ನೆರೆ ಪರಿಹಾರದ ಬಗ್ಗೆ ಚರ್ಚಿಸಲು ಸಿಎಂ ಕೂಡಲೇ ಸರ್ವಪಕ್ಷ ಸಭೆ ‌‌ಕರೆಯಲಿ : ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ; ನೆರೆ ಹಾವಳಿ ಸ್ಥಿತಿ-ಗತಿ ಹಾಗೂ ಪರಿಹಾರ ಕ್ರಮದ ಬಗ್ಗೆ ಚರ್ಚಿಸಲು ಕೂಡಲೇ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ತುರ್ತು ಸರ್ವಪಕ್ಷಗಳ ಸಭೆ ಕರೆಯಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ನೆರೆ ಹಾವಳಿ ಪರಿಹಾರ ಕಾರ್ಯ ಸಮಾಧಾನಕರವಾಗಿಲ್ಲಾ ಎಂದು ದೂರಿದ ಅವರು ರಾಜ್ಯ ಸರ್ಕಾರ ಸತ್ತಿದ್ದು ; ಜನರು ತೊಂದರೆಯಲ್ಲಿ ಸಿಲುಕಿದ್ದರು ಸಚಿವರು- ಶಾಸಕರು ವರ್ಗಾವಣೆದಂಧೆಯಲ್ಲಿ ನಿರತರಾಗಿದ್ದಾರೆ‌.

ಮೋದಿ ಹಿಂದೆ‌ ಪ್ರತಿಪಕ್ಷದವರ ಮೇಲೆ ಆರೋಪಿಸುತ್ತಿದ್ದಂತೆ ಪರ್ಸೆಂಟೆಜ್ ವರ್ಗಾವಣೆ ದಂಧೆ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಈ ವರ್ಗಾವಣೆ ದಂಧೆಯನ್ನು ಒಂದು‌ ಸಮಾಜವನ್ನು ಗುರಿಯಾಗಿಸಿ ಮಾಡುತ್ತಿದ್ದಾರೆ‌. ಬೆಂಗಳೂರಲ್ಲಿ ಆರೇ ತಿಂಗಳ ಹಿಂದೆ‌‌ ಅಧಿಕಾರ ವಹಿಸಿಕೊಂಡ ಮಹಿಳಾ ಅಧಿಕಾರಿಗೆ ಚಮಖಂಡಿಗೆ ವರ್ಗಾವಣೆ ಮಾಡಲಾಗಿದೆ.

ಯಾವುದೇ ಇಲಾಖೆಯನ್ನು ಬಿಡದೆ ವರ್ಗಾವಣೆ ದಂಧೆ ಮಾಡುತ್ತಿದ್ದು ಮಹಿಳೆಯರನ್ನು ಲೆಕ್ಕಿಸದೆ ವರ್ಗಾವಣೆ ಮಾಡುವ ಮೂಲಕ ಅಮಾನವೀಯವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಚುನಾವಣೆ ಪ್ರಚಾರದ ವೇಳೆ ಹಿಂದಿನ ಸರ್ಕಾರವನ್ನು ಮೋದಿ ಕರ್ನಾಟಕ ರಾಜ್ಯದಲ್ಲಿ 10- 20 ಪರ್ಸೆಂಟ್ ನಲ್ಲಿ ರಾಜಕೀಯ ನಡೆಯುತ್ತಿದೆ‌ ಎಂದು ದೂರಿದ್ದರು ಆದರೆ ರಾಜ್ಯ ಸರ್ಕಾರದ‌ ಇಂದಿನ ಪರಿಸ್ಥಿತಿ ಬಗ್ಗೆ ಉತ್ತರಿಸಲಿ ಹಾಗೂ ಇಂದು ರಾಜ್ಯ ಸರ್ಕಾರ ವರ್ಗಾವಣೆ ಪರ್ಸ್ಂಟೇಜ್‌ ದಂಧೆ ಮಾಡುತ್ತಿದೆ ಎಂದು‌ ಜರಿದರು.

ರಾಜ್ಯ ಸರ್ಕಾರ ವರ್ಗಾವಣೆ ದಂಧೆ‌ ಬಿಟ್ಟು ನೆರೆ ಹಾವಳಿ‌ ಪರಿಹಾರ ಕೈಗೊಳ್ಳಲಿ ಬಡ ಜನರ ರೈತರ ಸಮಸ್ಯೆ ಗೆ ಕೂಡಲೆ ಸ್ಪಂದಿಸಲಿ ಎಂದು ಆಗ್ರಹಿಸಿದರು. ಹಾಸನ ಜಿಲ್ಲೆಯಲ್ಲಿ ಇದುವರೆಗೆ 500 ರಿಂದ 700 ಕೋಟಿ ನಷ್ಟ ಸಂಭವಿಸಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಪರಿಹಾರ ಹಣ ಬಂದಿಲ್ಲಾ ಕೇವಲ ವರ್ಗಾವಣೆ ದಂಧೆ ಮಾಡುತಿದ್ದು..ಅದೇ ಹಣ ನೆರೆ ಪರಿಹಾರ ಕ್ಕೆ ಬಳಸುತ್ತಾರ‌ ನೋಡೋಣ ಎಂದು ಟೀಕಿಸಿದರು.

ಹೊಳೆನರಸೀಪುರ ಕ್ಷೇತ್ರ ಒಂದರಲ್ಲಿ 500 ಕೋಟಿಗೂ ಹೆಚ್ಚು ಆಸ್ತಿ ಪಾಸ್ತಿ ಹಾನಿಯಾಗಿದೆ. ಹಲವೆಡೆ ಮನೆಗಳ‌ ಹಾನಿಯಾಗಿದೆ 1250 ಎಕರೆ ತೋಟಗಾರಿಕೆ ಬೆಳೆ 1200 ಎಕರೆ ಗದ್ದೆ ನಾಶವಾಗಿದೆ ಕೂಡಲೇ ಸರ್ಕಾರ ಪರಿಹಾರ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೆ ಆರ್ ಪೇಟೆ ಶಾಸಕರ ಮಾತಿಗೆ ಉತ್ತರಿಸಿದರೆ ನಾವು ಪೊಳ್ಳೆದ್ದು ಹೋಗುತ್ತೇವೆ ಎಂದು ಜರಿದ ಅವರು ದೇವೆಗೌಡರು ಹಾಗೂ ಕುಮಾರಸ್ವಾಮಿ‌ ರಾಜಕೀಯದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ನಮ್ಮಿಂದ ಸಹಾಯ ಪಡೆದು ಇಂದು ಟೀಕಿಸುತ್ತಿರುವವರಿಗೆ ಕಾಲವೇ‌ ಉತ್ತರಿಸಲಿದೆ.

ಹಾಸನದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ನಡೆದಾಡುವ ನಾಯಕರು ರಾಜಧಾನಿ ಹೋದರೆ ಸೂಟು ಬೂಟು ಹಾಕುತ್ತಾರೆ ಇಂತಹ ಜನರ ಬಗ್ಗೆ ನಾ‌ ಮಾತಾಡಿದರೆ ಪೊಳ್ಳೆದ್ದು ಹೋಗುತ್ತೆನೆ ಎಂದು ಸ್ಥಳೀಯ ಬಿಜೆಪಿ‌ ಶಾಸಕರನ್ನು ಉದ್ದೇಶಿಸಿ ರೇವಣ್ಣ ವ್ಯಂಗ್ಯವಾಡಿದರು.

ಯಾರದೇ ತಪ್ಪಿದ್ದರು ತನಿಖೆ ಮಾಡಲಿ ಪೋನ್ ಟ್ಯಾಪಿಂಗ್ ವಿಚಾರ ಸಿ ಬಿ ಐ‌ ತನಿಖೆಗೆ ನೀಡಿದ್ದು ಯಾವುದೇ ಪ್ರತಿಕ್ರಿಯೆ ನೀಡಲ್ಲಾ. ತನಿಖೆಯ ಬಳಿಕ ಯಾರು ಅಪರಾಧಿ ಎಂದು ಸ್ಪಷ್ಟವಾಗಲಿದೆ.
ನಾನು ಸದ್ಯ ನೆರೆ ಹಾವಳಿ‌ ಪರಿಹಾರ ಕಾರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಸರ್ಕಾರ ನಮ್ಮ ಜಿಲ್ಲೆಯ ಜನರನ್ನು ಸರಿಯಾಗಿ ನೋಡಿಕೊಳ್ಳಲಿ ನಮಗೆ ಬೇಕಿರುವುದು ರೈತರ ರಕ್ಷಣೆ ಅಷ್ಟೆ ಎಂದರು.

ಯಾರ ಆರೋಪಕ್ಕು ತಲೆಕೆಡಿಸಿಕೊಳ್ಳೊಲ್ಲಾ ರಾಜಕೀಯ ನಂತರ ಮಾಡೋಣ ಮೊದಲು ನೆರೆ ಪರಿಹಾರ ಕಾರ್ಯ ಮುಖ್ಯ. ದೇವೇಗೌಡರು ತಮ್ಮ ರಾಜಕೀಯ ಇತಿಹಾಸದಲ್ಲಿ ಇಂತಹ ಆರೋಪ ಪ್ರತ್ಯಾರೋಪವನ್ನೆಲ್ಲಾ ಕೇಳಿಯೇ… ನೋಡಿಯೇ ಬಂದಿರುವುದು ಅದಕ್ಕೆಲ್ಲಾ ಉತ್ತರಿಸಿದರೆ ನಾವು ಪೊಳ್ಳಾಗುತ್ತೆವೆ ಎಂದರು.

ಯಾವುದೇ ಚುನಾವಣೆಗೆ ಸನ್ನದ್ಧರಾಗಿದ್ದೇವೆ.86 ರ‌ ವಯಸ್ಸಿನಲ್ಲಿ ಯೂ ದೇವೇಗೌಡರು ರಾಜ್ಯ ಪರ್ಯಟನೆ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ‌ ಹಾಗೂ ನಾನು ಸಹ ಪಕ್ಷ ಬಲವರ್ಧನೆ ಗೆ ಶ್ರಮಿಸುತ್ತಿದ್ದೇನೆ ಎಂದರು. ಕರ್ನಾಟಕ ಪಾಪರ್ ಚೀಟಿ(ದಿವಾಳಿ) ಯಾಗಿದೆಯೇ.. ಎಂದು ಸ್ಪಷ್ಟಪಡಿಸಲಿ ಕಾರಣ ರಾಜ್ಯದ ನೆರೆ ಹಾವಳಿಗೆ ತುತ್ತಾಗಿ ಸೂರು ಕಳೆದುಕೊಂಡವರಿಗೆ ಪಾಯ ಹಾಕಲು ಲಕ್ಷ ಹಣ ಬಿಡುಗಡೆ‌ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಆದರೆ ಯಾವುದೆ ಹಣ ಜಿಲ್ಲೆಗೆ ತಲುಪಿಲ್ಲಾ‌ ಎಂದು ಆರೋಪಿಸಿದರು.

ಕಾರ್ ಸ್ಟ್ಯಾಂಡ್ ನಾಯಕರ ಬೋರ್ಡ್ ರಾಜಕೀಯ ನನಗೆ ಬೇಡ ..ಬಡವರ ಉದ್ದಾರ ಒಂದೆ ನನ್ನ ಗುರಿ ಯಾವುದೇ ಬೋರ್ಡ್ ಹಾಕಿಸಿಕೊಳ್ಳುವ ಚಾಳಿ ನನಗೆ ಇಲ್ಲಾ.. ನಾನು ಜಿಲ್ಲೆಯ ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಉದ್ದೇಶ ಕ್ಷುಲ್ಲಕ ರಾಜಕೀಯ ನನಗೆ ಬೇಡ ಎಂದು ಉತ್ತರಿಸಿದರು.

Facebook Comments

Sri Raghav

Admin