ಗುಲಾಂ ನಬಿ ಆಜಾದ್ ಉಚ್ಛಾಟನೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಆ.29- ಎಐಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಧ್ವನಿ ಎತ್ತಿದ್ದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಗಾಂಯೇತರ ಕುಟುಂಬದವರಿಗೆ ಅಧ್ಯಕ್ಷ ಪಟ್ಟ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಯವರಿಗೆ 23 ಕಾಂಗ್ರೆಸಿಗರು ಪತ್ರ ಬರೆಯಲು ಕಾರಣವಾಗಿರುವ ಆಜಾದ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಮುಖಂಡ ನಸೀಬ್ ಪಠಾಣ್ ಒತ್ತಾಯಿಸಿದ್ದಾರೆ.

ಪಕ್ಷದ ತತ್ವ ಸಿದ್ಧಾಂತಗಳನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿಸಲು ಮುನ್ನುಡಿ ಬರೆದಿದ್ದ ಆಜಾದ್ ಅವರನ್ನು ಪಕ್ಷದಿಂದ ಮುಕ್ತಗೊಳಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ.

ಪಠಾಣ್ ಅವರು ಆಜಾದ್ ವಿರುದ್ಧ ನಡೆಸಿರುವ ವಾಗ್ದಾಳಿ ಬಗ್ಗೆ ನನಗೇನು ತಿಳಿದಿಲ್ಲ. ನಾನು ಅನಾರೋಗ್ಯಕ್ಕೆ ಈಡಾಗಿರುವುದರಿಂದ ಇತ್ತ ಗಮನ ಹರಿಸಿಲ್ಲ ಎಂದು ಉತ್ತರಪ್ರದೇಶ ಕಾಂಗ್ರೆಸ್ ಮಾಧ್ಯಮ ಸಮನ್ವಯಾಕಾರಿ ಲಲನ್ ಕುಮಾರ್ ತಿಳಿಸಿದ್ದಾರೆ.

2017ರ ಉತ್ತರಪ್ರದೇಶ ಚುನಾವಣೆಯ ಉಸ್ತುವಾರಿಯನ್ನು ಗುಲಾಂ ನಬಿ ಆಜಾದ್ ಅವರು ವಹಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾದ ನಂತರ ಅವರು ತಮ್ಮ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Facebook Comments

Sri Raghav

Admin