ನಾಡಪ್ರಭು ಕೆಂಪೇಗೌಡರಿಗೆ ದೇವೇಗೌಡರ ಗೌರವ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.27-ನಾಡಿನ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗೌರವ ನಮನ ಸಲ್ಲಿಸಿದ್ದಾರೆ.

ಎಲ್ಲಾ ವರ್ಗಗಳ ಏಳಿಗೆಗಾಗಿ ಶ್ರಮಿಸಿ, ಕೋಟೆ- ಪೇಟೆಗಳನ್ನು ನಿರ್ಮಿಸಿ,ಕೆರೆಕಟ್ಟೆಗಳನ್ನು ಕಟ್ಟಿಸಿ, ನಾಡಿನ ಜನಮಾನಸದಲ್ಲಿ ಸದಾ ಅಚ್ಚಳಿಯದೆ ಉಳಿದಿರುವ ಬೆಂಗಳೂರಿನ ನಿರ್ಮಾತೃ ಸಮರ ವೀರ ನಾಡಪ್ರಭು ಕೆಂಪೇಗೌಡರ ಜಯಂತಿಯಾದ ಇಂದು ಅವರಿಗೆ ನನ್ನ ಗೌರವ ನಮನವನ್ನು ಸಲ್ಲಿಸುತ್ತೇನೆ ಎಂದು ಗೌಡರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಯುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು, ಕರ್ನಾಟಕ ಜಗತ್ತಿನ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಿರುವ ‘ನಮ್ಮ ಬೆಂಗಳೂರು’ ಹಿರಿಯ ಕೆಂಪೇಗೌಡರ ಛಲ, ನಾಯಕತ್ವ ಮತ್ತು ಮುಂದಾಲೋಚನೆಯ ಪ್ರತಿಫಲವಾಗಿದ್ದು, ಎಲ್ಲರಿಗೂ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳನ್ನು ಟ್ವಿಟರ್ ನಲ್ಲಿ ಕೋರಿದ್ದಾರೆ.

Facebook Comments

Sri Raghav

Admin