ನೆರೆ ಸಂತ್ರಸ್ತರಿಗೆ ಬಿಡಿಗಾಸೂ ಬಿಚ್ಚದ ರಾಜ್ಯ ಸರ್ಕಾರ : ರೇವಣ್ಣ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ನೆರೆ ಹಾವಳಿ ಹಾಗೂ ಅತೀವೃಷ್ಟಿಯಿಂದ ಬೆಳೆ‌ ಹಾನಿ ಪರಿಹಾರವಾಗಿ ರಾಜ್ಯ‌ ಸರ್ಕಾರ ಇದುವರೆಗೆ ಬಿಡಿಗಾಸು ಬಿಡುಗಡೆ‌ ಮಾಡಿಲ್ಲಾ‌ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲಾ; ಸಚಿವರು ನಾಮಕಾವಸ್ತೆ ಕಾರ್ಯ ನಿರ್ವಾಹಣೆ ಮಾಡುತ್ತಿದ್ದಾರೆ. ಸೂರು ಕಟ್ಟಿಕೊಳ್ಳಲು 1 ಲಕ್ಷ ಪರಿಹಾರ‌ ನೀಡುವುದಾಗಿ ಹೇಳಿದೆ ಆದರೆ ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲಾ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಜನರಲ್ಲಿ ಈ ಸರ್ಕಾರದ‌ ಬಗ್ಗೆ ಉತ್ತಮ ಅಭಿಪ್ರಾಯ ಇತ್ತು ಹಾಗೂ ಆಶಾ‌ಭಾವನೆ‌ ವ್ಯಕ್ತಪಡಿಸಿದ್ದರು ಆದರೆ ಇದು ಕೇವಲ‌ ಹುಸಿ‌ಯಾಗಿದೆ‌. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರು ನೆರೆ ಹಾವಳಿ ಹಾಗೂ ಬೆಳೆ ಪರಿಹಾರ ಹಣ ಸಮರ್ಪಕವಾಗಿ ಬಿಡುಗಡೆಯಾಗಿಲ್ಲಾ ಎಂದು ಆಪಾದಿಸಿದರು‌.

‌ ರಾಜ್ಯ ಸರ್ಕಾರ‌ ಕೇಂದ್ರದೊಂದಿಗೆ ಉತ್ತಮ ಸ್ಪಂದನೆ‌ ಇದ್ದಿದ್ದರೆ ಈ ವೇಳೆಗೆ‌ ರಾಜ್ಯಕ್ಕೆ 15 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು ; 20 ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಇದ್ದರು ಸಹ ಪರಿಹಾರ ಹಣ‌ ಬಿಡುಗಡೆ ಯಾಗಿಲ್ಲಾ‌ ಎಂದ ಅವರು ಸಧ್ಯ ಯಾವುದೇ ಚುನಾವಣೆ ಇಲ್ಲಾ‌ವಾದ್ದರಿಂದ ಬೆಕಾಬಿಟ್ಟಿ ಆಶ್ವಾಸನೆ ಯ ಅಡಳಿತ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

# ವರ್ಗಾವಣೆ ದಂಧೆ..!
ರಾಜ್ಯ ಸರ್ಕಾರ ಕೇವಲ ವರ್ಗಾವಣೆ ದಂಧೆ ಮಾಡುವುದರಲ್ಲಿ ನಿರತವಾಗಿದ್ದು ಇದರಲ್ಲಿ ಜಾತಿ‌ ರಾಜಕೀಯ ಮಾಡುತ್ತಿದ್ದು 24 ಮಂದಿಯಲ್ಲಿ 15 ಮುಖ್ಯ ಆಯುಕ್ತರಿಗೆ ಏಕಾ‌ಏಕಿ ಬಡ್ತಿ‌ ನೀಡಲಾಗಿದೆ ಉಳಿದವರನ್ನು ಜಾತಿಯ ಆಧಾರದಲ್ಲಿ ಅವರ ವರ್ಗಾವಣೆ ವಿಲೆ ಇಡಲಾಗಿದೆ‌ ಇಂತಹ ರಾಜಕೀಯ ಹೆಚ್ಚು ದಿನ‌ನಡೆಯೊಲ್ಲಾ ಎಂದು ಕಿಡಿಕಾರಿದರು.

# ಬ್ರೇಕ್ ಹಾಕಲಿ..!
ನನ್ನ‌ ಕಾಮಗಾರಿಗೆ ಬ್ರೇಕ್ ಹಾಕಲಿ ಆದರೆ ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಬ್ರೇಕ್ ಹಾಕಬೇಡಿ‌ ಎಂದು ಸರ್ಕಾರಕ್ಕೆ ಒತ್ತಾಯಿಸಿದ ರೇವಣ್ಣ ನೆರೆ ಹಾವಳಿ ಸಂತ್ರಸ್ತರನ್ನು ಸಂತೈಸುವಲ್ಲಿ‌‌ ಸರ್ಕಾರ ಸಫಲವಾಗಿಲ್ಲಾ ಎಂದರು.

ಕುಮಾರಸ್ವಾಮಿ‌ ಅವರ ಅವಧಿಯಲ್ಲಿ 94 ಸಾವಿರ ರೈತ ಕುಟುಂಬಕ್ಕೆ ಸಾಲಮನ್ನಾ ಯೋಜನೆ ಫಲ ದೊರೆತಿದೆ.ಆದರೆ ಇಂದಿನ ರಾಜ್ಯಸರ್ಕಾರ. ಕೇವಲ‌ ಬುಟಾಟಿಕೆ ಆಶ್ವಾಸನೆ ನೀಡುತ್ತಾ ಬಂದಿದ್ದು ಉತ್ತಮ ಆಡಳಿತ ನಿಡುವಲ್ಲಿ‌ ವಿಫಲವಾಗಿದೆ ಎಂದರು.

# ಉತ್ತರಾಧಿಕಾರಿ ಇಲ್ಲಾ..!
ನಮ್ಮಲ್ಲಿ ಯಾರೂ ಉತ್ತರಾಧಿಕಾರಿ ಇಲ್ಲಾ ದೆವೇಗೌಡರೇ ನಮ್ಮ‌ ಪರಮೋಚ್ಚ ನಾಯಕರು ಬೇರೆ ಪಕ್ಷದಲ್ಲಿ ಇರುವಂತೆ ರಾಜಕೀಯ ಸ್ಥಾನಮಾನಕ್ಕೆ ಕಿತ್ತಾಟ ನಮ್ಮ‌ ಪಕ್ಷದಲ್ಲಿ ಇಲ್ಲಾ ಎಂದು ಸಮರ್ಥನೆ ಮಾಡಿಕೊಂಡರು‌.

ಅ.16 ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಕೇಂದ್ರ ಸರ್ಕಾರದೊಂದಿಗೆ ಸೂಕ್ತವಾಗಿ ಮಾತುಕತೆ ನಡೆಸಿ ನೆರೆ ಪರಿಹಾರ‌ಕ್ರಮಕ್ಕೆ ಹಾಗೂ ಬೆಳೆ‌ ಪರಿಹಾರ ಹಣ ಬಿಡುಗಡೆಗೊಳಿಸಲು ರೇವಣ್ಣ ಒತ್ತಾಯಿಸಿದರು.

Facebook Comments

Sri Raghav

Admin