ಅವಿಶ್ವಾಸ ನಿರ್ಣಯದ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿಲ್ಲ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯದ ಬಗ್ಗೆ ಇದುವರೆಗೂ ನಮ್ಮೊಂದಿಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ಚರ್ಚೆ ಮಾಡಿದರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಏಕೆ ನಿರ್ಣಯ ಮಂಡಿಸಿದ್ದಾರೋ ಗೊತ್ತಿಲ್ಲ. ನೆರೆ ಹಾವಳಿಯಂತಹ ಸಂಕಷ್ಟದ ಸಮಯದಲ್ಲಿ ಗೊಂದಲ ಮೂಡಿಸುವಂತಹ ನಡೆಗಳು ಬೇಕೆ ಎಂದು ಪ್ರಶ್ನಿಸಿದರು.

ಯಾರ ಕುಟುಂಬದ ಮೇಲೆ ಭ್ರಷ್ಟಾಚಾರ ಬಂದಿಲ್ಲ ಎಂದ ಅವರು, ಎಲ್ಲರ ಮೇಲೂ ಭ್ರಷ್ಟಾಚಾರದ ಆರೋಪವಿದೆ. ಹೋರಾಟ ಮಾಡಿ ಸಾಕಾಗಿದೆ. ಭ್ರಷ್ಟಾಚಾರದ ವಿಚಾರಗಳು ಎಲ್ಲಿಗೆ ಹೋಗಿ ಅಂತ್ಯಕಾಣುತ್ತವೆ ಎಂಬುದು ಗೊತ್ತಿದೆ ಎಂದರು.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಜೆಡಿಎಸ್ ಇದ್ದು, ಈಗಾಗಲೇ ಪ್ರತಿಭಟನೆಯನ್ನೂ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಾವು ಪ್ರತಿಭಟಿಸುತ್ತಿದ್ದೇವೆ. ಆತುರವಾಗಿ ಈ ಕಾಯ್ದೆಗೆ ಸುಗ್ರಿವಾಜ್ಞೆ ತರುವ ಅವಶ್ಯಕತೆ ಏನಿತ್ತು? ರೈತರು ಮತ್ತು ಶಾಸಕರ ಜತೆ ಚರ್ಚೆ ಮಾಡಬೇಕಿತ್ತು ಎಂದು ಹೇಳಿದರು.

Facebook Comments

Sri Raghav

Admin