ಕುತೂಹಲ ಕೆರಳಿಸಿದ ಬೊಮ್ಮಾಯಿ-ಎಚ್‍ಡಿಕೆ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬೆನ್ನಲ್ಲೇ ಇವರಿಬ್ಬರು ಭೇಟಿ ಯಾಗಿರುವುದು ರಾಜಕೀಯ ವಾಗಿ ಮಹತ್ವ ಪಡೆದು ಕೊಂಡಿದೆ.

ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾಗಲೂ ರಾಜಕೀಯವಾಗಿ ಹಲವು ಚರ್ಚೆಗಳು ನಡೆದಿದ್ದವು.  ಭೇಟಿ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮ್ಮ ಹಾಗೂ ಗೃಹ ಸಚಿವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸ ಬೇಕಿಲ್ಲ. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಸೌಜನ್ಯದ ಭೇಟಿಯಾಗಿತ್ತು ಎಂದು ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಕಾಲದಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ನಡುವೆ ಆತ್ಮೀಯತೆ ಇದೆ. ರಾಜಕೀಯವೇ ಬೇರೆ. ವೈಯಕ್ತಿಕವಾಗಿ ಒಂದು ಕುಟುಂಬದಂತೆ ಇದ್ದೇವೆ. ಕೆಲವೊಂದು ವಿಚಾರವನ್ನು ಸಮಾಲೋಚನೆ ಮಾಡಲು ಭೇಟಿಯಾಗಿದ್ದಾಗಿ ಅವರು ತಿಳಿಸಿದರು.

Facebook Comments