತಡೆ ಹಿಡಿಯಲಾಗಿದೆ.

ಬಿಜೆಪಿ ಸರ್ಕಾರ ಅದೆಷ್ಟು ದಿನ ಇಂತಹ ದ್ವೇಷ ದ ರಾಜಕೀಯ ಮಾಡುತ್ತದೆ ಮಾಡಲಿ ನಾನೂ ನೋಡುತ್ತೇನೆ. ಅಧಿಕಾರ ಶಾಶ್ವತವಲ್ಲಾ..ಇಂತಹ ರಾಜಕೀಯ ಮಾಡಿ‌ ಜಿಲ್ಲೆಯಲ್ಲಿ ಬಿಜೆಪಿ ಹೇಗೆ ಜನರ‌ ಬಳಿ ಮತ ಕೇಳುತ್ತದೆ ನೋಡುವೆ ಎಂದರು.

ಜಿಲ್ಲೆಯ ಕಾರ್ಮಿಕ ಇಲಾಖೆಯೆ ನೊಂದಾಯಿತ ಕಾರ್ಮಿಕರಿಗೆ ಕಿಟ್ ನೀಡಲಿಲ್ಲಾ ರಾಜ್ಯದ ಇತರೆ ಜಿಲ್ಲೆಗಳಿಗೆ ಕಾರ್ಮಿಕರಿಗೆ ಹತ್ತು ಸಾವಿರ ರೂಗಳ ಕಿಟ್ ಗಳನ್ನು ರಾಜ್ಯ ಸರ್ಕಾರ ನೀಡಿತು ಆದರೆ ಜಿಲ್ಲೆಯ ಕಾರ್ಮಿಕರಿಗೆ ಕಿಟ್ ನೀಡದೆ ವಂಚಿಸಿದೆ ಎಂದು ರೇವಣ್ಣ ಆರೋಪಿಸಿದರು .

Facebook Comments

Sri Raghav

Admin