ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಪ್ರಸ್ತಾಪ, ಜೆಡಿಎಸ್ ನಿಲುವೇನು..?
ಬೆಂಗಳೂರು, ಸೆ. 25- ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ ನಿನ್ನೆ ಸಿಎಂ ಯಡಿಯೂರಪ್ಪ ಹಾಗೂ ಅವರ ಮಂತ್ರಿಮಂಡಲದ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಾಡಿರುವ ಬಗ್ಗೆ ನಮ್ಮ ಪಕ್ಷ ಯಾವ ನಿಲುವು ತಳಿಯಬೇಕೆಂಬುದನ್ನು ಇಂದು ತೀರ್ಮಾನ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಕೆ ಕುಮಾರಸ್ವಾಮಿ ತಿಳಿಸಿದರು.
ಈ ಸಂಜೆಯೊಂದಿಗೆ ಮಾತನಾಡಿದ ಅವರು ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್ ಪಕ್ಷ ನಮ್ಮ ಪಕ್ಷದ ಸಹಕಾರ ಕೋರಿದೆ. ಅದರೆ ನೋಟಿಸ್ ನೀಡುವ ಮುನ್ನ ಪಕ್ಷದ ವರಿಷ್ಠರು, ನಾಯಕರೊಂದಿಗೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ.
ನೋಟಿಸ್ ಕೊಟ್ಟ ನಂತರ ಸಹಕಾರ ಕೇಳುತ್ತಿದ್ದಾರೆ. ಹೀಗಾಗಿ ಯಾವ ನಿಲುವು ತಿಳಿಯಬೇಕು ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದಲ್ಲಿ ದುರಾಡಳಿತ, ಭ್ರಷ್ಟಚಾರವಾಗಿರುವುದು ನಿಜ. ಇವರ ಬಗ್ಗೆ ಜನ ಬೇಸತ್ತಿದ್ದಾರೆ. ಕೊನೆಯದಾಗಿ ಅವಿಶ್ವಾಸ ನಿರ್ಣಯದ ಅಸ್ತ್ರವನ್ನು ಬಳಸಲಾಗುತ್ತಿವೆ. ಕಾಂಗ್ರೆಸ್ ನವರು ನೋಟಿಸ್ ನೀಡುವ ಮುನ್ನವೇ ಕೇಳಿದ್ದರೆ ನಮ್ಮ ಪಕ್ಷದ ನಿಜವನ್ನು ಹೇಳಬಹುದಿತ್ತು. ನಾಳೆ ವಿಚಾರದ ಚರ್ಚೆ ಬರಬಹುದು ಅ ಸಂದರ್ಭದಲ್ಲಿ ನಾವು ಭಾಗವಹಿಸುತ್ತೇವೆ ಎಂದು ಎಚ್.ಕೆ.ಕುಮಾರಸ್ವಾಮಿ ಹೇಳಿದರು.