ಬಿಜೆಪಿ-ಕಾಂಗ್ರೆಸ್ ಅಡ್ಜೆಸ್ಟ್ಮೆಂಟ್ ಮತ್ತು ಹಣದ ಹೊಳೆ ಜೆಡಿಎಸ್ ಸೊಲಿಗೆ ಕಾರಣ : ಎಚ್.ಡಿ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಡ್ಜಸ್ಟ್ಮೆಂಟ್ ರಾಜಕೀಯದಿಂದಾಗಿ ಹಾಗೂ ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣ ಹಂಚಿದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉಪ ಚುನಾವಣೆಯ ಲ್ಲಿ ಸೊಲುವಂತಾಗಿದೆ‌ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆರೋಪಿಸಿದರು .

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಚುನಾವಣೆಯ 15 ಕ್ಷೇತ್ರಗಳಲ್ಲೂ ಸಹ ಬಿಜೆಪಿ ಪಕ್ಷದ ಸಚಿವರು ಒಳಗೊಂಡಂತೆ ಹಣ ಹಂಚಿದರು ಪ್ರತಿ ಕ್ಷೇತ್ರಕ್ಕೆ 60ಕೋಟಿ ಹಣ ಮತದಾರರಿಗೆ ಹಂಚಿದ್ದಾರೆ 15 ಕ್ಷೇತ್ರಕ್ಕೆ ಸರಿ ಸುಮಾರು 750 ಕೋಟಿ ಸಾರ್ವಜನಿಕರ ಹಣ ಹಂಚಿಕೆ ಮಾಡಿರುವುದು ಜೆಡಿಎಸ್ ಪಕ್ಷ ಸೋಲಲು ಕಾರಣವಾಯಿತು ಎಂದರು.

ಉಪ ಚುನಾವಣೆ ಫಲಿತಾಂಶ ಹೊಸ ರಾಜಕೀಯ ತಿರುವಿಗೆ ಸಾಕ್ಷಿಯಾಗಿದ್ದು ಇಂದಿನಿಂದ ನಿಜವಾದ ಪರೀಕ್ಷೆ ಪ್ರಾರಂಭವಾಗಲಿದ್ದು ಜೆಡಿಎಸ್ ಪಕ್ಷ ಪುನಃ ಸಂಘಟನೆಗೊಂಡು 2023 ಕ್ಕೆ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಿಕೊಂಡ ಹಿನ್ನೆಲೆಯಲ್ಲಿ ಉಪಚುನಾವಣೆಯ ಬಹುತೇಕ ಕ್ಷೇತ್ರದಲ್ಲಿ ಜೆಡಿಎಸ್ಗೆ ಸೋಲುಂಟಾಯಿತು; ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹ ಈ ಎರಡು ಪಕ್ಷಗಳು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಿದವು, ರಾಜಕೀಯವಾಗಿ ಪ್ರಾದೇಶಿಕ ಪಕ್ಷವನ್ನು ತುಳಿಯಲು ಎರಡು ಪಕ್ಷಗಳು ಹುನ್ನಾರ ನಡೆಸುತ್ತಿವೆ ಇದರಲ್ಲಿ ಅವರು ಸಫಲರಾಗುವುದಿಲ್ಲ ಎಂದರು.

ಬಿಜೆಪಿಯೊಂದಿಗೆ ಜೆಡಿಎಸ್ 20-20 ಸರ್ಕಾರ ರಚನೆಗೆ ಅವಕಾಶಮಾಡಿ ಕೊಟ್ಟಿರದಿದ್ದರೆ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ ಎಂದ ಅವರು ಅಂದು ನಡೆದ ಉಪಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದೆವು ಹಾಗೂ ನಲವತ್ತಕ್ಕೂ ಹೆಚ್ಚು ಸ್ಥಾನಗಳಿಂದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ಮಾಡಿದ್ದೆವು ಆದರೆ ಈ ಬಾರಿ ಹಣ ಬಲದಿಂದ ಬಿಜೆಪಿ ಪಕ್ಷ ಗೆದ್ದಿದೆ ಎಂದರು .

ಮುಖ್ಯಮಂತ್ರಿ ಯಡಿಯೂರಪ್ಪ ಉಪಚುನಾವಣೆ ಫಲಿತಾಂಶ ಬಳಿಕ ಮಾತನಾಡಿದ್ದು ಸುವರ್ಣ ಕರ್ನಾಟಕ ಅಭಿವೃದ್ಧಿ ವಿಷಯವನ್ನು ಚರ್ಚಿಸಿದ್ದಾರೆ. ಎರಡು ಪಕ್ಷಗಳ ಬೆಂಬಲವನ್ನು ಕೋರಿದ್ದಾರೆ ಅದರಂತೆ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿ ವಿಷಯದಲ್ಲಿ ನಮ್ಮ ಬೆಂಬಲವಿದೆ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಸನ ಹಾಗೂ ಮಂಡ್ಯ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಅನುದಾನಗಳನ್ನು ತರಲಾಗಿತ್ತು ಅಂದು ಹಾಸನದ ಬಜೆಟ್ ಎಂದು ಲೇವಡಿ ಮಾಡಿದ್ದರು ಆದರೆ ಇಂದು ಆ ಕ್ಷೇತ್ರಗಳಿಗೆ ನಮ್ಮದೆ‌‌ ಹೆಚ್ಚಿನ ಕೊಡುಗೆ ಎಂದು ಬೀಗುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಅಧಿಕಾರ ಹಿಡಿಯುವ ಮುಂಚೆ ಶಿವಮೊಗ್ಗ ಜಿಲ್ಲೆ‌ ಅಭಿವೃದ್ಧಿ ಗಾಗಿ ಎರಡುವರೆ ಸಾವಿರ ಕೋಟಿ ಹಣದ ಹೊಳೆ‌ ಹರಿಸಿದರು‌ ಎಂದು ದೂರಿದ ಅವರು ಚಿಕ್ಕಬಳ್ಳಾಪುರ ರಾಮನಗರ ಜಿಲ್ಲೆಯನ್ನಾಗಿಸಿದ ಕುಮಾರಸ್ವಾಮಿಯವರಿಗೆ ಇಂದಿನ ಫಲಿತಾಂಶ ಬೇಸರ ತಂದಿದೆ ಎಂದರು.

Facebook Comments

Sri Raghav

Admin