‘ಯಡಿಯೂರಪ್ಪರನ್ನು ರಿಪೇರಿ ಮಾಡೋದು ನನಗೆ ಗೊತ್ತಿದೆ’ : ಎಚ್.ಡಿ.ರೇವಣ್ಣ ಚಾಲೆಂಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ದ್ವೇಷದ ರಾಜಕೀಯ ಮಾಡೊದಿಲ್ಲಾ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ದ್ವೇಷದ‌ ಆಡಳಿತ ನಡೆಸುತ್ತಿದ್ದು ಎಷ್ಟು ದಿನ‌ ಮಾಡುತ್ತಾರೆ ಮಾಡಲಿ.. ಯಡಿಯೂರಪ್ಪ ಅವರನ್ನು ರಿಪೇರಿ ಹೇಗೆ ಮಾಡೋದು ನನಗೆ ಗೊತ್ತಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ.

ನಗರದ ಹಾಸನ‌ ಹಾಲು ಒಕ್ಕೂಟದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜಕೀಯ ನನಗೆ ಹೊಸದೇನಲ್ಲಾ ಯಡಿಯೂರಪ್ಪ ಅಂತಹವರಿಗೆ ಹೆದರಿ‌‌ ರಾಜಕೀಯ ಬಿಟ್ಟು ಓಡಿ ಹೋಗೊಲ್ಲ .. ಇಂತಹ ಯಡಿಯೂರಪ್ಪರನ್ನು ಎಷ್ಟು ಮಂದಿಯನ್ನು ನೋಡೊದ್ದಿನಿ ಎಂದು ಕಾರವಾಗಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಲವು ಹುದ್ದೆ ಅಲಂಕರಿಸಿದ್ದಾರೆ ಹಾಗೂ ನಾನಾ‌ ತನಿಖೆಗೆ ಒಳಪಟ್ಟರು ಒಂದು ಕಪ್ಪು ಚುಕ್ಕಿ ಅವರ ಮೇಲೆ ಇಲ್ಲಾ‌ ನನ್ನ ಮೇಲು ಸಹ ಯಾವುದೇ ತನಿಖೆ ನಡೆಸಲು ನಾನು ಹೆದರಿ ಓಡಿ ಹೋಗುವವನಲ್ಲ ಎಂದರು.

ನಾನು ಅಧಿಕಾರದಲ್ಲಿದ್ದ 15 ತಿಂಗಳಲ್ಲಿ ಹಾಸನ ಜಿಲ್ಲೆಗೆ ಬೇಕಾದ ಎಲ್ಲಾ ಕೆಲಸವನ್ನು ಹಾಗೂ ಮುಂದೆಯಾಗಬೇಕಾದ ಕಾಮಗಾರಿಗೆ ಏನು ಕೆತ್ತಬೇಕು ಅದನ್ನೆಲ್ಲಾ ಕೆತ್ತಿದ್ದೇನೆ ಎಂದು ಮಾರ್ಮಿಕವಾಗಿಯೇ ನುಡಿದ ರೇವಣ್ಣ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲಾ ಎಂದರು.

ಹಾಸನ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ ನಂ 1 ಸ್ಥಾನಕ್ಕೆ ತರುವುದೆ ನನ್ನ ಪ್ರಮುಖ ಗುರಿಯಾಗಿದೆ. ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಒಕ್ಕೂಟವನ್ನು ಬೇರ್ಪಡಿಸಲು ರಾಜ್ಯ ಸರ್ಕಾರ ಚಿಂತನೆ‌ ನಡೆಸಿದೆ ಇದರಿಂದ ನಮಗೇನು ನಷ್ಟವಿಲ್ಲಾ ಇದುವರೆಗೆ ಎಲ್ಲಾ ಜಿಲ್ಲೆಯ ಒಕ್ಕೂಟವನ್ನು‌ ನಾನು ಸಮನಾಗಿ ಕಂಡಿದ್ದು ಅಭಿವೃದ್ಧಿ ಪಡಿಸಿದ್ದೇನೆ ಎಂದರು.

Facebook Comments

Sri Raghav

Admin