ನೆರೆ ಸಂತ್ರಸ್ತರಿಗೆ ನೆರವಾಗುವಲ್ಲಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ : ಎಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ತೀವ್ರ ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ‌ ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.ನಗರದ‌ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದುವರೆಗೆ ಕೆಂದ್ರದಿಂದ ಬಿಡಿಗಾಸು ರಾಜ್ಯದ ನೆರೆ ಸಂತ್ರಸ್ತರಿಗೆ ತಲುಪಿಲ್ಲಾ , ನೆರೆ ಸಂತ್ರಸ್ತರ ಗೋಳು ಕೇಳೋರಿಲ್ಲಾ ಎಂದರು.

ರಾಜ್ಯದ ಕೊಡಗು ಹಾಗೂ ಇತರೆಡೆ ಅತಿವೃಷ್ಟಿ ಯಾದಾಗ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಕೂಡಲೆ ಪರಿಹಾರ ಹಣ ಬಿಡುಗಡೆ ಮಾಡಿದ್ದರು ಹಾಗೂ ಸೂರು ಕಲ್ಪಿಸಿದ್ದರು.ಇಂದು ಆಡಳಿತ ವಿಫಲತೆಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿದೆ ಮುಖ್ಯಮಂತ್ರಿ ಯಡಿಯೂರಪ್ಪ . ನೆರೆ ಹಾವಳಿ ಪರಿಹಾರ ಕಾರ್ಯ ನಿಭಾಯಿಸಲು ವಿಫಲರಾಗಿರುವುದು ಸಾಬೀತಾಗಿದೆ.

ನೆರೆ ಪರಿಹಾರ‌ ಕಾರ್ಯ ನಿಭಾಯಿಸಲು ವಿಫಲವಾಗಿರುವ ಸರ್ಕಾರ ಇದನ್ನು ಮರೆಮಾಚಲು ದೂರವಾಣಿ ಕದ್ದಾಲಿಕೆ ಹಾಗೂ ಇತರೆ ವಿವಾದವನ್ನು ಪ್ರಾಸ್ತಾಪ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು. ಲೋಕಸಭೆ ಚುನಾವಣೆ ವೇಳೆ ರಾಜ್ಯದ ಮಂಡ್ಯ, ತುಮಕೂರು ,ಹಾಸನ ಲೋಕಸಭಾ ಕ್ಷೇತ್ರವನ್ನು ಗುರಿಯಾಗಿಸಿ ಕೊಂಡು ಕೇಂದ್ರ ಸರ್ಕಾರ ಬೇಹುಗಾರಿಕೆ ನಡೆಸಿತು; ಈ ಮೂಲಕ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ತುಳಿಯಲು ಎರಡು ರಾಷ್ಟ್ರೀಯ ಪಕ್ಷಗಳು ಹುನ್ನಾರ ನಡೆಸಿದವು ಎಂದು ರೇವಣ್ಣ ಗಂಭೀರ ಆರೋಪ‌ ಮಾಡಿದರು.

ಯಾವುದೇ ಪಕ್ಷದಿಂದ ಜೆಡಿಎಸ್ ಪಕ್ಷವನ್ನು ತುಳಿಯಲು ಸಾಧ್ಯವಿಲ್ಲಾ ಎಂದು ಹೇಳಿದ ರೇವಣ್ಣ ದ್ವೇಷದ ರಾಜಕೀಯ ಮಾಡಲ್ಲಾ ಎಂದು ಯಡಿಯೂರಪ್ಪ ಹೇಳುತ್ತಾರೆ ಆದರೆ ದಿನ ಬೆಳಗಾದರೆ ದೂರವಾಣಿ ಕದ್ದಾಲಿಕೆ ಸೇರಿದಂತೆ ಹಲವು ಸಲ್ಲದ ಆರೋಪ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಹಲವು ಕಾಮಗಾರಿಗೆ ಬ್ರೇಕ್ ಹಾಕಿದ್ದಾರೆ.. ಸಕಲೇಶಪುರದಲ್ಲಿ 20 ಸೇತುವೆ ಕಾಮಗಾರಿಗೂ ಬ್ರೇಕ್ ಹಾಕಿದ್ದಾರೆ 20 ಕೋಟಿ ಕಾಮಗಾರಿಗೆ‌ ತಡೆಯೊಡ್ಡಿದ್ದಾರೆ. ಬೇಲೂರಿನಲ್ಲು ಹಲವು ಸೇತುವೆ ನಿರ್ಮಾಣಕ್ಕೆ ಮಂಜೂರಾಗಿದ್ದ ಕಾಮಗಾರಿಗೆ ತಡೆಯೊಡ್ಡಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಉದ್ಯೋಗ ಖಾತ್ರಿ ಯೊಜನೆಯ 63 ಕೋಟಿ ಹಣ ಬಿಡುಗಡೆಯಾಗಿಲ್ಲಾ. 19 ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಹಣ ಬಿಡುಗಡೆ ಮಾಡಿಲ್ಲಾ.ಹೊಳೆನರಸೀಪುರ ತಾಲ್ಲೂಕಿನಲ್ಲಿಯೇ ಈ ಯೋಜನೆಯ ಲಕ್ಷಾಂತರ ಹಣ ಬಾಕಿ ಇದೆ‌‌ ಎಂದು‌ ಆಪಾದಿಸಿದರು.

# 15 ದಿನ‌ ಅಧಿವೇಶನ;
ಕನಿಷ್ಟ 15 ದಿನ ಅಧಿವೇಶನ ನಡೆಸಲು ಒತ್ತಾಯಿಸಿದ ರೇವಣ್ಣ , ಈ ವೇಳೆ 12 ಜಿಲ್ಲೆಯ ನೆರೆ ಹಾವಳಿ ಕುರಿರು ಪರಿಶೀಲನೆ ಹಾಗೂ ಗಂಭೀರ ಚರ್ಚೆ ನಡೆಸಲಿ ..ಉಪ ಚುನಾವಣೆ ಮುಂದೂಡಲಾಗಿದೆ ಅದ್ದರಿಂದ ಹೆಚ್ಚು ದಿನ ಅಧಿವೇಶನ ಕರೆಯಲಿ ಎಂದರು.

# ದಾಖಲೆ ತಿದ್ದುವ ಅಧಿಕಾರಿ;
ದಾಖಲೆ ತಿದ್ದುವ ಅಧಿಕಾರಿಗಳು ಜಿಲ್ಲೆಗೆ ವರ್ಗವಾಗಿ ಬಂದಿದ್ದು, ಜಿಲ್ಲಾಧಿಕಾರಿ ಜಾಗೃತರಾಗಬೇಕು… ಇಲ್ಲಾ ಮುಂದಿನ ಪರಿಣಾಮ‌ ಎದುರಿಸಬೇಕಾಗುತ್ತದೆ ಎಂದು ರೇವಣ್ಣ ಎಚ್ಚರಿಕೆ ನೀಡಿದರು. ಆದರೆ ಯಾವ ದಾಖಲೆ ತಿದ್ದಲು ಅವರು ಬಂದಿದ್ದಾರೆ ಎಂದು ರೇವಣ್ಣ ಸ್ಪಷ್ಟವಾಗಿ ಹೇಳಲಿಲ್ಲಾ.

Facebook Comments

Sri Raghav

Admin