ಬೊಮ್ಮಾಯಿ ನಮ್ಮ ಹಳೆಯ ಸ್ನೇಹಿತ, ರಾಜಕೀಯ ಚರ್ಚೆ ಮಾಡಿಲ್ಲ: ಹೆಚ್.ಡಿ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 15- ಹೊಳೆನರಸೀಪುರದಲ್ಲಿ ಒಂದು ಪೊಲೀಸ್ ಸ್ಟೇಷನ್ ಸ್ಥಾಪನೆ ವಿಚಾರಕ್ಕಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಭೇಟಿ ಮಾಡಿದ್ದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ಗೃಹ ಸಚಿವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು ಪೊಲೀಸ್ ಠಾಣೆ ವಿಚಾರಕ್ಕಾಗಿ ಬಂದಿದ್ದೆ ಅಷ್ಟೇ. ರಾಜಕೀಯ ಚರ್ಚೆ ಮಾಡಿಲ್ಲ ಎಂದರು‌.

ಬೊಮ್ಮಾಯಿ ನಮ್ಮ ಹಳೆಯ ಸ್ನೇಹಿತರು. ನಮ್ಮ ಪಕ್ಷದಲ್ಲಿ ಇದ್ದವರು. ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರವೂ ನನಗೆ ಗೊತ್ತಿಲ್ಲ. 2023ಕ್ಕೆ ಕಾದು ನೋಡೋಣ ಎಂದು ಅವರು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಮಾತನಾಡಿ  ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಳೆ ರಾಜ್ಯಕ್ಕೆ ಬರುತ್ತಿದ್ದಾರೆ. ಇದರಲ್ಲಿ ವಿಶೇಷ ಅರ್ಥ ಕಲ್ಲಿಸುವುದು ಬೇಡ ಎಂದರು‌. ಜೆಡಿಎಸ್ ಶಾಸಕ ರೇವಣ್ಣ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕ್ಷೇತ್ರದ ಕೆಲಸದ ನಿಮಿತ್ತ ಆಗಾಗ ಬರುತ್ತಾ ಇರುತ್ತಾರೆ ಎಂದು ಹೇಳಿದರು.

Facebook Comments