ಜಾಗೃತರಾಗಿರುವಂತೆ ಜನರಲ್ಲಿ ಎಚ್ಡಿಕೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.29- ಯಾವುದೇ ಕಾರಣಕ್ಕೂ ಮತ್ತೊಂದು ಸಾವಿನ ಅಲೆಗೆ ಅವಕಾಶ ಕೊಡುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೋವಿಡ್-19ರ ಮೊದಲ ಅಲೆಯ ಆತಂಕ, ಎರಡನೇ ಅಲೆ ಸೃಷ್ಟಿಸಿದ ನರಕಯಾತನೆ ಎಂಥದ್ದು ಎಂದು ನಾವೆಲ್ಲ ಕಂಡು ಅನುಭವಿಸಿದ್ದೇವೆ.

ಆಸ್ಪತ್ರೆಯಲ್ಲಿ ಬೆಡ್ ಸಿಗದೇ, ಬದುಕುಳಿಯಲು ಪ್ರಾಣವಾಯುವೂ ಸಿಗದೇ ಉಸಿರು ಚೆಲ್ಲಿದ ಜೀವಗಳನ್ನು ನೆನೆಸಿಕೊಂಡರೆ ಕಣ್ಣುಗಳ ಕಟ್ಟೆಯೊಡೆಯುತ್ತದೆ. ಅಂಥ ಸಾವಿನ ಮೆರವಣಿಗೆ ಮತ್ತೆ ಬೇಡ. ಯಾರೂ ಎಚ್ಚರ ತಪ್ಪುವುದು ಬೇಡ ಎಂದಿದ್ದಾರೆ. ಕೊರೋನಾ ಹೊಸ ತಳಿ ಓಮಿಕ್ರಾನ್ 30ಕ್ಕೂ ಹೆಚ್ಚು ರೂಪಾಂತರ ಹೊಂದಿರುವ ವರದಿ ಇದೆ. ಭಾರತವೂ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಮಾರಕ ಮಾರಿ ಪುನಃ ಅಬ್ಬರಿಸುತ್ತಿದೆ.

ಕೇಂದ್ರ ಸರಕಾರ, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎಲ್ಲೆಡೆ ಕೆನ್ನಾಲಗೆ ಚಾಚಿರುವ ಕೊರೋನಾ ಹೊಸ ತಳಿಯನ್ನೆದುರಿಸಲು ನಮಗೊಂದಿಷ್ಟು ತಾಳ್ಮೆ ಬೇಕಿದೆ ಎಂದು ಹೇಳಿದ್ದಾರೆ.

ಕೊರೋನ ಶಿಷ್ಟಾಚಾರ ಪಾಲಿಸೋಣ. ಮಾಸ್ಕ್, ಸ್ಯಾನಿಟೈಸ್, ದೈಹಿಕ ಅಂತರ ಪಾಲನೆ ಮಹಾಮಾರಿ ನಿಯಂತ್ರಣಕ್ಕಿರುವ ಸರಳಸೂತ್ರಗಳು. ಅಗತ್ಯವಿದ್ದರೆ ಓಡಾಡಿ. ಹೊರಗೆ ಬಂದಾಗ ಮುನ್ನೆಚ್ಚರಿಕೆ ಜತೆಗೆ, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅವರು ಕೋರಿದ್ದಾರೆ.

Facebook Comments

Sri Raghav

Admin